Published in the Sunday Vijay Karnataka on 13 April, 2025
ಕಳೆದ ವರ್ಷದ ಮೇ ಹಾಗೂ ಜೂನ್ ತಿಂಗಳುಗಳ ಅವಧಿಯಲ್ಲಿ ನಾನು ಎರಡು ದಿನಪತ್ರಿಕೆಗಳಿಗೆ ವಾರದ ಲೇಖನಗಳನ್ನು ಬರೆಯಲಿಲ್ಲ. ಆಗ, “ವಾವ್! ಬರವಣಿಗೆಗೆ ವಿಶ್ರಾಂತಿ. ಡೆಡ್‌ಲೈನಿನ ಒತ್ತಡವಿಲ್ಲ. ಮಸ್ತ್ ಮಜಾ ಮಾಡೋಣ!” ಎಂಬ ಮನಃಸ್ಥಿತಿ ಇತ್ತು. ಆದರೆ, ಪುನಃ ಬರೆಯಲು ಆರಂಭಿಸಿದಾಗ ನನಗಾದ ಖುಷಿಯು ವಿರಾಮದ ಅವಧಿಯಲ್ಲಿನ ಸಂತೋಷವನ್ನು ಮೀರಿದುದಾಗಿತ್ತು
“ಏಕೆ ಅಷ್ಟೊಂದು ಬಿಜಿ ಆಗಿದ್ದೀರಿ? ಸ್ವಲ್ಪ ಆರಾಮವಾಗಿರಿ!”- ಇದು ಇತ್ತೀಚಿನ ದಿನಗಳಲ್ಲಿ ನನ್ನನ್ನು ಕಾಡುತ್ತಿರುವ ತಪ್ಪಿತಸ್ಥ ಭಾವನೆಯಾಗಿದೆ. ನಮ್ಮಗಳ ಬದುಕು ಒಂದಾದ ಮೇಲೆ ಮತ್ತೊಂದರಂತೆ ವಿವಿಧ ತಪ್ಪುಗಳನ್ನೆಸಗಿದ ಭಾವನೆಗಳಲ್ಲಿ ಸಿಲುಕಿ ಸಾಗುತ್ತಿರುತ್ತದೆ. ಬಹಳಷ್ಟು ಸಂದರ್ಭಗಳಲ್ಲಿ ನಾವು ಮಾಡುತ್ತಿರುವುದು ಸರಿಯೋ ತಪ್ಪೋ ಎಂಬ ಆಂತರಿಕ ತಾಕಲಾಟದ ನಡುವೆ ನಾವು ಸಿಲುಕಿರುತ್ತೇವೆ.
ನನ್ನ ನೆರೆಯಲ್ಲಿರುವ ರೀನಾ ಮತ್ತು ನಾನು ನಮ್ಮ ಹೌಸಿಂಗ್ ಸೊಸೈಟಿಯಲ್ಲಿರುವ ಬಹುತೇಕ ಮಹಿಳೆಯರಂತೆ ಒಂದೇ ಓರಗೆಯವರು. ನಮ್ಮದೀಗ “ದಂಪತಿ ಸೀಮಿತ ಕುಟುಂಬ” ಎನ್ನಬಹುದು. ನಮ್ಮಗಳ ಮಕ್ಕಳು ಬೇರೆಡೆ ನೆಲಸಿ ತಮ್ಮ ಸಂಸಾರ ನಡೆಸುತ್ತಿದ್ದರೆ, ನಾವುಗಳು ನಮ್ಮ ಬದುಕು ಸಾಗಿಸುತ್ತಿದ್ದೇವೆ. ಪ್ರತಿ ದಂಪತಿಯೂ ಬದುಕಿನ ಈ ಎರಡನೇ ಘಟ್ಟವನ್ನು ತಮ್ಮದೇ ರೀತಿಯಲ್ಲಿ ಸಂತೋಷದಿAದ ಆರಂಭಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿ ಕೆಲವರು ಉದ್ಯೋಗಗಳಲ್ಲಿದ್ದರೆ, ಇನ್ನು ಕೆಲವರು ತಮ್ಮದೇ ವ್ಯಾಪಾರೋದ್ದಿಮೆಗಳನ್ನು ಹೊಂದಿದ್ದಾರೆ. ಉದ್ಯೋಗದಿಂದ ನಿವೃತ್ತರಾದವರು, ನಂತರ ಕನ್ಸಲ್ಟೆನ್ಸಿಯಲ್ಲೋ ಅಥವಾ ಸಾಮಾಜಿಕ ಕಾರ್ಯದಲ್ಲೋ ತೊಡಗಿಸಿಕೊಂಡು ಬಿಜಿಯಾಗಿದ್ದಾರೆ. ನಮ್ಮಂತೆ ವ್ಯಾಪಾರೋದ್ದಿಮೆಯಲ್ಲಿ ಇರುವವರು ಜವಾಬ್ದಾರಿಗಳನ್ನು ಕ್ರಮೇಣವಾಗಿ ಮುಂದಿನ ಪೀಳಿಗೆಯವರಿಗೆ ವರ್ಗಾಯಿಸುವ ಹಂತದಲ್ಲಿದ್ದು, ಏನೋ ಒಂದು ಬಗೆಯ ಸಂತೃಪ್ತ ಭಾವದೊಂದಿಗೆ ಮುನ್ನಡೆಯುತ್ತಿದ್ದೇವೆ. ಆದರೂ, ಕಾರ್ಯನಿರತವಾಗಿರುವುದು ಎಂಬುದು ಎಂದಿಗೂ ಮುಗಿಯುವಂತಹದ್ದಲ್ಲ. ಕಾರ್ಯಸ್ವರೂಪ ಬದಲಾವಣೆಯಾಗಿದ್ದು, ಇದು ಹೆಚ್ಚಿನ ಕುತೂಹಲವನ್ನು ಹಾಗೂ ಹೊಸ ಸಂಗತಿಗಳ ಬಗ್ಗೆ ಪ್ರಯೋಗಶೀಲತೆಯಿಂದಿರುವ ತುಡಿತವನ್ನು ಉಂಟುಮಾಡಿದೆ.
