Published in the Sunday Prajavani on 06 April 2025
ತೈವಾನ್ ಹಲವು ವರ್ಷಗಳಿಂದಲೂ ನನ್ನನ್ನು ಬೆರಗುಗೊಳಿಸುತ್ತಿದೆ. ಇದು, ನಾಗಾಲೋಟದ ತಾಂತ್ರಿಕ ಪ್ರಗತಿಯೊಂದಿಗೆ ಆಳವಾದ ಪಾರಂಪರಿಕ ಬೇರುಗಳು ಮೇಳೈಸಿದ ದೇಶವಾಗಿದೆ. ಜಾಗತಿಕ ಸೆಮಿಕಂಡಕ್ವರ್ ಉತ್ಪಾದನಾ ನೆಲೆಯಾಗಿ ಪ್ರಪಂಚದ ತಂತ್ರಜ್ಞಾನ ಭೂಮಿಕೆಯನ್ನು ರೂಪಿಸುವಲ್ಲಿ ಇದು ಮಹತ್ವದ ಪಾತ್ರವನ್ನೂ ವಹಿಸುತ್ತಿದೆ. ಪ್ರಯಾಣಿಕರನ್ನು ದೇಶದ ಉತ್ತರ ಭಾಗದಿಂದ ದಕ್ಷಿಣ ಭಾಗಕ್ಕೆ ಕೇವಲ 90 ನಿಮಿಷಗಳಲ್ಲಿ ತಲುಪಿಸುವ ಭಾರಿ ವೇಗದ ಹೈ-ಸ್ಪೀಡ್ ರೈಲ್ವೆ ಜಾಲ ಇಲ್ಲಿದೆ. ತೈವಾನ್ ಬಗ್ಗೆ ಪ್ರತಿ ಬಾರಿ ಯಾವುದೇ ವಿಷಯ ಓದಿ ತಿಳಿದಾಗಲೂ ಆ ದೇಶದ ಬಗೆಗಿನ ನನ್ನ ಕುತೂಹಲ ಹೆಚ್ಚಾಗುತ್ತಲೇ ಸಾಗಿದೆ.
ನನಗೊಬ್ಬನಿಗೆ ಮಾತ್ರ ಹೀಗಲ್ಲ; ಈ ದೇಶದ ಬಗ್ಗೆ ಬಹುತೇಕ ಎಲ್ಲರಿಗೂ ಇಂಥದ್ದೇ ಕುತೂಹಲವಿದೆ. ಇದೇ ಆಸಕ್ತಿಯೊಂದಿಗೆ ಆ ದೇಶದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುತ್ತಾ ಹೋಗುತ್ತಿರುವಾಗಲೇ ನಮ್ಮ “ವೀಣಾ ವರ್ಲ್ಡ್” ಪ್ರಾಡಕ್ಟ್ ಟೀಮ್ ನವರು ತೈವಾನ್‌ಗೆ ಪ್ರವಾಸ ಯೋಜನೆ ರೂಪಿಸಲು ನಿರ್ಧರಿಸಿದರು. ಜಪಾನ್, ಕೊರಿಯಾ, ಹಾಂಕಾಂಗ್, ಮಕಾವ್‌ಗಳೊಂದಿಗೆ ಸುಗಮ ಸಂಪರ್ಕ ಹೊಂದಿರುವ ತೈವಾನ್, ಪೂರ್ವ ಏಷ್ಯಾ ಖಂಡವನ್ನು ಪೂರ್ತಿಯಾಗಿ ಕಣ್ತುಂಬಿಕೊಳ್ಳಲು ಬಯಸುವ ಪ್ರವಾಸಿಗರಿಗೆ ಬಹು-ದೇಶಗಳ ಪ್ರವಾಸ ಪಟ್ಟಿಯಲ್ಲಿ ಸೇರಿಸಲು ಸೂಕ್ತವಾಗಿದೆ.
