Published in the Sunday Vijay Karnataka on 16 February, 2025
“ಇದನ್ನು ಈ ರೀತಿ ಮಾಡಿದ್ದು ಏಕೆ?” ಎಂದು ನಾನು ಕೇಳುತ್ತಿದ್ದಂತೆಯೇ, ‘ನೀವು ಹೇಳಿದಿರಲ್ಲ
ಅದಕ್ಕೆ’ ಎಂಬಉತ್ತರ ಬರುತ್ತಿತ್ತು. ಅದು ನನ್ನ ಮನಸ್ಸಿನಲ್ಲಿ ಎಚ್ಚರಿಕೆಯ ಗಂಟೆಯಾಗಿ ರಿಂಗಣಿಸಿತು.
ನಾನೊಮ್ಮೆ ಸಿಂಗಪುರದಲ್ಲಿ ನಗರ ಯೋಜನೆ ಕೇಂದ್ರಕ್ಕೆ (ಅರ್ಬನ್ ಪ್ಲ್ಯಾನಿಂಗ್ ಸೆಂಟರ್) ಭೇಟಿ ಕೊಟ್ಟಿದ್ದೆ. ಅಲ್ಲಿ ಸಿಂಗಪುರದ ಮುಂದಿನ ಐವತ್ತು ವರ್ಷಗಳ ಕನಸನ್ನು ಪ್ರವಾಸಿಗರು ಹಾಗೂ ಸ್ಥಳೀಯರು ನೋಡಲು ಸಾಧ್ಯವಾಗುವಂತೆ ಪ್ರದರ್ಶಿಸಲಾಗಿತ್ತು. ಅದನ್ನು ನೋಡಿದ ನಾನು, ನಮ್ಮ ದೇಶ, ಪ್ರತಿಯೊಂದು ರಾಜ್ಯ ಹಾಗೂ ಪ್ರತಿಯೊಂದು ನಗರವೂ ಇದೇ ರೀತಿಯ ಯೋಜನೆ ಹೊಂದಿರಬೇಕು ಎಂದುಕೊAಡಿದ್ದೆ, ಒಂದೊಮ್ಮೆ ಜನಸಾಮಾನ್ಯರಾದ ನಮಗೆ, ನಮ್ಮ ನಗರವು ಮುಂದಿನ ಒಂದು ವರ್ಷದಲ್ಲಿ, ಐದು ವರ್ಷಗಳಲ್ಲಿ, ಹತ್ತು ವರ್ಷಗಳಲ್ಲಿ ಹಾಗೂ ಇಪ್ಪತ್ತೈದು ವರ್ಷಗಳಲ್ಲಿ ಹೇಗೆ ಸಾಗುತ್ತದೆ ಎಂಬುದರ ಹೆಜ್ಜೆಜಾಡಿನ ಸ್ಪಷ್ಟ ಚಿತ್ರಣ ಲಭ್ಯವಾದರೆ, ಅಂತಹ ಪ್ರಸ್ತಾವಗಳು ನಮ್ಮ ಕಣ್ಣ ಮುಂದೆಯೇ ಸಾಕಾರಗೊಳ್ಳುತ್ತಿದ್ದರೆ, ನಮ್ಮ ‘ಇಂದು’ ಎನ್ನುವುದು ‘ನಿನ್ನೆ’ಗಿಂತ ಉತ್ತಮಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದರೆೆ ಅಬ್ಬರದ ಚುನಾವಣಾ ಪ್ರಚಾರಗಳ ಅಗತ್ಯವಾದರೂ ಏನಿರುತ್ತದೆ?