ಅರವತ್ತರ ಪ್ರಾಯದಲ್ಲಿ ಕೂಡ ನಾವು ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನವೂ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಬಿಜಿಯಾಗಿರುತ್ತೇವೆ. ಕೋವಿಡ್ ಆದಮೇಲೆ ನಾವು ಶನಿವಾರದಂದು ಆಫೀಸಿಗೆ ಹೋಗದಿರಲು ನಿರ್ಧರಿಸಿದೆವು. 35 ವರ್ಷಗಳ ಕಾಲ “ಕರ್ಮಣ್ಯೇವಾಧಿಕಾರಸ್ಥೇ” ಎಂಬ ಮನೋಭಾವದೊಂದಿಗೆ ದುಡಿದ ಮೇಲೆ ಶನಿವಾರದಂದು ರಜೆ ತೆಗೆದುಕೊಳ್ಳಬಹುದಾದ ಅವಕಾಶ ನಮಗೆ ಒದಗಿಬಂದಿತ್ತು. ಅಷ್ಟಾದರೂ, ನನ್ನೊಳಗಿನ ಭಾರತೀಯ ಮಹಿಳಾ ವ್ಯಾಪಾರೋದ್ಯಮಿಯ ಮನಸ್ಸನ್ನು ಕೆಲವೊಮ್ಮೆ ಪಶ್ಚಾತ್ತಾಪದ ಭಾವನೆ ಮುತ್ತಿಕೊಳ್ಳುತ್ತದೆ. ಏಕೆಂದರೆ, ನಮ್ಮ ಆಫೀಸುಗಳು ಶನಿವಾರವೂ ತೆರೆದಿದ್ದು ತಂಡದವರು ತುಂಬಾ ಬಿಜಿಯಾಗಿರುತ್ತಾರೆ. ಬಹುತೇಕ ಪ್ರವಾಸಾಕಾಂಕ್ಷಿಗಳು ನಮ್ಮ ಕಚೇರಿಗಳಿಗೆ ಭೇಟಿ ನೀಡುವುದು ವಾರಾಂತ್ಯದಲ್ಲೇ. ಹೀಗಾಗಿ, ಕಚೇರಿಯಲ್ಲಿ ಶನಿವಾರದಂದು ದಟ್ಟಣೆ ಹೆಚ್ಚಾಗಿಯೇ ಇರುತ್ತದೆ. ಆಗಾಗ ನನ್ನ ಮನಸ್ಸಿನಲ್ಲಿ ಇವೆಲ್ಲಾ ಸಂಗತಿಗಳು ಹರಿಯತೊಡಗಿ, “ನಮ್ಮ ತಂಡದವರೆಲ್ಲಾ ಇವತ್ತು ಕೆಲಸ ಮಾಡುತ್ತಿದ್ದಾರೆ. ಆದರೆ, ನಾನು ಇಲ್ಲಿ ಮನೆಯಲ್ಲಿದ್ದೇನೆ! ಇದೆಷ್ಟು ಸರಿ?” ಎಂಬ ಪ್ರಶ್ನೆ ಮೂಡುತ್ತದೆ. ಮೈಗೂಡಿಸಿಕೊಂಡ ಹಳೆಯ ಅಭ್ಯಾಸಗಳ ಪ್ರಭಾವವೇ ಹೀಗೇನೋ ಎಂದೂ ಅನ್ನಿಸುತ್ತದೆ. ಅಂತಹ ಸಂದರ್ಭದಲ್ಲಿ, ಯಾರಾದರೂ ಸ್ನೇಹಿತರು ಕರೆ ಮಾಡಿ, “ಎಲ್ಲಾದರೂ ಜೊತೆಯಲ್ಲಿ ಊಟಕ್ಕೆ ಹೊರಗೆ ಹೋಗೋಣ” ಎಂದರೆ, ನಾನು ತಕ್ಷಣವೇ ತಪ್ಪೆಸಗುತ್ತಿರುವ ಭಾವನೆಯ ಎಳೆಯೊಂದಿಗೆ, “ಇಲ್ಲಪ್ಪ, ನನಗೆ ಆಫೀಸ್ ಕೆಲಸ ಇದೆ, ಮೀಟಿಂಗುಗಳು ಇವೆ” ಎನ್ನುವುದೂ ಉಂಟು. ಆ ತಪ್ಪಿತಸ್ಥ ಭಾವನೆಯನ್ನು ಮರೆಯಲು ಸಾಕಷ್ಟು ಪ್ರಯತ್ನವನ್ನು ಕೂಡ ಮಾಡಬೇಕಾಗುತ್ತದೆ.