ಒಮ್ಮೆ ಮುಂಬೈನಲ್ಲಿ ಅತ್ಯಂತ ದೊಡ್ಡದಾದ ಪ್ರವಾಸಿ ಪ್ರದರ್ಶನವೊಂದರಲ್ಲಿ ಪ್ರಪಂಚದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರವಾಸೋದ್ಯಮ ಪಾಲುದಾರರನ್ನು ಭೇಟಿಯಾಗುವ ಅವಕಾಶ ಒದಗಿಬಂದಿತ್ತು. ಆಗ, ನಾನು ತೈವಾನ್ ಮಳಿಗೆಗೆ ಓಡೋಡಿ ಹೋಗಿದ್ದೆ. ಅಲ್ಲಿ ಮಾತನಾಡಲು ಆರಂಭಿಸಿದ ಕೆಲವೇ ನಿಮಿಷಗಳೊಳಗೆ ತೈವಾನ್‌ನಲ್ಲಿ ಎಷ್ಟೆಲ್ಲಾ ಇದೆ ಎಂಬುದು ನನ್ನನ್ನು ಉತ್ತೇಜಿಸಿ ಸೆಳೆಯಿತು.
ಅದರಲ್ಲೂ, ಒಂದು ಸಂಗತಿಯಂತೂ ನನ್ನನ್ನು ವಿಶೇಷವಾಗಿ ಸೆಳೆಯಿತು; ಅದ್ಯಾವುದೆಂದರೆ, ‘ನಿಶ್ಚಲ ಜಲ ಧ್ಯಾನಾಚರಣೆ’. ಅಂದಂತೆ, ತೈವಾನ್ ದೇಶದ ಅತ್ಯಂತ ದೊಡ್ಡ ಹಾಗೂ ಪ್ರಮುಖ ಬೌದ್ಧವಿಹಾರಗಳಲ್ಲಿ ಒಂದಾದ ಚುಂಗ್ ತೈ ಚಾನ್ ಬೌದ್ಧವಿಹಾರವು ಪ್ರಶಾಂತ ವಾತಾವರಣ, ಜೆನ್ ಬೋಧನೆಗಳು, ಧ್ಯಾನಾಚರಣೆಗಳು, ಮನಸ್ಸನ್ನು ಶಾಂತಗೊಳಿಸುವ ಮಾರ್ಗೋಪಾಯಗಳ ಬಗ್ಗೆ ಅರಿವು ಮೂಡಿಸುವುದಕ್ಕೆ ಹೆಸರಾಗಿದೆ. ಇವೆಲ್ಲವೂ, ‘ನಿಶ್ಚಲ ಜಲ ಧ್ಯಾನ”(ಸ್ಟಿಲ್ ವಾಟರ್ ಮೆಡಿಟೇಷನ್)ದ ಪರಿಕಲ್ಪನೆಯೊಂದಿಗೆ ಹೊಂದಿಕೊಳ್ಳುತ್ತವೆ.
ಈ ಧ್ಯಾನಾಚರಣೆಯಲ್ಲಿ ಮಗ್ನರಾದವರು ಮೌನವಾದ ಸ್ಥಳದಲ್ಲಿ ನೀರಿರುವ ಬೋಗುಣಿಯನ್ನು ಹಿಡಿದು ಆತ್ಮಾವಲೋಕನದ ಸ್ಥಿತಿಯಲ್ಲಿರುತ್ತಾರೆ. ಮನಸ್ಸು ನಿಜವಾಗಿಯೂ ಶಾಂತವಾಗಿದ್ದು, ತಾಕಲಾಟಗಳಿಂದ ಮುಕ್ತವಾಗಿದ್ದರೆ ಬೋಗುಣಿಯಲ್ಲಿನ ನೀರು ಕೂಡ ಅಲುಗಾಡದಂತೆ ಇರುತ್ತದೆ ಎಂಬುದು ಇದರ ಹಿಂದಿರುವ ತತ್ತ್ವವಾಗಿದೆ. ಇದು, ಆಂತರಿಕ ಶಾಂತಿ ಹಾಗೂ ಪ್ರಜ್ಞಾಪೂರ್ವಕತೆಯ ರೂಪಕವೂ ಆಗಿದೆ. ಸಾಮಾನ್ಯವಾಗಿ ತೈವಾನ್ ಪ್ರವಾಸ ಮಾಡುವವರು ಸಹಜವಾಗಿಯೇ ಅದರ ಚಲನಶೀಲ ರಾಜಧಾನಿಯಾದ ತೈಪೆದಿಂದ ತಮ್ಮ ಯಾನ ಆರಂಭಿಸುತ್ತಾರೆ. ಸದಾ ಚಟುವಟಿಕೆಗಳಿಂದ ಕೂಡಿದ ಈ ನಗರವು ತೈಪೆ 101 ಕಟ್ಟಡದ ನೆಲೆಯೂ ಆಗಿದೆ. ದುಬೈನಲ್ಲಿ 2010ರಲ್ಲಿ ಬುರ್ಜ್ ಖಲೀಫಾ ನಿರ್ಮಾಣಗೊಳ್ಳುವವರೆಗೆ ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಟ್ಟಡವಿದು. ಇಲ್ಲಿನ 89ನೇ ಅಂತಸ್ತಿನಲ್ಲಿರುವ ವೀಕ್ಷಣಾಗೋಪುರವು ನಗರದ ವಿಹಂಗಮ ನೋಟವನ್ನು ಲಭ್ಯವಾಗಿಸುತ್ತದೆ.