ಅಂದAತೆ, ನಮಗೆ ದೊಡ್ಡ ದೊಡ್ಡ ನಿರೀಕ್ಷೆಗಳೇನೂ ಇಲ್ಲ. ಉತ್ತಮ ರಸ್ತೆಗಳು, ಗುಂಡಿಗೊಟರುಗಳಿಲ್ಲದ ಪಾದಚಾರಿ ಮಾರ್ಗಗಳು, ಯೋಗ್ಯ ನೀರು, ಶುದ್ಧ ಗಾಳಿ, ನಿರಂತರ ವಿದ್ಯುತ್ತು, ಆರ್ಥಿಕ ದುರ್ಬಲ ವರ್ಗಗಳನ್ನು ಒಳಗೊಳ್ಳುವಂತಹ ಹಾಗೂ ಕಲಿಕೆಯಿಂದ ಯಾರೂ ವಂಚಿತರಾಗುವುದಿಲ್ಲ ಎಂಬುದನ್ನು ಖಾತರಿಗೊಳಿಸುವ ಶಿಕ್ಷಣ ವ್ಯವಸ್ಥೆ ಇವು ನಮ್ಮ ಬೇಡಿಕೆಗಳಾಗಿರುತ್ತವೆ. ನಮ್ಮ ಸನ್ಮಾನ್ಯ ಪ್ರಧಾನಮಂತ್ರಿಯವರು “ಇಂಡಿಯಾ ಅಟ್ ಹಂಡ್ರೆಡ್, ಇಂಡಿಯಾ ೨೦೪೭’ (ಭಾರತದ ೧೦೦ ವರ್ಷ, ಭಾರತ ೨೦೪೭) ಎಂಬ ಮಹತ್ವಾಕಾಂಕ್ಷೆಯ ಯೋಜನೆಯ ಸುಳಿವು ನೀಡಿದ್ದಾರೆ. ಅದು ಸಾಕಾರಗೊಂಡಿದ್ದೇ ಆದರೆ ನಿಜವಾಗಿಯೂ ಅದ್ಭುತವನ್ನೇ ಕಾಣಬಹುದೇನೋ. ಇದು ನಮ್ಮ ಉತ್ಸಾಹ ಹಾಗೂ ದಕ್ಷತೆ ಹೆಚ್ಚಿಸಿಕೊಳ್ಳಲು ಉತ್ತೇಜಿಸಿ ಭವಿಷ್ಯವನ್ನು ನಿರೀಕ್ಷೆಯೊಂದಿಗೆ ಎದುರು ನೋಡುವಂತೆ ಮಾಡಿದೆ.
ಯಾವುದೇ ಒಂದು ದೇಶವು ಇಪ್ಪತ್ತೈದು ವರ್ಷಗಳಿಂದ ಐವತ್ತು ವರ್ಷಗಳವರೆಗಿನ ಅವಧಿಯ ಅಭಿವೃದ್ಧಿ ಯೋಜನೆಯನ್ನು ಕಡ್ಡಾಯವಾಗಿ ಹೊಂದಿರಬೇಕು. ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಈ ಪೂರ್ವನಿರ್ಧರಿತ ಅಭಿವೃದ್ಧಿ ಗುರಿಗಳನ್ನು ಈಡೇರಿಸುವ ದಿಸೆಯಲ್ಲಿ ಕಾರ್ಯಗಳು ಆಗಬೇಕು. ಎಷ್ಟೋ ಪ್ರಮುಖ ಕಾರ್ಪೊರೇಷನ್‌ಗಳು ಕೂಡ ಹತ್ತು, ಇಪ್ಪತ್ತು ಅಥವಾ ಐವತ್ತು ವರ್ಷಗಳ ಕಾರ್ಯತಾಂತ್ರಿಕ ಯೋಜನೆ ಹೊಂದಿರುತ್ತವೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತಿರುವಂಥದ್ದೇ ಆಗಿದೆ. ಕೋವಿಡ್ ಸೋಂಕು ವ್ಯಾಪಿಸಿದಾಗ ಅಂತಹ ಪ್ಲ್ಯಾನ್‌ಗಳೆಲ್ಲಾ ಸಹಜವಾಗಿ ಅಸ್ತವ್ಯಸ್ತಗೊಂಡವು. ಆಗ, ಒಂದೆಡೆ ಸೋಂಕು ವ್ಯಾಪಿಸಿದರೆ, ಮತ್ತೊಂದೆಡೆ ಕ್ಷಿಪ್ರ ತಾಂತ್ರಿಕ ನಾವೀನ್ಯತೆಗಳು ಸಂಭವಿಸಿದವು. ಆ ಸಂದರ್ಭದಲ್ಲಿ, ಜಗತ್ತು ಎಷ್ಟು ವೇಗವಾಗಿ ಬದಲಾವಣೆಗೊಳ್ಳಲು ಮೊದಲಾಯಿತೆಂದರೆ ಭಾರತದ ಕೆಲವು ಮುಂಚೂಣಿ ಐಟಿ ಕಂಪನಿಗಳು ಬಹಿರಂಗವಾಗಿಯೇ, “ಹತ್ತು ವರ್ಷಗಳ ಪ್ಲ್ಯಾನಿಂಗ್ ಮರೆತುಬಿಡಿ; ಇದೀಗ ನಾವು ಮುಂದಿನ ಒಂದು ಅಥವಾ ಎರಡು ವರ್ಷಗಳ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುತ್ತಿದ್ದೇವೆ” ಎಂದು ಪ್ರಕಟಿಸಿದವು.