ಕಳೆದ ವರ್ಷದ ಮೇ ಹಾಗೂ ಜೂನ್ ತಿಂಗಳುಗಳ ಅವಧಿಯಲ್ಲಿ ನಾನು ಎರಡು ದಿನಪತ್ರಿಕೆಗಳಿಗೆ ವಾರದ ಲೇಖನಗಳನ್ನು ಬರೆಯಲಿಲ್ಲ. “ವಾವ್! ಬರವಣಿಗೆಗೆ ವಿಶ್ರಾಂತಿ. ಡೆಡ್‌ಲೈನಿನ ಒತ್ತಡವಿಲ್ಲ. ಮಸ್ತ್ ಮಜಾ ಮಾಡೋಣ!” ಎಂಬ ಮನಃಸ್ಥಿತಿ. ಆದರೆ, ಆ ಒಂದೂವರೆ ತಿಂಗಳ ಬರವಣಿಗೆ ವಿಶ್ರಾಂತಿಯ ನಂತರ, ಬರವಣಿಗೆಯ ಖುಷಿಯು ವಿಶ್ರಾಂತಿಯ ಖುಷಿಗಿಂತ ಬಹಳ ಮಿಗಿಲಾದುದು ಎಂದು ನನಗೆ ಮನವರಿಕೆಯಾಯಿತು. ನನ್ನ ಪಾಲಿಗೆ, ಈ ಸಣ್ಣ ಅವಧಿಯ ಸ್ಲೋ ಡೌನ್‌ನಿಂದ ಒಳ್ಳೆಯದೇ ಆಯಿತೇ ಅಥವಾ ಕಾಲಮಿತಿಯೊಳಗೆ ಲೇಖನಗಳನ್ನು ಬರೆಯುವುದು ನಿಜವಾಗಿಯೂ ಮಿಗಿಲಾದುದೇ?
ಪ್ರತಿಯೊಂದು ಲೇಖನ ಬರೆಯುವುದಕ್ಕೂ ಕನಿಷ್ಠ ಮೂರು ಗಂಟೆಗಳಷ್ಟು ಸಮಯ ಹಿಡಿಯುತ್ತದೆ. ಹಾಗಿದ್ದರೆ, ಆ ಆರು ವಾರಗಳ ಅವಧಿಗಳಲ್ಲಿ ನನಗೆ ಹಾಗೆ ಉಳಿದ ಅಷ್ಟು ಸಮಯದಲ್ಲಿ ನಾನೇನು ಮಾಡಿದೆ? ನಿಜವಾಗಿ ಹೇಳಬೇಕೆಂದರೆ, ಅಷ್ಟು ಸಮಯವು ಹೀಗೆ ಬಂದು ಹಾಗೆ ಹೋಯಿತು ಎನ್ನಬಹುದು. ಕಚೇರಿ ಕೆಲಸ, ಬರವಣಿಗೆ, ಪ್ರಪಂಚ ಪರ್ಯಟನೆ, ಒಟಿಟಿ ಮನೋರಂಜನೆ, ಅಪರೂಪಕ್ಕೊಮ್ಮೆ ಹೊರಗೆ ಭೋಜನ, ಥಿಯೇಟರ್‌ನಲ್ಲಿ ಸಿನಿಮಾ ಇವೆಲ್ಲವೂ ಮುಂಚೆಯೂ ನಡೆಯುತ್ತಿದ್ದವು; ಈಗಲೂ ಆಗುತ್ತಿವೆ.
ಈಗ ನಮ್ಮ ಮೊಮ್ಮಗಳು ರಯಾ (ನಮ್ಮ ನೀಲ್ ಮತ್ತು ಹೆತಾ ಅವರ ಮಗಳು) ನಮ್ಮೊಂದಿಗಿದ್ದು, ನಾವು ಅವಳೊಂದಿಗೆ ವಾರಕ್ಕೆ ಮೂರು ದಿನಗಳನ್ನಾದರೂ ಕಳೆಯಬೇಕು, ಈ ಸಂದರ್ಭವನ್ನು ಸ್ಮರಣೀಯ ಅವಧಿಯನ್ನಾಗಿಸಿಕೊಳ್ಳಬೇಕು ಎಂದುಕೊಂಡಿದ್ದೇವೆ. ನಮ್ಮ ಕರ್ತವ್ಯಗಳು ಹೆಚ್ಚಾಗಿದ್ದರೂ ಕೆಲಸಗಳು ಆಗುತ್ತಿವೆ. ಅವು ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲೇ ಆಗುತ್ತಿವೆ. ಯಾವಾಗ ಜವಾಬ್ದಾರಿಗಳು ಹೆಚ್ಚಾಗಿರುತ್ತವೋ ಆಗ ವ್ಯಕ್ತಿಯು ಹೆಚ್ಚು ಕ್ರಮಬದ್ಧವೂ ದಕ್ಷತೆಯುಳ್ಳವನೂ ಆಗುತ್ತಾನೆ ಎಂಬುದನ್ನು ಇತ್ತೀಚೆಗೆ ಬಲವಾಗಿ ನಂಬುತ್ತೇನೆ. ಯಾರೋ ಒಬ್ಬರು ಒಮ್ಮೆ, “ಯಾರು ಅತ್ಯಂತ ಬಿಜಿಯಾಗಿರುತ್ತಾರೋ ಅವರು ಅತ್ಯಂತ ಹೆಚ್ಚಿನದನ್ನು ಮಾಡುತ್ತಾರೆ” ಎಂದು ಹೇಳಿದ್ದರು. ಇದನ್ನು ನಾವು ನಮ್ಮ ಜೀವನದಲ್ಲಿ ಬಹಳಷ್ಟು ಸಲ ಅನುಭವಿಸಿಯೂ ಕಂಡಿದ್ದೇವೆ.