ಆಕರ್ಷಕ ನಗರವಾದ ತೈಪೆಯು ಸೊಬಗಿನ ಕಾಲ್ನಡಿಗೆ ದಾರಿಗಳಿಂದಲೂ ಮುದ ನೀಡುತ್ತದೆ. ತೈಪೆ 101ರ ಅತ್ಯುತ್ತಮ ನೋಟಗಳನ್ನು ನೋಡಬಯಸುವವರು ಒಂದೂವರೆಯಿAದ ಎರಡು ಗಂಟೆಗಳ ಕಿರು ಅವಧಿಯ ಕಾಲ್ನಡಿಗೆ ದಾರಿಯ ಎಲಿಫೆಂಟ್ ಮೌಂಟನ್ ಟ್ರೇಲ್ ಅನ್ನು ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಜೊತೆಗೆ, ತೈಪೆಯೊಂದರಲ್ಲೇ ಕಾಲ್ನಡಿಗೆಗೆ ಹೇಳಿ ಮಾಡಿಸಿದ ಹತ್ತಕ್ಕೂ ಹೆಚ್ಚು ದಾರಿಗಳಿವೆ. ಇನ್ನು, ತೈವಾನ್‌ನ ಪರ್ವತ ಪ್ರದೇಶವಂತೂ ಚಾರಣಪ್ರಿಯರಿಗೆ ದೇಶದಾದ್ಯಂತ ಅಸಂಖ್ಯ ಅವಕಾಶಗಳನ್ನು ಕೊಡಮಾಡುತ್ತದೆ.
ತೈವಾನಿನ ಭೌಗೋಳಿಕ ವಿಸ್ಮಯಗಳನ್ನು ಕಣ್ತುಂಬಿಕೊಳ್ಳಬೇಕೆಂದರೆ ಅಲ್ಲಿನ ಉತ್ತರ ಕರಾವಳಿಯ ವಾನ್ಲಿ ಜಿಲ್ಲೆಯಲ್ಲಿರುವ ಯೆಹಲ್ಯು ಜಿಯೋಪಾರ್ಕ್ಗೆ ತೆರಳಬೇಕು. ಇಲ್ಲಿ, ಗಾಳಿ ಮತ್ತು ಸಮುದ್ರದ ಘರ್ಷಣೆಯು ಅದ್ಭುತ ಶಿಲಾಕೃತಿಗಳನ್ನು ರೂಪಿಸಿದೆ. ರಾಣಿ ಎಲಿಜಬೆತ್ ಮುಖಭಾವವನ್ನು ಹೋಲುವ ಹೆಸರಾಂತ ಪ್ರಾಕೃತಿಕ ಶಿಲಾರಚನೆಯಾದ ಕ್ವೀನ್ಸ್ ಹೆಡ್ ಇಲ್ಲಿ ಮನಸೂರೆಗೊಳ್ಳುತ್ತದೆ. ಇಲ್ಲಿರುವ ಇತರ ಶಿಲಾಕೃತಿಗಳಾದ ಸೀ ಕ್ಯಾಂಡಲ್ಸ್, ಫೇರಿ ಷೂ, ದಿ ಐಸ್ ಕ್ರೀಮ್ ರಾಕ್, ದಿ ಕಿಸ್ಸಿಂಗ್ ರಾಕ್‌ಗಳು ನೋಡುಗರಿಗೆ ಬೇರೆಯದೇ ಲೋಕದಲ್ಲಿದ್ದೇವೇನೋ ಎಂದು ಭಾಸವಾಗುವಂತೆ ಮಾಡುತ್ತವೆ.
