Published in the Sunday Prajavani on 23 March 2025
ಕೆಲವು ವರ್ಷಗಳ ಹಿಂದೆ ನಾನು ಫ್ರೆಂಚ್ ರಿವ್ಯರಾದಲ್ಲಿ ಕಡುನೀಲಿ ಸಮುದ್ರದ ಹಿನ್ನೆಲೆಯಲ್ಲಿ ಕಣ್ಣು ಕೋರೈಸುವ, ಬೆರಗು ಮೂಡಿಸುವ ಸೊಬಗಿನಿಂದ ಕೂಡಿದ ಸುತ್ತಲ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಆ ಮೆಡಿಟರೇನಿಯನ್ ಕಡಲದಂಡೆಯ ರಮಣೀಯತೆಗೆ ಸಾಕ್ಷಿಯಾಗುತ್ತಾ ಪಟ್ಟಣದ ಏರುಹಾದಿಗಳಲ್ಲಿ ನಡೆದು ಸಾಗುತ್ತಿರುವಾಗ ಕಾರಿನ ಎಂಜಿನ್ನುಗಳ ರೊಂಯ್ ರೊಂಯ್ ಶಬ್ದ ನನ್ನ ಕಿವಿಗೆ ಬೀಳತೊಡಗಿತು ಹಾಗೂ ಅಲ್ಲಿನ ವಾತಾವರಣ ಹೃದಯ ಬಡಿತವನ್ನು ಉದ್ದೀಪಿಸುವಂತಿತ್ತು. ಅದು ಗ್ರಾನ್ ಪ್ರೀ ಅವಧಿ ಎಂಬುದು ತಕ್ಷಣವೇ ನನಗೆ ಗೊತ್ತಾಯಿತು. ಅಂತಹ ಸಂದರ್ಭದಲ್ಲಿ, ಪ್ರಪಂಚದ ಅತ್ಯಂತ ಪುಟ್ಟ, ಸಮ್ಮೋಹಕ, ಸುಂದರ ಹಾಗೂ ಸಿರಿವಂತ ದೇಶದಲ್ಲಿ ಇದ್ದುದು ನಿಜವಾಗಿಯೂ ವಿಶೇಷವೆನ್ನಿಸಿತು. ಒಂದಷ್ಟು ಹುಡುಕಾಟದ ನಂತರ, ಫಾರ್ಮುಲಾ 1 ಟ್ರ್ಯಾಕ್‌ನ ಉದ್ದಕ್ಕೂ ಹಾಕಿದ್ದ ತಡೆಗೋಡೆಗಳ ನಡುವೆ ಖಾಲಿಯಿದ್ದ ನುಸುಳಬಹುದಾದಷ್ಟು ಕೊಂಚ ಜಾಗವನ್ನು ಕಂಡುಕೊಂಡೆ. ನಂತರ, ಅಲ್ಲಿಂದ ರೇಸ್‌ನ ದೃಶ್ಯವನ್ನು ದರ್ಶಿಸಿದೆ. ನಿಜವಾಗಿಯೂ ಅದೊಂದು ಅಮೂಲ್ಯ ಕ್ಷಣವಾಗಿತ್ತು.
ಫಾರ್ಮುಲಾ 1 ನನಗೆ ಇಷ್ಟವಾಗಲು, ಅಲ್ಲಿ ಕಾಣಸಿಗುವ ವೇಗವೊಂದೇ ಕಾರಣವಲ್ಲ; ಅದರೊಟ್ಟಿಗೆ ಲಭ್ಯವಾಗುವ ಒಟ್ಟಾರೆ ಅನುಭವಗಳ ಕಾರಣಕ್ಕಾಗಿ ನನಗದು ಮೆಚ್ಚುಗೆಯಾಗುತ್ತದೆ. ಎಂಜಿನ್ನುಗಳ ಅಬ್ಬರ, ಸುಟ್ಟ ರಬ್ಬರಿನಿಂದ ಹೊರಹೊಮ್ಮುವ ವಿಶಿಷ್ಟ ಪರಿಮಳ, ರೆಪ್ಪೆ ಮಿಟುಕಿಸುವಷ್ಟರಲ್ಲಿ ಕಾರು ಮಿಂಚಿ ಮಾಯವಾಗುವಾಗ ಉಂಟಾಗುವ ಉದ್ದೀಪನ ಇವೆಲ್ಲವೂ ಗ್ರಾನ್ ಪ್ರೀ ರೇಸಿಂಗ್ ಕೊಡಮಾಡುವ ಮೋಡಿಗಳಾಗಿವೆ. ಫ್ರ್ಯಾನ್ಸ್ ನಲ್ಲಿ 1906ರಲ್ಲಿ ಆರಂಭವಾದ ಗ್ರಾನ್ ಪ್ರೀ ಇಂದು ಮೋಟಾರ್ ಸ್ಪೋರ್ಟ್ ವಿಭಾಗದ ಪ್ರಧಾನ ಸ್ಪರ್ಧೆಯಾಗಿ ಬೆಳೆಯಾಗಿ. ಪ್ರಸ್ತುತ, ಇದು ಫಾರ್ಮುಲಾ 1 ವರ್ಲ್ಡ್ ಚಾಂಪಿಯನ್‌ಷಿಪ್ ಎಂದೂ ಮಾನ್ಯತೆ ಪಡೆದಿದೆ.