2023ರ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಾವು ಸ್ಪೇನ್ ಹಾಗೂ ಇಟಲಿಯಲ್ಲಿದ್ದೆವು. ಕೋವಿಡ್ ನಂತರ ಪ್ರವಾಸೋದ್ಯಮ ಕ್ಷೇತ್ರವು ನಿಧಾನವಾಗಿ ಹಳಿ ಮೇಲಕ್ಕೆ ವಾಪಸ್ಸು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿತು. ಆಗ, “ದಿನಪತ್ರಿಕೆಗಳಲ್ಲಿ ನಮ್ಮ ಅಡ್ವರ್ಟೋರಿಯಲ್‌ಗಳನ್ನು ಪುನಃ ಶುರುಮಾಡಿ ನಮ್ಮ ಪ್ರವಾಸಿಗರೊಂದಿಗೆ ಮರುಸಂಪರ್ಕಗೊಳ್ಳಬೇಕು” ಎಂದು ನಿರ್ಧರಿಸಿದೆವು. ಇದು 25 ವರ್ಷಗಳಿಂದ ನಾವು ಅನುಸರಿಸುತ್ತಾ ಬಂದಿರುವ ಉಲ್ಲೇಖವಾಗಿದ್ದರೂ, ಕೋವಿಡ್‌ನಿಂದಾಗಿ ಇದಕ್ಕೆ ಅಡಚಣೆ ಎದುರಾಗಿತ್ತು.
ಈ ಬಾರಿ ನಮ್ಮ ವೈಖರಿ ಬದಲಾವಣೆ ಕಂಡಿತ್ತು. ಪ್ರವಾಸದ ಅವಧಿಯಲ್ಲಿ ನಾನು ಲೇಖನ ವಿನ್ಯಾಸಗಳ ಬಗ್ಗೆ ನಮ್ಮ ಮಾರ್ಕೆಟಿಂಗ್ ಟೀಮ್ ಜೊತೆ ಕೆಲಸ ಮಾಡಿದೆ. ಒಂದು ದಿನಪತ್ರಿಕೆಯಲ್ಲಿ ಅರ್ಧ ಪುಟದ ಲೇಖನವಿದ್ದರೆ, ಮತ್ತೊಂದರಲ್ಲಿ ಪೂರ್ತಿ ಪುಟದ ಲೇಖನ. ಹೀಗಾಗಿ, ನಾವು ಒಂದೂವರೆ ಪುಟಗಳಷ್ಟು ಲೇಖನ ಬರೆಯಬೇಕಿತ್ತು. ಬಿಡುವಿರದ ಬಿಸಿನೆಸ್ ಪ್ರವಾಸ, ಮೀಟಿಂಗುಗಳು, ಸಹವರ್ತಿಗಳ ಜೊತೆ ಚರ್ಚೆ, ಹೋಟೆಲುಗಳ ಪರಿಶೀಲನೆ ಇತ್ಯಾದಿಗಳ ನಡುವೆಯೂ ನಾವು ಈ ಎರಡೂ ಲೇಖನ ಸರಣಿಗೆ ಚಾಲನೆ ನೀಡಿದೆವು. ಹೀಗೆ ಪ್ರಾರಂಭವಾದ ಲೇಖನ ಸರಣಿ ಈಗಲೂ ಮುಂದುವರಿದಿದೆ.
ಅAದAತೆ, ಈಗ ನಾನು ಎರಡು ದಿನಪತ್ರಿಕೆಗಳಿಗಾಗಿ ಎರಡು ಲೇಖನಗಳನ್ನು ಬರೆಯುತ್ತಿರುವೆ. ನೀಲ್ ಮೂರು ಹಾಗೂ ಸುನೀಲಾ ಎರಡು ಲೇಖನಗಳನ್ನು ಬರೆಯುತ್ತಾರೆ. ಸದ್ಯಕ್ಕೆ ನನ್ನ ಜವಾಬ್ದಾರಿಯು ವ್ಯವಸ್ಥೆಯನ್ನು ರೂಪಿಸುವುದಾಗಿದ್ದು, ಅದರ ಕಾರ್ಯನಿರ್ವಹಣೆಯನ್ನು ಬೇರೆಯವರು ನೋಡಿಕೊಳ್ಳುತ್ತಾರೆ.
ಗಮನಿಸಬೇಕಾದುದು ಏನೆಂದರೆ, ಬಿಡುವಿಲ್ಲದ ಇಟಲಿ-ಸ್ಪೇನ್ ಪ್ರವಾಸದ ನಡುವೆಯೂ ನಾವು ಲೇಖನ ಸರಣಿ ಬರವಣಿಗೆಗೆ ಚಾಲನೆ ನೀಡಿದೆವು, ಜಾಹೀರಾತು ಅಭಿಯಾನ ಆರಂಭಿಸಿದೆವು. ಇವೆಲ್ಲವನ್ನೂ ನಾವು ಪ್ರಯಾಸಗೊಳ್ಳದೆ ಅಥವಾ ಉದ್ವೇಗಕ್ಕೊಳಗಾಗದೆ ಮಾಡಿದೆವು. ಹೌದು, ನಾವು ಬಿಡುವೇ ಇಲ್ಲದಷ್ಟು ಬಿಜಿ ಇದ್ದುದೇನೋ ನಿಜವೇ. ಆದರೆ, ಅವೆಲ್ಲದರ ನಡುವೆಯೂ ನಾವು ಹಿಂದೆAದೂ ಮಾಡಿರದಷ್ಟು ಹೆಚ್ಚಿನದನ್ನು ಕೂಡ ಮಾಡಿದೆವು.