ಅದರಲ್ಲೂ ಪ್ರವಾಸೋದ್ಯಮ ವಲಯವು ತೀವ್ರ ಹೊಡೆತಕ್ಕೆ ಸಿಲುಕಿತು. ಆದರೆ, ಇದೀಗ ಈ ವಲಯ ಪುನಶ್ಚೇತನಗೊಂಡಿದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಈ ವಲಯವು ಹಿಂದೆAದೂ ಕಂಡಿರದ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಮುಂಚೆಯೆಲ್ಲಾ ನಾವು ಕನಿಷ್ಠ ಮೂರು ವರ್ಷಗಳ ಮುನ್ನÉ ನಮ್ಮ ಪ್ಲ್ಯಾನ್ ರೂಪಿಸುತ್ತಿದ್ದೆವು. ಪ್ರತಿಯೊಂದು ಅಂಶವನ್ನೂ ಅವಲೋಕಿಸಿ ದೀರ್ಘಾವಧಿ ಕಾರ್ಯತಂತ್ರಗಳ ಬಗ್ಗೆ ಗಮನ ನೀಡುತ್ತಿದ್ದೆವು. ಆದರೆ ಇದೀಗ ನಾವು ಕೇವಲ ಒಂದು ವರ್ಷದ ಪ್ಲ್ಯಾನ್‌ನಿಂದ ಸಮಾಧಾನಗೊಳ್ಳುತ್ತಿದ್ದೇವೆ. ಅಷ್ಟು ಕಡಿಮೆ ಅವಧಿಯ ಪ್ಲ್ಯಾನ್‌ಅನ್ನು ಕೂಡ ಲೋಪರಹಿತವಾಗಿ ರೂಪಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಪ್ರಪಂಚವು ನಾಗಾಲೋಟದಲ್ಲಿ ಬದಲಾವಣೆಗಳನ್ನು ಕಾಣುತ್ತಿರುವುದರಿಂದ ಪ್ರವಾಸೋದ್ಯಮ ಹಾಗೂ ವಿಮಾನಯಾನ ಉದ್ಯಮಗಳಿಗೆ ಈಗ ತುಂಬಾ ದೀರ್ಘಕಾಲೀನ ಪ್ಲ್ಯಾನ್‌ಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ.
ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಮುನ್ನಾ ದಿನಗಳಲ್ಲಿ ಭವಿಷ್ಯದ ವಿದ್ಯಮಾನಗಳನ್ನು ಹೆಚ್ಚುಕಡಿಮೆ ಸರಿ ಎನ್ನುವಂತೆ ಊಹಿಸಬಹುದಿತ್ತು. ಹಠಾತ್ ಬದಲಾವಣೆಗಳು ತುಂಬಾ ಅಪರೂಪವಾಗಿದ್ದರಿಂದ ಪ್ಲಾö್ಯನ್‌ಗಳು ನಿರೀಕ್ಷೆಯಂತೆಯೇ ನಡೆಯುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಪ್ಲ್ಯಾನ್ ರೂಪಿಸಿದ ಮರುದಿನವೇ ಎಲ್ಲವನ್ನೂ ಪುನಃ ಆಲೋಚಿಸಬೇಕಾದ ರೀತಿಯಲ್ಲಿ ಬದಲಾವಣೆಗಳು ಘಟಿಸುತ್ತಿವೆ. ನಾವೀಗ, ಮುಂದೆ ಹೀಗಾಗುತ್ತದೆಂದು ಊಹಿಸಲಾಗದ ಪ್ರಪಂಚದಲ್ಲಿ ಬದುತ್ತಿಕುದ್ದೇವೆ. ಇದು, ಕೆಟ್ಟದ್ದು ಹಾಗೂ ಒಳ್ಳೆಯದು ಎರಡಕ್ಕೂ ಅನ್ವಯಿಸುತ್ತದೆ ಎಂಬುದು ಬೇರೆ ಮಾತು. ಆತ್ಮವಿಶ್ವಾಸದಿಂದ ಭವಿಷ್ಯದ ನಿರ್ಣಾಯಕ ಹೆಜ್ಜೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಇದು ಕಷ್ಟಗೊಳಿಸುತ್ತಿದೆ. ಇಷ್ಟರ ನಡುವೆಯೂ, ಆಗುತ್ತಿರುವ ಬದಲಾವಣೆಗಳು ಬಹುತೇಕ ಸುಧಾರಣೆಯ ದಿಸೆಯಲ್ಲೇ ಆಗುತ್ತಿವೆ ಎಂಬುದನ್ನು ಕೂಡ ನಾವು ಮನಗಾಣಬೇಕಾಗುತ್ತದೆ.