ಯಾವ ಸ್ಥಳಕ್ಕೆ ಹೋದರೆ 2025ರ ಫಾರ್ಮುಲಾ 1 ರೇಸ್‌ಗಳನ್ನು ನೋಡಬಹುದೆಂಬ ಆಲೋಚನೆ ನಿಮಗೇನಾದರೂ ಉದ್ಭವಿಸಿದ್ದರೆ, ಐದು ಖಂಡಗಳಿಗೆ ಸೇರಿದ 21 ದೇಶಗಳಲ್ಲಿ ಏರ್ಪಾಡಾಗಿರುವ 24 ರೇಸುಗಳ ವೇಳಾಪಟ್ಟಿಯಲ್ಲಿ ಯಾವುದನ್ನಾದರೂ ಆಯ್ಕೆ ಮಾಡಿ. ಸಿಲ್ವರ್ ಸ್ಟೋನ್, ಸ್ಪಾ-ಫ್ರ್ಯಾಂಕರ್ ಚಾಂಪ್ಸ್ ಹಾಗೂ ಸುಜುಕಾದಂತಹ ಕ್ಲ್ಯಾಸಿಕ್ ಟ್ರ್ಯಾಕ್‌ಗಳೊಂದಿಗೆ ಇತ್ತೀಚೆಗೆ ಸೇರ್ಪಡೆಗೊಳಿಸಲಾಗಿರುವ ಲಾಸ್ ವೇಗಸ್, ಮಿಯಾಮಿ ಹಾಗೂ ಸೌದಿ ಅರೇಬಿಯಾ ಇತ್ಯಾದಿ ಇದರಲ್ಲಿ ಸಂಯೋಜನೆಗೊಂಡಿದ್ದು, ಅಪಾರ ನಿರೀಕ್ಷೆ ಹುಟ್ಟುಹಾಕುವ ವೈವಿಧ್ಯಮಯ ಸರ್ಕೀಟ್ ಆಯ್ಕೆಗಳನ್ನು ಮುಂದಿರಿಸುತ್ತವೆ. ಎಲ್ಲಕ್ಕಿಂತ ಅತ್ಯುತ್ತಮ ಯಾವುದು ಗೊತ್ತೆ? ವಾರಾಂತ್ಯದಲ್ಲಿ ರೇಸಿನ ರೋಮಾಂಚನ ಅನುಭವಕ್ಕೆ ಸಾಕ್ಷಿಯಾಗುವ ಜೊತೆಗೆ ಸ್ಮರಣೀಯ ಪ್ರವಾಸದ ದಿನಗಳನ್ನು ಕಳೆಯಲು ನಿಮ್ಮ ವಾಸ್ತವ್ಯವನ್ನು ಅಲ್ಲಿ ಮುಂದುವರಿಸುವ ಅವಕಾಶ ನಿಮಗಿರುತ್ತದೆ.
ಗ್ರಾನ್ ಪ್ರೀ ಮತ್ತು ಫಾರ್ಮುಲಾ 1 ಎಂದರೇನು?