“ವಯಸ್ಸು ಹೆಚ್ಚುತ್ತಾ ಹೋದಂತೆ ನಿಧಾನವಾಗಿ” ಎಂಬ ಮಾತಿನ ಅರ್ಥವೇನು ಎಂಬುದನ್ನು ಕಂಡುಕೊಳ್ಳಲು ನಾನು ಈಗಲೂ ಪ್ರಯತ್ನಿಸುತ್ತಿದ್ದೇನೆ. ಹೀಗೆಂದರೆ, ಕೆಲಸವನ್ನು ಪೂರ್ತಿಯಾಗಿ ನಿಲ್ಲಿಸಿಬಿಡಬೇಕು ಎಂದಾಗಲೀ ಅಥವಾ ವೇಗವನ್ನು ದಿಢೀರನೆ ತಗ್ಗಿಸಬೇಕು ಎಂದಾಗಲೀ ಅಲ್ಲ ಎಂಬುದು ಕ್ರಮೇಣ ನನಗೆ ಅರ್ಥವಾಗುತ್ತಿದೆ. ಕಾರ್ಯಸ್ವರೂಪವನ್ನು ಬದಲಾಯಿಸಿ ಎಂಬುದೇ ಇದರ ನಿಜವಾದ ಅರ್ಥವಾಗಿದೆ. ಮುಂಚೆ ನಾನು ಟೂರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದೆ. ಈಗಲೂ ಅದಷ್ಟಕ್ಕೆ ಮಾತ್ರ ನಾನು ಸೀಮಿತಗೊಂಡರೆ ತಪ್ಪೆಸಗಿದಂತಾಗುತ್ತದೆ. ಅದಕ್ಕೆ ಬದಲಾಗಿ, ಪ್ರವಾಸೋದ್ಯಮ ಕ್ಷೇತ್ರದಲ್ಲಿನ ನನ್ನ 41 ವರ್ಷಗಳ ಅನುಭವವನ್ನು ಏನಾದರೂ ಹೊಸತನ್ನು ಸೃಷ್ಟಿಸಲು ಬಳಸಿಕೊಳ್ಳಬಲ್ಲೆನಾದರೆ ಅದು ಕೂಡ ಒಂದು ನಮೂನೆಯಲ್ಲಿ ‘ನಿಧಾನಿಸಿದಂತೆ’ಯೇ (ಸ್ಲೋ ಡೌನ್) ಆಗುತ್ತದೆ.
ಕಳೆದ 41 ವರ್ಷಗಳ ಬಗ್ಗೆ ಅವಲೋಕಿಸುವುದು, ಅದರಿಂದ ಕಲಿಯುವುದು, ಆ ಕಲಿಕೆಯನ್ನು ಅನ್ವಯಿಸುವುದು, ತಟಸ್ಥವಾಗಿ ಗಮನಿಸುವುದು ಇವೆಲ್ಲವೂ ‘ನಿಧಾನಿಸುವಿಕೆ’ಯ (ಸ್ಲೋಯಿಂಗ್ ಡೌನ್) ಭಾಗವೇ ಆಗಿರುತ್ತದೆ. ಅಷ್ಟಕ್ಕೂ ಈ ರೀತಿಯಲ್ಲಿ ಅವಲೋಕಿಸಲು ನಮಗೆ ಈ ಮುನ್ನ ಸಮಯವಾದರೂ ಎಲ್ಲಿ ಸಿಕ್ಕಿತ್ತು? ಈಗ ಹೊಸ ಪ್ರವೃತ್ತಿಗಳು ಹಾಗೂ ನಮ್ಮ ಅನುಭವಗಳು ಇವೆರಡನ್ನೂ ಸಂಯೋಜನೆಗೊಳಿಸಿ ಯುವ ತಲೆಮಾರಿನವರಿಗಾಗಿ ಏನಾದರೂ ಹೊಸತನ್ನು ಸೃಷ್ಟಿಸಬಹುದು. ನನ್ನ ಪ್ರಕಾರ, ನಿಧಾನಿಸುವುದು ಎಂಬುದರ ನಿಜವಾದ ಸಾರ ಇದೇ ಆಗಿದೆ.
ನಮ್ಮ ಕುತೂಹಲ, ಉತ್ಸಾಹ ಹಾಗೂ ಆಸಕ್ತಿಯನ್ನು ಉಳಿಸಿಕೊಂಡು ಅವುಗಳಿಗೆ ಬೇಕಾದ ಪುಷ್ಟಿಯನ್ನು ನಿರಂತರವಾಗಿ ಪೂರೈಸುವುದೇ ‘ನಿಧಾನಿಸುವುದು’ ಎಂಬುದರ ನಿಜವಾದ ಅರ್ಥವಾಗಿದೆ. ಹೌದು, ‘ಸ್ಲೋ ಡೌನ್ ಎಂಬುದು ಪ್ರತಿಯೊಬ್ಬರಿಗೂ ವಿಭಿನ್ನವಾಗಿ ತೋರುತ್ತದೆ. ಕೆಲವರ ಪ್ರಕಾರ, ‘ಸ್ಲೋ ಡೌನ್’ ಎಂದರೆ, ಎಲ್ಲವನ್ನೂ ತ್ಯಜಿಸಿ ದೇವರ ನಾಮದ ಪಠಣ ಮಾಡುವುದು ಎಂದಾಗಿರುತ್ತದೆ. ಅದು ಕೂಡ ಉತ್ತಮವಾದುದೇ. ಒಟ್ಟಿನಲ್ಲಿ, ಬದುಕಿನ ಉತ್ತರಾರ್ಧದ ಹಂತದಲ್ಲಿ ನಮಗೆ ಆಂತರ್ಯದಲ್ಲಿ ಯಾವುದು ಹೆಚ್ಚಿನ ಖುಷಿ ಹಾಗೂ ಸಮಾಧಾನವನ್ನು ನೀಡುತ್ತದೆಯೋ ಅದನ್ನು ನಾವು ಮಾಡಬೇಕು ಎನ್ನುವುದು ಇದರ ತಾತ್ಪರ್ಯವಾಗಿದೆ.