ಯೆಹಲ್ಯದಿಂದ ಅಲ್ಪ ದೂರ ಪಯಣಿಸಿದರೆ ಜೋಫಾನ್ ತಲುಪಬಹುದು. ಇದು, 1940ರಲ್ಲಿ ಚಿನ್ನದ ಗಣಿಗಾರಿಕೆ ಪ್ರವರ್ಧಮಾನಕ್ಕೆ ಬಂದ ದಿನಗಳಲ್ಲಿ ಮುನ್ನೆಲೆಗೆ ಬಂದ ಬೆಟ್ಟದ ತಪ್ಪಲಿನ ಸೊಬಗಿನ ಹಳ್ಳಿಯಾಗಿದೆ. ಇಲ್ಲಿನ ಮನಮೋಹಕ ಓಣಿಯಂತಹ ರಸ್ತೆಗಳು, ಪ್ರಸಿದ್ಧ ಸಾಂಪ್ರದಾಯಿಕ ಕೆಂಪು ದೀಪಗಳಿಂದ (ರೆಡ್ ಲ್ಯಾಂಟರ್ನ್) ಕಂಗೊಳಿಸುವ ಬೀದಿಗಳು ಹಾಗೂ ಕರಾವಳಿಯ ನಿಬ್ಬೆರಗಾಗಿಸುವ ನೋಟಗಳಿಂದಾಗಿ ಇದು ತೈವಾನಿನ ಅತ್ಯಂತ ಸಮ್ಮೋಹಕ ತಾಣಗಳಲ್ಲಿ ಒಂದೆAದು ಜನಜನಿತವಾಗಿದೆ. ಮುಂದೆ, ಶಿವೆನ್‌ನಲ್ಲಿ ಬೆರಗು ಮೂಡಿಸುವ ಶಿವೆನ್ ಜಲಪಾತಕ್ಕೆ ನೀವು ಸಾಕ್ಷಿಯಾಗುತ್ತೀರಿ. ಇದನ್ನು ತೈವಾನಿನ “ಪುಟ್ಟ ನಯಾಗರಾ ಜಲಪಾತ” ಎಂದೇ ಬಣ್ಣಿಸಲಾಗುತ್ತದೆ. ಇಲ್ಲಿ ತೈವಾವಿನ ವಿಶಿಷ್ಟ ಸಾಂಪ್ರದಾಯಿಕ ವಿಧಿಯೊಂದನ್ನು ಕೂಡ ನೀವು ಖುದ್ದು ಆಚರಿಸಬಹುದು; ಏನೆಂದರೆ, ನಿಮ್ಮ ಬಯಕೆಗಳನ್ನು ಬೆಳಕಿನ ಆಕಾಶಬುಟ್ಟಿ (ಸ್ಕೈ ಲ್ಯಾಂಟರ್ನ್) ಮೇಲೆ ಬರೆದು ಅದನ್ನು ಸ್ಮರಣಿಕೆಗಳು ಹಾಗೂ ಸ್ಥಳೀಯ ಖಾದ್ಯಗಳಿಗೆ ಮನೆಮಾತಾದ ಶಿವೆನ್‌ನ ಓಲ್ಡ್ ಸ್ಟ್ರೀಟ್‌ನಲ್ಲಿ ನಭಕ್ಕೇರಿಸಬಹುದು.