ಗ್ರಾನ್ ಪ್ರೀ ಎಂಬುದು ಫ್ರೆಂಚ್ ಮೂಲದ ‘ಮಹಾ ಬಹುಮಾನ’ (ಗ್ರೇಟ್ ಪ್ರೈಜ್) ಎಂಬ ಅರ್ಥ ಹೊಂದಿದೆ. ಈ ಪ್ರತಿಷ್ಠಿತ ರೇಸುಗಳನ್ನು ಗೆಲ್ಲುವುದರ ಹಿರಿಮೆ ಹಾಗೂ ಉತ್ಕೃಷ್ಟತೆಯನ್ನು ಇದು ಸೂಚಿಸುತ್ತದೆ. ಮೊದಲಿಗೆ, ಕ್ಷಮತೆ ಹಾಗೂ ಕೌಶಲದ ಪರೀಕ್ಷೆಯಾಗಿ ಆರಂಭಗೊಂಡ ಈ ರೇಸಿಂಗ್ ಇಂದು ಜಗತ್ತಿನಲ್ಲೆಡೆ ವ್ಯಾಪಿಸಿದೆ. ಪ್ರಪಂಚದ ಅತ್ಯಂತ ಹೆಸರಾಂತ ಸ್ಥಳಗಳಲ್ಲಿ ಇದರ ಸ್ಪರ್ಧೆಗಳು ನಡೆದು ಲಕ್ಷಾಂತರ ಪ್ರೇಕ್ಷಕರನ್ನು ಸೆಳೆಯುತ್ತವೆ. ಫಾರ್ಮುಲಾ 1 ಅಥವಾ ಎಫ್ 1 ಎಂದರೆ, ಎಲ್ಲಾ ಸ್ಪರ್ಧಿಗಳು ಹಾಗೂ ತಂಡಗಳು ಪಾಲಿಸಬೇಕಾದ ‘ಫಾರ್ಮುಲಾ’ ಎಂದು ಕರೆಸಿಕೊಳ್ಳುವ ನಿಯಮಾವಳಿಯಾಗಿದೆ. ಸಿಂಗಲ್-ಸೀಟರ್ ರೇಸಿಂಗ್‌ನ ಸರ್ವೋತ್ಕೃಷ್ಟಸ್ಪರ್ಧೆ ಇದಾಗಿದ್ದು, ತಂತ್ರಜ್ಞಾನ, ಏರೊಡೈನಮಿಕ್ಸ್, ವೇಗ ಹಾಗೂ ಮಾನವ ಕೌಶಲಗಳು ಏಕತ್ರ ಮೇಳೈಸುವ ವೇದಿಕೆಯಾಗಿದೆ. ಇನ್ನು, ‘ಫಾರ್ಮುಲಾ 1’ರಲ್ಲಿನ ‘1’ ಎಂಬುದು, ಮೋಟಾರ್ ಸ್ಪೋರ್ಟ್ಸ್ ನಲ್ಲಿ ಅತ್ಯಂತ ಅಗ್ರಶ್ರೇಣಿಯ ಅತ್ಯುನ್ನತ ಸ್ಪರ್ಧಾ ವಿಭಾಗ ಎಂಬುದನ್ನು ಸಂಕೇತಿಸುತ್ತದೆ.
ಯಾವ ಗ್ರಾನ್ ಪ್ರೀ ರೇಸುಗಳು ನಗರದ ರಸ್ತೆಗಳಲ್ಲಿ ನಡೆಯುತ್ತವೆ?
ಸಾಂಪ್ರದಾಯಿಕ ರೇಸ್ ಟ್ರ್ಯಾಕ್‌ಗಳಿಗಿಂತ ವಿಭಿನ್ನವಾಗಿ, ಕೆಲವು ಗ್ರಾನ್ ಪ್ರೀ ಸ್ಪರ್ಧೆಗಳು ನಗರಗಳ ರಸ್ತೆಗಳಲ್ಲಿ ನಡೆಯುತ್ತವೆ. ಈ ಕಾರಣಕ್ಕಾಗಿಯೇ ಚಾಲಕರು ಹಾಗೂ ಪ್ರೇಕ್ಷಕರ ಪಾಲಿಗೆ ಇವು ಹೆಚ್ಚು ರೋಮಾಂಚಕಾರಿಯೂ ಆಗಿರುತ್ತವೆ.
ಮಾನಕೊ ಗ್ರಾನ್ ಪ್ರೀ (ಮಾಂಟೀ ಕಾರ್ಲೊ, ಮಾನಕೊ)- ಕಡಿದಾದ ತಿರುವುಗಳು ಹಾಗೂ ಏರಿಳಿತದಿಂದ ಕೂಡಿದ ಕಿರಿದಾದ ರಸ್ತೆಗಳಲ್ಲಿ ನಡೆಯುವ ಅತ್ಯಂತ ಪ್ರತಿಷ್ಠಿತ ಸ್ಪರ್ಧೆ ಇದಾಗಿದೆ.
ಸಿಂಗಪೂರ್ ಗ್ರಾನ್ ಪ್ರೀ (ಮರೀನಾ ಬೇ, ಸಿಂಗಪೂರ್)- ಇದು ನಗರದ ಮಧ್ಯ ಭಾಗದಲ್ಲಿ ಹೊನಲು ಬೆಳಕಿನಡಿ ನಡೆಯುವ ಮೊತ್ತಮೊದಲ ರಾತ್ರಿ ವೇಳೆಯ ರೇಸ್ ಆಗಿದೆ.
ಅಜರ್‌ಬೈಜಾನ್ ಗ್ರಾನ್ ಪ್ರೀ (ಬಾಕು, ಅಜರ್ ಬೈಜಾನ್)- ಅತಿ ಉದ್ದದ ನೇರ ರಸ್ತೆಯಲ್ಲಿ ನಡೆಯುವ ಇದು ಅತ್ಯಂತ ವೇಗದ ರೇಸ್‌ಗಳ ಪೈಕಿ ಒಂದಾಗಿದೆ.