ನಾನೊಮ್ಮೆ ಐವಾನ್ ಕಾರ್ಮೈಕಲ್ ಅವರ ಪಾಡ್‌ಕಾಸ್ಟ್ ಅನ್ನು ಆಲಿಸುತ್ತಿದ್ದೆ. ಯಶಸ್ವಿ ವ್ಯಕ್ತಿಗಳ ಸಂದರ್ಶನಗಳಿAದ ಹೆಕ್ಕಿ ತೆಗೆದ ಒಳನೋಟಗಳೆಲ್ಲವನ್ನೂ ಅವರು ಒಂದೇ ಪಾಡ್‌ಕಾಸ್ಟ್ ನಲ್ಲಿ ಪ್ರಸ್ತುತಪಡಿಸುವ ಮೂಲಕ ನಿಜವಾಗಿಯೂ ದೊಡ್ಡ ಸೇವೆಯನ್ನೇ ಮಾಡುತ್ತಿದ್ದಾರೆ. ಆ ಪಾಡ್‌ಕಾಸ್ಟ್ ನಲ್ಲಿ ಕೇಳಿಸಿಕೊಂಡ, “ನಿಧಾನವು ಸುಗಮವಾಗಿರುತ್ತದೆ ಹಾಗೂ ಸುಗಮವಾದುದು ತ್ವರಿತವಾಗಿರುತ್ತದೆ” ಎಂಬ ಉಲ್ಲೇಖವು ನನ್ನನ್ನು ತೀವ್ರವಾಗಿ ಸೆಳೆಯಿತು. ಅದು ನನಗೆ ಬಹಳ ಇಷ್ಟವಾಗಿ, ಅದನ್ನು ಪುನಃ ಪುನಃ ಕೇಳಿಸಿಕೊಂಡೆ. ಅಂತಹ ಗಹನವಾದ ಉಲ್ಲೇಖವನ್ನು ನಾನು ಕೇಳಿದ್ದು ಅದೇ ಮೊದಲು.
ಕುತೂಹಲಗೊಂಡ ನಾನು, ಅದನ್ನು ಜೆಫ್ ಬೆಜಜ್ ಟಂಕಿಸಿದ್ದೇ ಎಂಬುದನ್ನು ತಿಳಿಯಲು ಗೂಗಲ್ ಅನ್ನು ಜಾಲಾಡಿದೆ. ಆಗ ನನಗೆ, ಅದು ಮೂಲತಃ ಅಮೆರಿಕದ ಸೇನೆಯಲ್ಲಿ, ಅದರಲ್ಲೂ ಅಲ್ಲಿನ ನೌಕಾಪಡೆಯ ‘ಸೀಲ್’ನಲ್ಲಿ ಜನ್ಮತಳೆದ ಉಲ್ಲೇಖ ಎಂಬುದು ಗೊತ್ತಾಯಿತು. ಇದನ್ನು ಅವರ ತರಬೇತಿಯಲ್ಲಿ ಬಳಸಲಾಗುತ್ತದೆ. ನಿಖರತೆ, ಸೂಕ್ಷ್ಮ ಅಂಶಗಳಿಗೂ ಗಮನ ನೀಡುವುದು ಹಾಗೂ ಸಮರ್ಪಕ ಕಾರ್ಯವಿಧಾನಗಳು ವೇಗಕ್ಕಿಂತಲೂ ಮುಖ್ಯ ಎಂದು ಬೋಧಿಸಲಾಗುತ್ತದೆ. ಒಮ್ಮೆ ಬುನಾದಿ ಗಟ್ಟಿಯಾಗಿಬಿಟ್ಟರೆ ಬೇರೆಲ್ಲವೂ ಸುಗಮವಾಗುತ್ತದೆ. ಇದು ಸಾಧ್ಯವಾದರೆ ಅಡೆತಡೆಗಳಿಲ್ಲದ ಸುಗಮವಾದ ಪಥದಲ್ಲಿ ಮುಂದಕ್ಕೆ ತ್ವರಿತವಾಗಿ ಚಲಿಸಬಹುದು. ಆದರೆ, ಅದನ್ನು ಬಿಟ್ಟು ಆರಂಭದಿAದಲೇ ಬಿರುಸಾಗಿ ಮುನ್ನುಗ್ಗಲು ಹೋದರೆ ಅಡ್ಡಿ ಆತಂಕಗಳು ಎದುರಾಗಬಹುದು ಅಥವಾ ನೀವು ಮುಗ್ಗರಿಸಬಹುದು. ಇದರಿಂದಾಗಿ ಅಂದುಕೊAಡ ಕಾರ್ಯವು ವಿಳಂಬಗೊಳ್ಳಬಹುದು ಅಥವಾ ಹಳಿ ತಪ್ಪಲೂಬಹುದು.