ರಾಜಧಾನಿ ನಗರ ತೈಪೆ ಕುರಿತು ಇನ್ನಷ್ಟು ಹೇಳುವುದಾದರೆ, ಚ್ಯಾಂಗ್ ಕೈ-ಶೆಕ್ ಸ್ಮಾರಕ ಸಭಾಂಗಣದಲ್ಲಿ ಇತಿಹಾಸ ಹಾಗೂ ಸಂಸ್ಕೃತಿ ಸಂಯೋಜನೆಯನ್ನು ದರ್ಶಿಸಬಹುದು. ರಕ್ಷಣಾ ಉಸ್ತುವಾರಿ ಹಸ್ತಾಂತರ ವಿಧಿಯನ್ನೂ ವೀಕ್ಷಿಸಬಹುದು. ಇಲ್ಲಿನ ನ್ಯಾಷನಲ್ ಪ್ಯಾಲೆಸ್ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಚೀನಾ ಕಲಾಕೃತಿಗಳ ಅತ್ಯಂತ ದೊಡ್ಡ ಸಂಗ್ರಹವನ್ನು ನೋಡಿ ತೈವಾನಿನ ಐತಿಹಾಸಿಕ ಹಾಗೂ ಕಲಾ ಪರಂಪರೆಯ ಬಗ್ಗೆ ವಿಸ್ತೃತವಾಗಿ ತಿಳಿಯಬಹುದು. ತೈಪೆಯಿಂದ ಹೈ-ಸ್ಪೀಡ್ ರೈಲಿನಲ್ಲಿ ಪಯಣಿಸಿ ತಾಯ್ ಚಂಗ್ ತಲುಪಬಹುದು. ದೇಶದ ಎರಡನೇ ಅತ್ಯಂತ ದೊಡ್ಡ ನಗರವಾದ ಇದು, ಸನ್ ಮೂನ್ ಸರೋವರಕ್ಕೆ ತೆರಳಲು ಪ್ರಶಸ್ತ ಸ್ಥಳವೂ ಆಗಿದೆ. ಒಂದು ಬದಿ ಸೂರ್ಯನ ಆಕಾರದಲ್ಲಿ ಹಾಗೂ ಮತ್ತೊಂದು ಬದಿಯಲ್ಲಿ ಅರ್ಧಚಂದ್ರಾಕಾರದಲ್ಲಿರುವ ಪರ್ವತಗಳ ನಡುವಿನ ರಮಣೀಯ ಸರೋವರವು ಕಡಿದಾದ ಪರ್ವತಗಳು, ಬೌದ್ಧ ದೇಗುಲಗಳು ಹಾಗೂ ಎತ್ತರದ ಪಗೋಡಾದಿಂದ ಸುತ್ತುವರಿದಿದೆ.
ಇಟಾ ತಾವ್‌ದಿಂದ ಮೂಲನಿವಾಸಿಗಳ ಸಾಂಸ್ಕೃತಿಕ ಗ್ರಾಮವಾದ ಫೋರ್ಮೋಸನ್‌ಗೆ ರೋಪ್ ವೇನಲ್ಲಿ ತೆರಳಿದರೆ ಅತ್ಯುತ್ತಮ ದೃಶ್ಯಗಳು ಅನಾವರಣಗೊಳ್ಳುತ್ತವೆ. ಇಲ್ಲವೇ, ದೋಣಿ ಸವಾರಿ ಮೂಲಕವಾಗಿಯೂ ಸರೋವರವನ್ನು ಅನ್ವೇಷಿಸಬಹುದು. ಇಲ್ಲಿ ಸರೋವರದ ಹಾಗೂ ಸುತ್ತುವರಿದ ಪರ್ವತಗಳ ವಿಹಂಗಮ ನೋಟ ಲಭ್ಯವಾಗಿಸುವ ತ್ಸಿಹ್‌ಎನ್ ಪಗೋಡಕ್ಕೆ ಭೇಟಿ ನೀಡುವ ಅವಕಾಶವನ್ನು ಮಾತ್ರ ಮರೆಯಬಾರದು.
ಟಾಯ್ ಚಂಗ್‌ನಲ್ಲಿನ ಮತ್ತೊಂದು ಅಜ್ಞಾತ ರತ್ನವೆಂದರೆ, ಅದು ರೈನ್ ಬೋ ವಿಲೇಜ್. ಹಿರಿಯ ಮಾಜಿ ಯೋಧ ಹುವಾಂಗ್ ಯಾಂಗ್-ಫು ರೂಪಿಸಿದ ವರ್ಣವೈಭವದ ಬಯಲು ದೃಶ್ಯಕಲೆಯು ಇಲ್ಲಿ ಗಮನ ಸೆಳೆಯುತ್ತದೆ. ಹುವಾಂಗ್ ಯುಂಗ್-ಫು ತಾನು ಬಹುವಾಗಿ ಪ್ರೀತಿಸುತ್ತಿದ್ದ ತನ್ನ ಮನೆಯನ್ನು ಡೆವಲಪರ್‌ಗಳಿಗೆ ಬಿಟ್ಟುಕೊಡಬೇಕಾದ ಹಂತದಲ್ಲಿದ್ದ. ಆ ಗ್ರಾಮದ ಬಹುತೇಕರು ಅದಾಗಲೇ ತಂತಮ್ಮ ಮನೆಗಳನ್ನು ತೊರೆದು ಆಗಿತ್ತು. ಹುವಾಂಗ್ ಮಾತ್ರವೇ 11 ಮನೆಗಳೊಂದಿಗೆ ಅಲ್ಲಿ ಉಳಿದಿದ್ದ. ನಂತರ, ಆತ ಅಲ್ಲಿ ಏನು ಮಾಡಿದ?