ಲಾಸ್ ವೇಗಸ್ ಗ್ರಾನ್ ಪ್ರೀ (ಲಾಸ್ ವೇಗಸ್, ಯುಎಸ್ಎ - ಲಾಸ್ ವೇಗಸ್ ಸ್ಟ್ರಿಪ್‌ನಲ್ಲಿ ನಡೆಯುವ ಹೊಸ ರೇಸ್ ಇದಾಗಿದ್ದು, ಅಚ್ಚರಿದಾಯಕ ನೋಟವನ್ನು ಉಂಟುಮಾಡುತ್ತದೆ.
ಸೌದಿ ಅರೇಬಿಯನ್ ಗ್ರಾನ್ ಪ್ರೀ (ಜೆಡ್ಡಾ, ಸೌದಿ ಅರೇಬಿಯಾ)- ಅತ್ಯಂತ ವೇಗದ ರಸ್ತೆ ಸರ್ಕೀಟ್ ಗಳಲ್ಲಿ ಒಂದಾದ ಇದು ಅಧಿಕ ವೇಗದ ತಿರುವುಗಳಿಂದ ಕೂಡಿದ ರಾತ್ರಿ ವೇಳೆಯ ಸ್ಪರ್ಧೆಗೆ ಹೆಸರಾಗಿದೆ.
ಈ ವರ್ಷ ಫಾರ್ಮುಲಾ 1 ರೇಸಿಂಗ್ ನಡೆಯುವ ಪ್ರವಾಸಕ್ಕೆ ಹೇಳಿಮಾಡಿಸಿದಂತಿರುವ ಕೆಲವು ಸ್ಥಳಗಳ ಬಗ್ಗೆ ಅವಲೋಕಿಸೋಣ!
ಮಾನಕೊ : ರಿವ್ಯರಾದ ರತ್ನ
ಸರ್ಕೀಟ್ ಡಿ ಮಾನಕೊ, ಮಾಂಟೀ ಕಾರ್ಲೊ
2025 ಮಾನಕೊ ಗ್ರಾನ್ ಪ್ರೀ, ದಿನಾಂಕ: ಮೇ 23-25
ಮಾನಕೊ, ಫ್ರೆಂಚ್ ರಿವ್ಯರಾದಲ್ಲಿನ ಒಂದು ಪುಟ್ಟದಾದ ಅತ್ಯಾಧುನಿಕ ಆಕರ್ಷಕ ಪ್ರದೇಶವಾಗಿದೆ. ಇದು, ಕ್ಯಾಸಿನೊ ಹಾಗೂ ಯಾಟ್‌ಗಳಿಂದ ತುಂಬಿತುಳುಕುವ ಬಂದರು ಮತ್ತು ಸುಸಜ್ಜಿತ ಐಷಾರಾಮ ವ್ಯವಸ್ಥೆಗೆ ಹೆಸರಾಗಿದೆ. ವ್ಯಾಟಿಕನ್ ಸಿಟಿ ನಂತರದ, ಪ್ರಪಂಚದ ಎರಡನೇ ಅತ್ಯಂತ ಪುಟ್ಟ ದೇಶವಾದ ಇದು ಸಿರಿವಂತರ ಹಾಗೂ ಖ್ಯಾತನಾಮರ ನೆಚ್ಚಿನ ತಾಣವಾಗಿದೆ.
ಮಾನಕೊದಲ್ಲಿ ನೋಡಬೇಕಾದ್ದು ಹಾಗೂ ಮಾಡಬೇಕಾದ್ದು:
ಪ್ರಿನ್ಸ್ ಪ್ಯಾಲೆಸ್ ಕಣ್ತುಂಬಿಕೊಳ್ಳಿ: ರಕ್ಷಣಾ ಉಸ್ತುವಾರಿ ಹಸ್ತಾಂತರ ವಿಧಿಗೆ ಸಾಕ್ಷಿಯಾಗಿ ಹಾಗೂ ನಗರದ ಸೊಬಗಿನ ನೋಟಗಳನ್ನು ಸವಿಯಿರಿ.
ಮಾಂಟೀ ಕಾರ್ಲೊ ಕ್ಯಾಸಿನೊ ಭೇಟಿ: ಇದು ವೈಭವ ಹಾಗೂ ಭವ್ಯತೆಗೆ ಹೆಸರಾದ ಜನಜನಿತ ತಾಣವಾಗಿದೆ.
ಪೋರ್ಟ್ ಹರ್ಕ್ಯುಲೆಸ್ ಗುಂಟ ಕಾಲ್ನಡಿಗೆಯಲ್ಲಿ ಸಾಗಿ: ನಿಬ್ಬೆರಗಾಗಿಸುವ ಯಾಟ್‌ಗಳನ್ನು ದರ್ಶಿಸಿ ಹಾಗೂ ಜಲರಾಶಿಯ ಮುಂದೆ ಔತಣ ಸವಿಯಿರಿ.