ಅಮೆರಿಕದ ಬರಹಗಾರ ಲೋರೆಲ್ ಹ್ಯಾಮಿಲ್ಟನ್ ಅವರು ಕೂಡ “ನಿಧಾನವೆಂಬುದು ಸ್ಥಿರವಾಗಿರುತ್ತದೆ, ಸ್ಥಿರವೆಂಬುದು ಸುಗಮವಾಗಿರುತ್ತದೆ, ಸುಗಮವಾದುದು ತ್ವರಿತವಾಗಿರುತ್ತದೆ, ತ್ವರಿತತೆಯು ಭಯಾನಕವಾಗಿರುತ್ತದೆ” ಎಂದಿದ್ದಾರೆ. ಇದು ನನಗೆ ನನ್ನ ಬಾಲ್ಯದಲ್ಲಿನ ಆಮೆ ಮತ್ತು ಮೊಲದ ಕಥೆಯನ್ನು ನೆನಪಿಸುತ್ತದೆ. ಆಮೆಯ ನಿಧಾನ ಗುಣ, ಸ್ಥಿರತೆ, ಸುಗಮ ಚಲನೆ ಹಾಗೂ ಛಲ ಬಿಡದ ಪ್ರಯತ್ನಗಳು ಅದಕ್ಕೆ ಯಶಸ್ಸು ತಂದುಕೊಟ್ಟವು. ಆದರೆ, ಮೊಲವು ಅತಿಯಾದ ಆತ್ಮವಿಶ್ವಾಸದ ಬಲೆಯಲ್ಲಿ ಸಿಲುಕಿಕೊಂಡಿತು; ಅದು ಎದುರಾಳಿಯನ್ನು ಹಗುರವಾಗಿ ಪರಿಗಣಿಸಿತು; ವಿವೇಚನಾರಹಿತವಾಗಿ ವರ್ತಿಸಿತು; ಪೂರ್ವಯೋಜನೆಯ ಅಥವಾ ಮುಂಜಾಗ್ರತೆಯ ಕೊರತೆ ಅದನ್ನು ಬಾಧಿಸಿತು. ಕೊನೆಗೆ, ಇವೆಲ್ಲದರ ಪರಿಣಾಮವಾಗಿ ಏನಾಗಬೇಕೋ ಅದೇ ಸಂಭವಿಸಿತು. ಆರಂಭದಲ್ಲಿ ಪೂರ್ತಿ ವೇಗದೊಂದಿಗೆ ಓಡಿದ ಮೊಲವು ನಂತರ ನಿಧಾನಗೊಂಡಿತು. ಹೀಗೆ ನಿಧಾನಿಸಿದ್ದರಲ್ಲೇನೂ ತಪ್ಪಿಲ್ಲ. ಆದರೆ, ಮುಂದೆ ಅದು ನಿದ್ದೆಯನ್ನೂ ಮಾಡಿಬಿಟ್ಟಿತು. ಎಡವಟ್ಟು ಆಗಿದ್ದು ಅಲ್ಲಿಯೇ.
‘ನಿಧಾನಿಸುವುದು’ (ಸ್ಲೋಯಿಂಗ್ ಡೌನ್) ಅಂದರೆ ನಿದ್ದೆ ಮಾಡುವುದೆಂದಲ್ಲ. ಅದರ ಅರ್ಥ ಶಾಂತ ಮನಃಸ್ಥಿತಿಯೊಂದಿಗೆ ಬಿಡುವು ಪಡೆಯಬೇಕು ಎಂಬುದಾಗಿದೆ. ಆ ಅವಧಿಯಲ್ಲಿ ನಮ್ಮ ಸುತ್ತಮುತ್ತಲ ಸಂಗತಿಗಳು, ಆಗಿಹೋದ ಸಂಗತಿಗಳು, ವರ್ತಮಾನ ಹಾಗೂ ಭವಿಷ್ಯವನ್ನು ಅವಲೋಕಿಸುವುದರಲ್ಲಿ ಮಗ್ನವಾಗಬೇಕು. ಇದೊಂದು ಅದ್ಭುತ ತತ್ತ್ವವಲ್ಲವೇ? ನಾವೆಲ್ಲರೂ ಇದನ್ನು ಬದುಕಿನ ಯಾವುದಾದರೂ ಹಂತದಲ್ಲಿ ಬಳಸಿರುತ್ತೇವೆ ಅಥವಾ ಈಗಲೂ ಬಳಸುತ್ತಲೇ ಇದ್ದೇವೆ. “ಜಗತ್ತಿನಲ್ಲಿ ಹೊಸತು ಎನ್ನುವುದು ಏನೂ ಇಲ್ಲ. ಭಗವದ್ಗೀತೆಯಲ್ಲಿ ಪ್ರತಿಯೊಂದೂ ಇದೆ” ಎಂದು ಹೇಳಲಾಗುತ್ತದೆ. ನಾವು ಈಗಾಗಲೇ ಇದ್ದುದನ್ನೇ ಹೊಸದಾದ ರೀತಿಯಲ್ಲಿ ಪ್ರಸ್ತುತಪಡಿಸುತ್ತೇವೆ ಅಷ್ಟೆ.
‘ನಿಧಾನಿಸುವುದು’ ಎಂಬುದಕ್ಕೆ ನನಗೆ ಎರಡು ಅರ್ಥಗಳು ಭಾಸವಾಗುತ್ತವೆ.
ಒಂದು, ಪದಶಃ ಅರ್ಥ. ಉದಾಹರಣೆಗೆ, ಆಹಾರ ಸೇವನೆಯ ವಿಷಯಕ್ಕೆ ಬಂದರೆ, ನಿಧಾನವಾಗಿ ತಿನ್ನಿ, ಕಡಿಮೆ ತಿನ್ನಿ, ಚೆನ್ನಾಗಿ ಅಗಿದು ತಿನ್ನಿರಿ ಎನ್ನುತ್ತೀವಲ್ಲ ಅದು. ಕೆಲಸಕ್ಕೆ ಹೊರತಾದ ವಿಷಯಗಳಲ್ಲಿ ಬಿರುಸಿನಿಂದ ಮುನ್ನುಗ್ಗಬೇಡಿ. ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಅನುಭವಿಸಿ. ಪೇಂಟಿAಗ್, ಚಿತ್ರ ರಚನೆ, ಸಂಗೀತ, ನೃತ್ಯ, ಅಡುಗೆ ಮಾಡುವುದು, ಕಾಲ್ನಡಿಗೆ, ಈಜುವುದು, ಓದು ಹೀಗೆ ಯಾವುದೇ ಆಗಿರಬಹುದು, ಏನನ್ನು ಇಷ್ಟಪಡುತ್ತೀರೋ ಅದನ್ನು ಸಂಪೂರ್ಣವಾಗಿ ಅನುಭವಿಸಿ ಎಂಬುದು.