ತನ್ನ ಪ್ರೀತಿಯ ನಿವಾಸ ಹಾಗೂ ಗ್ರಾಮಕ್ಕೆ ವಿದಾಯ ಹೇಳುವ ಸೂಚಕವಾಗಿ ಮತ್ತು ಕಾಲ ದೂಡುವುದಕ್ಕಾಗಿ ಹುವಾಂಗ್ ಯಾಂಗ್-ಫು ತನ್ನ ನಿವಾಸದ ಒಳಭಾಗದಲ್ಲಿ ವರ್ಣಚಿತ್ರ ರಚಿಸಲು ಶುರು ಹಚ್ಚಿಕೊಂಡ. ಮೊದಲಿಗೆ, ಒಂದೆರಡು ಪೀಠೋಪಕರಣಗಳ ಮೇಲೆ ಪೇಂಟಿAಗ್ ಮಾಡಿದ ಮೇಲೆ ಅದು ಗೋಡೆಯ ಮೇಲಕ್ಕೆ ವಿಸ್ತರಣೆಗೊಂಡಿತು. ತದನಂತರ, ತನ್ನ ನೆರೆಯಲ್ಲಿದ್ದ ಪರಿತ್ಯಕ್ತಗೊಂಡಿದ್ದ ಮನೆಗಳಿಗೂ ಪಸರಿಸಿತು. ಹೆಚ್ಚಾಗಿ ಕೌಟುಂಬಿಕ ಪ್ರೀತಿ, ಸ್ನೇಹ, ಸಂತೋಷ ಹಾಗೂ ಪ್ರಕೃತಿಯನ್ನು ಬಿಂಬಿಸುವ ಕಲಾಕೃತಿಗಳು ಇವಾಗಿವೆ.
ಹೀಗೆ, ತನ್ನ ಪ್ರೀತಿಯ ನಿವಾಸಕ್ಕೆ ವಿದಾಯ ಸಲ್ಲಿಸಲು ಹುವಾಂಗ್ ಆರಂಭಿಸಿದ ಭಾವಪೂರ್ಣ ಕ್ರಿಯೆಯು ವರ್ಣಮಯ ಬಯಲು ಗ್ಯಾಲರಿಯಾಗಿ ಮೈದಾಳಿ ಈಗ ಪ್ರಪಂಚದೆಲ್ಲೆಡೆಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಇನ್ನಷ್ಟು ದಕ್ಷಿಣಕ್ಕೆ ಹೋದರೆ, ಕೌಶಾಂಗ್ ತನ್ನ ಕಡಲದಂಡೆಯ ಸೊಬಗಿನಿಂದ ಆಪ್ತವಾಗುತ್ತದೆ. ಸಮೃದ್ಧ ಸಂಸ್ಕೃತಿ, ಸೂಕ್ಷ್ಮ ಕೆತ್ತನೆ ವಿನ್ಯಾಸಗಳಿಂದ ಗಮನಸೆಳೆವ ದೇಗುಲಗಳು ಹಾಗೂ ಪಗೋಡಾಗಳಿಂದ ಕೂಡಿದ ಲೋಟಸ್ ಪಾಂಡ್ ನಗರದ ಹೆಗ್ಗುರುತುಗಳಲ್ಲಿ ಒಂದಾಗಿದೆ. ತೈವಾನಿನ ಅತ್ಯಂತ ಮಹತ್ವದ ಬೌದ್ಧ ತಾಣಗಳಲ್ಲಿ ಒಂದಾದ ಫೋ ಗ್ವಾಂಗ್ ಶಾನ್ ಬೌದ್ಧವಿಹಾರ, ಭಿತ್ತಿಚಿತ್ರಗಳು ಹಾಗೂ ಚಿತ್ರಶಾಲೆಗಳಿಗೆ ಹೆಸರಾದ ಪೈಯರ್ 2 ಆರ್ಟ್ ಸೆಂಟರ್, ಜಗತ್ತಿನ ಅತ್ಯಂತ ದೊಡ್ಡ ಗಾಜಿನ ಕಲಾಕೃತಿಯಾದ ಫೋರ್ಮೊಸಾ ಬುಲೆವಾರ್ಡ್ ಸ್ಟೇಷನ್‌ನಲ್ಲಿರುವ ಡೋಮ್ ಆಫ್ ಲೈಟ್ ಸಮ್ಮೋಹಕಗೊಳಿಸುತ್ತವೆ.