ಓಸಿಯಾನೋಗ್ರ‍್ಯಾಫಿಕ್ ವಸ್ತುಸಂಗ್ರಹಾಲಯದ ಅನ್ವೇಷಣೆ: ಇದು ಜಾಕ್ ಕುಸ್ಟೊ ಸ್ಥಾಪಿಸಿದ ಆಸಕ್ತಿದಾಯಕ ಸಾಗರ ವಸ್ತುಸಂಗ್ರಹಾಲಯವಾಗಿದೆ.
ಉತ್ತೇಜಕ ರಾತ್ರಿ ಕ್ಷಣಗಳನ್ನು ಅನುಭವಿಸಿ: ಗ್ರಾನ್ ಪ್ರೀ ವಾರಾಂತ್ಯದ ವೇಳೆ ವಿಶೇಷ ಬಾರ್‌ಗಳು ಹಾಗೂ ಕ್ಲಬ್‌ಗಳ ಚಟುವಟಿಕೆಗಳು ಗರಿಗೆದರುತ್ತವೆ.
ಬಾಕು ಗ್ರಾನ್ ಪ್ರೀ: ಕ್ಯಾಸ್ಪಿಯನ್ ರತ್ನ
ಬಾಕು ಸಿಟಿ ಸರ್ಕೀಟ್, ಅಜರ್ ಬೈಜಾನ್
2025 ಬಾಕ್ ಗ್ರಾನ್ ಪ್ರೀ ದಿನಾಂಕ: ಜೂನ್ 20-22
ಎಫ್ 1 ಕ್ಯಾಲೆಂಡರ್‌ಗೆ ಇತ್ತೀಚೆಗೆ ಸೇರ್ಪಡೆಯಾದ ಬಾಕು ಗ್ರಾನ್ ಪ್ರೀ ಅಜರ್‌ಬೈಜಾನಿನ ಐತಿಹಾಸಿಕ ರಾಜಧಾನಿಯ ರಸ್ತೆಗಳಲ್ಲಿ ನಡೆಯುವ ರೋಮಾಂಚಕಾರಿ ರೇಸ್ ಆಗಿದೆ. ಇಲ್ಲಿನ ಪುರಾತನ ವೈಭವ ಹಾಗೂ ಭವಿಷ್ಯ ಕೇಂದ್ರಿತ ವಾಸ್ತುಶಿಲ್ಪದ ಮೇಳೈಸುವಿಕೆಯು ಈ ರೇಸ್ ಗೆ ತನ್ನದೇ ವೈಶಿಷ್ಟ್ಯವನ್ನು ಕೊಡಮಾಡಿದೆ.
ಬಾಕುವಿನಲ್ಲಿ ನೋಡಬೇಕಾದ್ದು ಹಾಗೂ ಮಾಡಬೇಕಾದ್ದು:
ಪುರಾತನ ನಗರವನ್ನು ಸುತ್ತಾಡಿ: ಕಲ್ಲುಹಾಸಿನ ಬೀದಿಗಳು, ಅರಮನೆಗಳು. ಮಸೀದಿಗಳು ಹಾಗೂ ಚಕ್ರವೂಹ್ಯದಂತಹ ರಸ್ತೆಗಳು ಬೆರಗು ಮೂಡಿಸುತ್ತವೆ.
ಫ್ಲೇಮ್ ಟವರ್‌ಗೆ ಭೇಟಿ ನೀಡಿ: ರಾತ್ರಿಯ ಆಗಸದಲ್ಲಿ ಕಂಗೊಳಿಸುವ ಹೆಸರಾಂತ ತಾಣವಿದು.
ಬಾಕು ಬುಲವಾರ್ಡ್ ಗುಂಟ ಅಡ್ಡಾಡಿ: ಇದು ಕ್ಯಾಸ್ಪಿಯನ್ ಸಮುದ್ರ ದಂಡೆಯಲ್ಲಿರುವ ಪ್ರಾಕೃತಿಕ ವಿಹಾರ ತಾಣವಾಗಿದೆ.
ಗೋಬಶ್ಚನ್ ನ್ಯಾಷನಲ್ ಪಾರ್ಕ್ ಅನ್ವೇಷಿಸಿ: ಪ್ರಾಚೀನ ಶಿಲಾ ಕೆತ್ತನೆಗಳು ಹಾಗೂ ಮಣ್ಣಿನ ಜ್ವಾಲಾಮುಖಿಗಳಿಗೆ ಹೆಸರಾದ ಪ್ರದೇಶ ಇದಾಗಿದೆ.