“ಭವಿಷ್ಯಕ್ಕೆ ಸಂಬಂಧಿಸಿದ ಅತ್ಯುತ್ತಮ ಸಂಗತಿಯೆಂದರೆ, ಅದು ಯಾವುದೋ ಒಂದು ದಿನ ಒಮ್ಮೆ ಮಾತ್ರ ಬರುತ್ತದೆ” ಎಂದು ಅಬ್ರಹಾಂ ಲಿಂಕನ್ ಬಹಳ ಸೊಗಸಾಗಿ ಹೇಳಿದ್ದಾರೆ. ಹೀಗಾಗಿ, ಪ್ರತಿಯೊಂದು ಕ್ಷಣ, ಗಂಟೆ ಹಾಗೂ ದಿನವನ್ನು ಸುವರ್ಣಾವಕಾಶವನ್ನಾಗಿ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.
“ನಿಧಾನಿಸುವುದು” ಎಂಬುದರ ಎರಡನೇ ಅರ್ಥವೇನೆಂದರೆ, ಅದು ಕೆಲಸಕ್ಕೆ ಅನ್ವಯವಾಗುವಂತಹದ್ದು. ಈ ಸಂದರ್ಭದಲ್ಲಿ, ನಿಧಾನಿಸುವುದು ಎಂಬುದು ಬಹಳ ಮಹತ್ವವಾದುದು. ಇಲ್ಲಿ ‘ನಿಧಾನಿಸುವುದು’ ಎಂಬುದು ಅಧ್ಯಯನ, ಅವಲೋಕನ ಹಾಗೂ ಆಲೋಚನೆ ಎಂಬ ಅರ್ಥವಲಯವನ್ನು ಒಳಗೊಳ್ಳುತ್ತದೆ. ಇದನ್ನು, ಯಾವುದೇ ಕಾರ್ಯಗುರಿ ಅಥವಾ ಕಾರ್ಯಯೋಜನೆಯು ಸುಗಮವಾಗಿ ಮುಂದೆ ಸಾಗಲು ಹಾಗೂ ಯಾವುದೇ ಅಡಚಣೆಯಿಲ್ಲದೆ ವೇಗ ಪಡೆಯಲು ಅನುಕೂಲವಾಗುವಂತೆ ಮುಂಚಿತವಾಗಿ ಸಿದ್ಧಪಡಿಸುವ ‘ಸ್ಕ್ರಿಪ್ಟ್ ರೈಟಿಂಗ್’ಗೆ ಹೋಲಿಸಬಹುದು.
“ತ್ವರಿತವಾಗಿ ತೆರಳುವುದಕ್ಕಾಗಿ ನಿಧಾನಿಸು” ಎಂಬುದು ನಮ್ಮೆಲ್ಲರ ಮನಸ್ಸಿನಲ್ಲಿ ಸದಾ ಇರಬೇಕು. ಅದಕ್ಕಿಂತ ಮುಖ್ಯವಾಗಿ, ನಮ್ಮ ಕ್ರಿಯೆಗಳಲ್ಲಿ ಅದು ಪ್ರಕಟವಾಗಬೇಕು.
Sಣಡಿiಠಿ ಂಜ
ಕಾಶ್ಮೀರ
ಧರೆಯ ಮೇಲಿನ ಸ್ವರ್ಗದ ಸೊಬಗಿಗೆ ನೀವಿನ್ನೂ ಖುದ್ದು ಸಾಕ್ಷಿಯಾಗಿಲ್ಲವೇ?
‘ವೀಣಾ ವರ್ಲ್ಡ್’ ಪ್ರವಾಸ ಯೋಜನೆಗಳನ್ನು ಆಯ್ದುಕೊಳ್ಳಿ
ಕಾಶ್ಮೀರ್ ಎಸ್ಕೇಪ್
ಹೈಲೈಟ್ಸ್ ಆಫ್ ಕಾಶ್ಮೀರ್
ಡಿಲೈಟ್ಸ್ ಆಫ್ ಕಾಶ್ಮೀರ್
ವಂಡರ್ಸ್ ಆಫ್ ಕಾಶ್ಮೀರ್
ಬೆಸ್ಟ್ ಆಫ್ ಕಾಶ್ಮೀರ್
ಪ್ರೀಮಿಯಂ
ಲಕ್ಷುರಿ ಕಾಶ್ಮೀರ್
ಮಹಿಳಾ ವಿಶೇಷ, ಹಿರಿಯ ನಾಗರಿಕರ ವಿಶೇಷ, ಹನಿಮೂನ್ ಮತ್ತು ಗ್ರ್ಯಾಂಡ್‌ಪೇರೆಂಟ್ಸ್ ಹಾಗೂ ಗ್ರ್ಯಾಂಡ್‌ಚಿಲ್ಡ್ರನ್ ಪ್ರವಾಸಗಳು ಕೂಡ ಲಭ್ಯ ಇವೆ.
Post your Comment
Please let us know your thoughts on this story by leaving a comment.