ಇಲ್ಲಿಂದ ಕಡಲ ದಂಡೆಗಳು, ಸಾಗರ ಖಾದ್ಯಗಳು ಹಾಗೂ ವಿಶ್ರಾಂತಿ ಪಡೆಯಲು ಹೇಳಿ ಮಾಡಿಸಿದಂತಿರುವ ಚೀಜಿನ್ ದ್ವೀಪಕ್ಕೆ ದೋಣಿಯಲ್ಲಿ ತೆರಳಬಹುದು.
ಇನ್ನಷ್ಟು ದಕ್ಷಿಣಕ್ಕೆ ಹೋದರೆ ಕ್ಯಾಂಟಿAಗ್ ತಲುಪಬಹುದು. ಇದು ತೈವಾನಿನ ಉಷ್ಣವಲಯದಲ್ಲಿರುವ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ವರ್ಷಪೂರ್ತಿ ಬೆಚ್ಚನೆಯ ಹವಾಮಾನ, ಮರಳರಾಶಿಯ ಸಾಗರ ತೀರಗಳು, ನಳನಳಿಸುವ ಹಸಿರಿನಿಂದ ಕೂಡಿದ ಕ್ಯಾಂಟಿಂಗ್ ಮೈಚೆಲ್ಲಿ ವಿರಮಿಸಲು ಹೇಳಿಮಾಡಿಸಿದಂತಿದೆ. ತೈವಾನಿನ ಅತ್ಯುತ್ತಮ ಡೈವಿಂಗ್ ಸ್ಪಾಟ್‌ಗಳು ಕೂಡ ಇಲ್ಲಿದ್ದು, ಕಡಲ ಗರ್ಭದಲ್ಲಿ ಹುದುಗಿಸಿಕೊಂಡಿರುವ ವೈವಿಧ್ಯದಿಂದಲೂ ಗಮನ ಸೆಳೆಯುತ್ತದೆ.
ದ್ವೀಪದ ಪೂರ್ವ ಭಾಗದಲ್ಲಿರುವ ಟೊರೊಕೊ ರಾಷ್ಟ್ರೀಯ ಉದ್ಯಾನದಲ್ಲಿರುವ 18 ಕಿ.ಮೀ. ಉದ್ದದ ಅಮೃತಶಿಲಾ ಭಿತ್ತಿಯ ಕಮರಿಯು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿ ರಮಣೀಯ ಪರಿಸರದಲ್ಲಿ ಕಾಲ್ನಡಿಗೆಯಲ್ಲಿ ಸಾಗಿ ಮುಗಿಲೆತ್ತರದ ಕಡಿದಾದ ಶೃಂಗಗಳನ್ನು ನೋಡುತ್ತಾ ಅಚ್ಚರಿ ಪಡಬಹುದು ಅಥವಾ ಬಂಡೆಗಳೊಳಗೆ ಕೊರೆದ ಸುರಂಗಗಳ ಮೂಲಕ ವಾಹನ ಚಾಲನೆ ಮಾಡುತ್ತಾ ಹೋಗಬಹುದು. ತೈವಾನಿನ ಪ್ರಾಕೃತಿಕ ಅದ್ಭುತವಾದ ಇದು ನೋಡುಗರ ಮನಸೂರೆಗೊಂಡು ಎಂದೆAದೂ ಅಚ್ಚಳಿಯದ ನೆನಪಾಗಿ ಉಳಿಯುತ್ತದೆ.