ಮೆಕ್ಸಿಕೊ ಸಿಟಿ ಗ್ರಾನ್ ಪ್ರೀ: ಎತ್ತರದ ಸ್ಥಳದಲ್ಲಿ ರೇಸಿಂಗ್
ಆಟೊಡ್ರೊಮೊ ಹರ್ಮನೋಸ್ ರಾಡ್ರಿಗಸ್, ಮೆಕ್ಸಿಕೊ ಸಿಟಿ
2025 ಮೆಕ್ಸಿಕೊ ಸಿಟಿ ಗ್ರಾನ್ ಪ್ರೀ, ದಿನಾಂಕ- ಅಕ್ಟೋಬರ್ 24-26
ಮೆಕ್ಸಿಕೊ ಸಿಟಿ ಗ್ರಾನ್ ಪ್ರೀ , ಅಭಿಮಾನಿಗಳ ಪಾಲಿನ ನೆಚ್ಚಿನ ರೇಸ್ ಆಗಿದೆ. ಇದನ್ನು ವೀಕ್ಷಿಸಲು ಹೆಸರಾಂತ ಫೋರೊ ಸಾಲ್ ಸ್ಟೇಡಿಯಂನಲ್ಲಿ ನೆರೆಯುವ ಭಾವೋತ್ತೇಜಕ ಜನಸ್ತೋಮದಿಂದಾಗಿ ವಾತಾವರಣದಲ್ಲಿ ವಿದ್ಯುತ್ ಸಂಚಾರವಾಗುತ್ತಿದೆಯೇನೋ ಅನ್ನಿಸುತ್ತದೆ. ಸಮುದ್ರ ಮಟ್ಟದಿಂದ 2,200 ಮೀಟರುಗಳಷ್ಟು ಎತ್ತರದಲ್ಲಿರುವ ಈ ಟ್ರ್ಯಾಕ್‌ಗಳು, ಚಾಲಕರು ಹಾಗೂ ತಂಡಗಳಿಗೆ ಇನ್ನಷ್ಟು ಕಠಿಣ ಸವಾಲುಗಳನ್ನೊಡ್ಡುತ್ತವೆ.
ಮೆಕ್ಸಿಕೊ ನಗರದಲ್ಲಿ ನೋಡಬೇಕಾದ್ದು ಹಾಗೂ ಮಾಡಬೇಕಾದ್ದು:
ತ್ಯೋತಿವಕಾನ್‌ಗೆ ಭೇಟಿ ನೀಡಿ: ಸೂರ್ಯ ಮತ್ತು ಚಂದ್ರರ ಪ್ರಾಚೀನ ಪಿರಮಿಡ್‌ಗಳನ್ನು ಅನ್ವೇಷಿಸಿ
ಜೋಕಾಲೊದಲ್ಲಿ ಅಡ್ಡಾಡಿ: ವಸಾಹತುಶಾಹಿ ವಾಸ್ತುಶಿಲ್ಪಗಳಿಂದ ಸುತ್ತುವರಿದ ಪ್ರಮುಖ ಐತಿಹಾಸಿಕ ಚೌಕ ಇದಾಗಿದೆ.
ಲುಚ ಲೀಬ್ರ ಅನುಭವಿಸಿ: ಚೈತನ್ಯಶಾಲಿ ಅಖಾಡದಲ್ಲಿ ಮುಖಗವುಸು ತೊಟ್ಟು ಆಡುವ ಮೆಕ್ಸಿಕೊದ ಹೆಸರಾಂತ ಕುಸ್ತಿ ಇದಾಗಿದೆ.
ಸ್ಥಳೀಯ ಖಾದ್ಯಗಳನ್ನು ಸವಿಯಿರಿ: ರಸ್ತೆ ಬದಿಯ ಖಾದ್ಯದಂಗಡಿಗಳಲ್ಲಿ ಟ್ರೈ ಟ್ಯಾಕೋಸ್ ಅಲ್ ಪಸ್ತೋರ್, ಥಮಾಲಿ ಮತ್ತು ಚೋರ್ರೊ ಸವಿಯಿರಿ.
ಚಾಪುಲ್ಟಪೆಕ್ ಉದ್ಯಾನ ಅನ್ವೇಷಿಸಿ: ಇದು ವಸ್ತುಸಂಗ್ರಹಾಲಯಗಳು, ಸರೋವರಗಳು ಮತ್ತು ಚಾಪುಲ್ಟಪೆಕ್ ಅರಮನೆ ಇರುವ ವಿಶಾಲ ಹಸಿರು ಪ್ರದೇಶವಾಗಿದೆ.
ಬಹ್ರೇನ್ ಗ್ರಾನ್ ಪ್ರೀ: ಬೆಳಗುವ ದೀಪಗಳಡಿ ಮರಳುಗಾಡಿನಲ್ಲಿ ರೋಮಾಂಚನ
ಬಹ್ರೇನ್ ಇಂಟರ್‌ನ್ಯಾಷನಲ್ ಸರ್ಕೀಟ್, ಸಾಖಿರ್
2025 ಬಹ್ರೇನ್ ಗ್ರಾನ್ ಪ್ರೀ, ದಿನಾಂಕಗಳು: ಏಪ್ರಿಲ್ 11-13
2004ರಲ್ಲಿ ಫಾರ್ಮುಲಾ 1 ರೇಸ್ ನಡೆಸಿದ ಬಹ್ರೇನ್, ಈ ರೇಸ್ ನಡೆಸಿದ ಮಧ್ಯಪ್ರಾಚ್ಯದ ಮೊದಲ ದೇಶವಾಗಿದೆ. ಕಣ್ಣು ಕೋರೈಸುವ ಹೊನಲು ಬೆಳಕಿನಡಿ ನಡೆಯುವ ಬಹ್ರೇನ್ ಗ್ರಾಂಡ್ ಪ್ರೀದ ದೃಶ್ಯ ವೈಭವವು ನೋಡುಗರ ಹುಬ್ಬೇರುವಂತೆ ಮಾಡುತ್ತದೆ. ಮರುಭೂಮಿಯ ನಟ್ಟ ನಡುವೆ ನಡೆಯುವ ಈ ರೇಸ್ ವೇಳೆ ಮರಳರಾಶಿಯ ಸಾನ್ನಿಧ್ಯದಲ್ಲಿ ಎಂಜಿನಿಯರಿಂಗ್ ತಾಂತ್ರಿಕತೆ ಹಾಗೂ ಚಾಲನಾ ಕೌಶಲ್ಯದ ವಿರಾಟ್ ದರ್ಶನವಾಗುತ್ತದೆ.
ಬಹ್ರೇನ್‌ನಲ್ಲಿ ನೋಡಬೇಕಾದ್ದು ಹಾಗೂ ಮಾಡಬೇಕಾದ್ದು:
ಮನಾಮಾ ಅನ್ವೇಷಣೆ: ಅತ್ಯಾಧುನಿಕ ಗಗನಚುಂಬಿ ಕಟ್ಟಡಗಳು ಹಾಗೂ ಸಾಂಪ್ರದಾಯಿಕ ಮಾರುಕಟ್ಟಗಳ ಸಮ್ಮಿಶ್ರಣದಂತಿರುವ ರಾಜಧಾನಿ ನಗರ ಇದಾಗಿದೆ.
ಬಹ್ರೇನ್ ಕೋಟೆಗೆ ಭೇಟಿ ನೀಡಿ: ಇದು ನೋಡುಗರನ್ನು ಪ್ರಾಚೀನ ಕಾಲಕ್ಕೆ ಕೊಂಡೊಯ್ಯುವ ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿದೆ.
ಮರಳುಗಾಡಿನ ಸಫಾರಿ ಅನುಭವಿಸಿ: ಡ್ಯೂನ್ ಬ್ಯಾಷಿಂಗ್‌ನ ರೋಮಾಂಚನ ಹಾಗೂ ಒಂಟೆ ಸವಾರಿಯ ಖುಷಿಗೆ ಸಾಕ್ಷಿಯಾಗಿ.
ಅಲ್ ದಾರ್ ದ್ವೀಪಗಳಲ್ಲಿ ವಿರಮಿಸಿ: ಸೂರ್ಯಕಾಂತಿಗಾಗಿ ಹಂಬಲಿಸುವವರು ಹಾಗೂ ಸಮುದ್ರ ಪ್ರಿಯರಿಗೆ ಹೇಳಿಮಾಡಿಸಿದ ತಾಣವಾಗಿದೆ. ಸುಮ್ಮನೇ ಕುಳಿತು ಪರಮಾನುಭವ ದಕ್ಕಿಸಿಕೊಳ್ಳಿ.
ಗ್ರಾನ್ ಪ್ರೀ ಅನ್ನು ‘ವೀಣಾ ವರ್ಲ್ಡ್’ನೊಂದಿಗೆ ಅನುಭವಿಸಿ
ನಿಮ್ಮ ಎಫ್ 1 ಕನಸುಗಳನ್ನು, ಜಾಗ್ರತೆಯಿಂದ ರೂಪಿಸಿದ ಪ್ರವಾಸದ ಪ್ಯಾಕೇಜ್‌ಗಳೊಂದಿಗೆ ‘ವೀಣಾ ವರ್ಲ್ಡ್’ ನನಸಾಗಿಸುತ್ತದೆ. ವಿಮಾನದ ಬುಕಿಂಗ್, ಹೋಟೆಲ್ ಹಾಗೂ ರೇಸ್-ದಿನದ ಕಾರ್ಯಕ್ರಮಗಳನ್ನು ನಮ್ಮ ಪ್ರವಾಸ ಯೋಜನೆಗಳು ಒಳಗೊಂಡಿರುತ್ತವೆ. ಮಾನಕೊ ಗ್ರ‍್ಯಾಂಡ್ ಪ್ರಿಕ್ಸ್ ಅನ್ನು ಸ್ಟ್ಯಾಂಡ್ಸ್ ನಿಂದ ಖುದ್ದು ನೋಡುವುದಿರಬಹುದು ಅಥವಾ ಬಾಕುವಿನ ಮರೆಮಾಚಿದ ಅಮೂಲ್ಯ ನೋಟಗಳನ್ನು ಅನ್ವೇಷಿಸುವುದಿರಬಹುದು, ಎಲ್ಲವನ್ನೂ ನಾವು ಎಲ್ಲವನ್ನೂ ಯೋಜಿತವಾಗಿ ನಿರ್ವಹಿಸುತ್ತೇವೆ. ನೀವು ನಿರುಮ್ಮಳವಾಗಿ ರೇಸ್‌ಗಳು ಕೊಡಮಾಡುವ ರೋಮಾಂಚನದ ಮೇಲಷ್ಟೇ ಗಮನ ಕೇಂದ್ರೀಕರಿಸಬಹುದು.