ತೈವಾನಿನಲ್ಲಿ ಸುಂದರ ಭೂಪ್ರದೇಶಗಳು ಹಾಗೂ ದೇಗುಲಗಳ ಜೊತೆಗೆ ವಸಂತ ಕಾಲದಲ್ಲಿ ಚರ‍್ರಿ ಅರಳುವ ನಿಸರ್ಗ ವಿದ್ಯಮಾನವನ್ನೂ ಕಣ್ತುಂಬಿಕೊಳ್ಳಬಹುದು. ಜಪಾನ್ ಮತ್ತು ಕೊರಿಯಾದಲ್ಲಿ ಚರ‍್ರಿ ಅರಳುವ ಸಮಯ ಹೇಗೆ ಮುದ ನೀಡುತ್ತದೋ ತೈವಾನ್‌ನಲ್ಲಿ ಕೂಡ ಅದು ಅಷ್ಟೇ ಹಿತಕರ. ತೈವಾನಿನಲ್ಲಿ ಸೈಕಲ್ ಸವಾರಿ ಹೆಚ್ಚೆಚ್ಚು ಜನಪ್ರಿಯವಾಗುತ್ತಿದ್ದು, ವ್ಯವಸ್ಥಿತ ಬೈಕ್ ಪಥಗಳಲ್ಲಿ ರಮಣೀಯ ಕಡಲದಂಡೆಯ ಮಾರ್ಗಗಳ ಮೂಲಕ ಹಾದು ಸೈಕಲ್ ಸವಾರಿ ಮಾಡಿಕೊಂಡೇ ಇಡೀ ನಗರವನ್ನು ಸುತ್ತುಹಾಕಬಹುದು.
ಸಸ್ಯಾಹಾರಿಗಳಿಗೆ ಇಲ್ಲವೇ ದೇಗುಲಗಳ ಆಹಾರ ಸೇವನೆ ಬಯಸುವವರಿಗೆ ಯಾವ ಕೊರತೆಯೂ ಎದುರಾಗದು. ತೈವಾನಿನ ಬೌದ್ಧ ಪರಂಪರೆಯು ಸಸ್ಯಾಹಾರ ಖಾದ್ಯಗಳ ವಿಪುಲ ಲಭ್ಯತೆಯನ್ನು ಖಾತರಿಗೊಳಿಸುತ್ತದೆ.
ತೈವಾನ್ ವೀಸಾಕ್ಕೆ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ಅದರಲ್ಲೂ, ಅಮೆರಿಕ, ಷೆಂಜೆನ್, ಯುಕೆ ಅಥವಾ ಜಪಾನ್ ವೀಸಾ ಹೊಂದಿದ್ದರೆ ಈ ಪ್ರಕ್ರಿಯೆಯು ಇನ್ನಷ್ಟು ಸಲೀಸಾಗಿದ್ದು, ಕೇವಲ ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕಾಗುತ್ತದೆ. ಆಕರ್ಷಕ ಹೈ-ಟೆಕ್ ನಗರಗಳು, ಸಾಂಸ್ಕೃತಿಕ ಭಂಡಾರಗಳು, ನಿಬ್ಬೆರಗಾಗಿಸುವ ಭೂಪ್ರದೇಶಗಳು ಹಾಗೂ ಅವಿಸ್ಮರಣೀಯ ಅನುಭವಗಳ ಮೇಳೈಸುವಿಕೆಯಿಂದ ತೈವಾನ್ ಅನ್ವೇಷಣೆಗೆ ಸೂಕ್ತವಾದ ಪ್ರೇಕ್ಷಣೀಯ ದೇಶವಾಗಿದೆ. ನಾನು ಫೆಬ್ರುವರಿಯಲ್ಲಿ ಯೋಜನೆ ಹಾಕಿಕೊಂಡಿದ್ದ ಪ್ರಕಾರ, ಇತ್ತೀಚೆಗಷ್ಟೇ ತೈವಾನಿನ ಪ್ರವಾಸ ಪೂರೈಸಿ ವಾಪಸ್ಸಾಗಿದ್ದೇನೆ. ನೀವು ಮತ್ತೇಕೆ ಕಾಯುತ್ತಿದ್ದೀರಿ?
Post your Comment
Please let us know your thoughts on this story by leaving a comment.