ನೀವು ಸರಿಯಾದ ಟಿಕೆಟ್ ಆಯ್ದುಕೊಳ್ಳುವುದನ್ನು ‘ವೀಣಾ ವರ್ಲ್ಡ್’ ಖಾತರಿಗೊಳಿಸುತ್ತದೆ. ಇದು ರೇಸ್ ದಿನದಂದು ನಿಮಗೆ ದಕ್ಕಲಿರುವ ಅನುಭವದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಗ್ರ್ಯಾಂಡ್ ಸ್ಟ್ಯಾಂಡ್ ಸೀಟುಗಳಲ್ಲಿ ಅದ್ಭುತ ದೃಶ್ಯಗಳು ಲಭ್ಯವಾದರೆ, ತಿರುವುಗಳಲ್ಲಿ ವೀಕ್ಷಿಸಲು ಟಿಕೆಟ್ ಕೊಳ್ಳುವುದು ಬಹು ಮೌಲಿಕ ಎಂಬುದು ಅನುಭವಿ ಅಭಿಮಾನಿಗಳ ಅಭಿಪ್ರಾಯವಾಗಿದೆ. ಅತ್ಯಂತ ನಾಟಕೀಯವಾದ ಹಿಂದಿಕ್ಕುವಿಕೆ, ಲೇಟ್ ಬ್ರೇಕಿಂಗ್ ಮತ್ತು ಹೈ-ಆಕ್ಷನ್ ಕ್ಷಣಗಳು ತಿರುವುಗಳಲ್ಲಿ ಸಂಭವಿಸುತ್ತವೆ. ಕಾರುಗಳು ಅಗ್ರಸ್ಥಾನಕ್ಕಾಗಿ ಸೆಣಸಾಡುವ ರೋಮಾಂಚಕ ದೃಶ್ಯಗಳನ್ನು ಹತ್ತಿರದಿಂದ ನೋಡಬೇಕೆಂದರೆ ನೇರರಸ್ತೆಯ ಬದಿಗಿಂತ ಪ್ರಮುಖ ತಿರುವುಗಳಲ್ಲಿ ರೇಸಿಂಗ್ ನೋಡಲು ಆದ್ಯತೆ ನೀಡಿ.
ಈ ಏಪ್ರಿಲ್‌ನಲ್ಲಿ ನಿಮ್ಮ ಎಫ್ 1 ಕನಸು ನನಸಾಗಿಸಲು ‘ವೀಣಾ ವರ್ಲ್ಡ್ ಕಸ್ಟಮೈಸ್ಡ್ ಹಾಲಿಡೇಸ್’ ವಿಶೇಷ ಪ್ಯಾಕೇಜ್‌ಗಳನ್ನು ರೂಪಿಸಿದೆ! ಬಹ್ರೇನ್‌ನಲ್ಲಿ ಹೊಸ ಸ್ಥಳವನ್ನು ಅನ್ವೇಷಿಸುವುದು ಅತ್ಯುತ್ತಮ ಆಲೋಚನೆಯೇ ಸರಿ! ಫಾರ್ಮುಲಾ 1 ಗ್ರಾನ್ ಪ್ರೀ ಉದ್ದೀಪನವನ್ನು ಅನುಭವಿಸಲು ನೀವು ಸಿದ್ಧವಿದ್ದೀರಾ? ಎಂಜಿನ್‌ಗಳ ರೊಂಯ್ ರೊಂಯ್ ಶಬ್ದ ಕಿವಿಯಲ್ಲಿ ಗುಂಯ್ ಗುಟ್ಟಿದಂತಾಗುತ್ತಿದೆ ಹಾಗೂ ರೋಮಾಂಚನಕಾರಿ ಉತ್ತೇಜನ ಸನಿಹದಲ್ಲೇ ಇದೆ- ಬನ್ನಿ, ಒಟ್ಟಾಗಿ ಪಯಣ ಬೆಳೆಸೋಣ!
Post your Comment
Please let us know your thoughts on this story by leaving a comment.