ಮುಂಚೆ ಜನರು ತಮ್ಮ ಅನಿಸಿಕೆಗಳಿಗೆ ಬಿಗಿಯಾಗಿ ಕಟ್ಟುಬೀಳುತ್ತಿದ್ದರು. “ನನಗೆ ಹಿನ್ನಡೆಯಾದರೂ ಅಥವಾ ಸೋಲಾದರೂ ಪರವಾಗಿಲ್ಲ, ಆದರೆ ಬಾಗುವುದಿಲ್ಲ’ ಎಂಬುದು ಅವರ ನಿಲುವಾಗಿರುತ್ತಿತ್ತು. ‘ನಾನು ಏನನ್ನು ಮಾಡುತ್ತೇನೋ ಅದೇ ಕಾನೂನು’ ಎಂಬ ಧೋರಣೆ ಹೊಂದಿರುತ್ತಿದ್ದರು. ನಾವು ನಮ್ಮ ಹಿಂದಿನ ವರ್ಷಗಳ ಬಗ್ಗೆ ಅವಲೋಕಿಸಿದರೆ, ಅಂತಹ ಕಠಿಣ ನಿಲುವು ಹೊಂದಿದ್ದ ಅನೇಕ ವ್ಯಕ್ತಿಗಳು ನಮಗೆ ನೆನಪಾಗುತ್ತಾರೆ. ನನ್ನ ಮಾವ, ನನ್ನ ತಾಯಿಯ ಮಾವ ಹಾಗೂ ನನ್ನ ಪ್ರೌಢಶಾಲೆಯ ಕೆಲವು ಶಿಕ್ಷಕರು ಕೂಡ ಇಂತಹ ‘ಕಠಿಣ ಪ್ರವೃತ್ತಿ’ ಹೊಂದಿದ್ದರು. ಅವರ ಆಜ್ಞೆಗಳು ಎಷ್ಟು ಖಡಕ್ ಆಗಿರುತ್ತಿದ್ದವೆಂದರೆ, ನಮ್ಮೊಳಗೆ ಅವರ ಬಗ್ಗೆ ಸದಾ ಒಂದು ಬಗೆಯ ಭಯ ಇದ್ದೇ ಇರುತ್ತಿತ್ತು. ನಮಗೆ ಯಾವುದೇ ಗಲಾಟೆ ಮಾಡಲು ಅಥವಾ ಜೋರಾಗಿ ಮಾತನಾಡಲು ಧೈರ್ಯವೇ ಬರುತ್ತಿರಲಿಲ್ಲ; ಬಹಿರಂಗವಾಗಿ ದೊಡ್ಡದಾಗಿ ನಗುತ್ತಲೂ ಇರಲಿಲ್ಲ. ಅಂತಹ ಶಿಕ್ಷಕರು ಶಾಲೆಯಲ್ಲಿ ಇದ್ದಾರೆಂದರೆ ಸಾಕು ವಿದ್ಯಾರ್ಥಿಗಳು ನಡುಗುತ್ತಿದ್ದರು. ಅಂಥವರ ಬಿಗು ನಿಲುವು ಶಿಸ್ತು ಕಾಯ್ದುಕೊಳ್ಳುವುದರಲ್ಲಿ ಹಾಗೂ ದುರ್ವರ್ತನೆ ತಿದ್ದುವುದರಲ್ಲಿ ತುಂಬಾ ಪರಿಣಾಮಕಾರಿಯಾಗಿತ್ತು. ಇಷ್ಟಾದರೂ, ಕೆಲವೊಮ್ಮೆ, ನನಗೆ ಇದೆಲ್ಲಾ ನಿಜವಾಗಿಯೂ ಅಗತ್ಯವೇ?- ಎಂಬ ಅಚ್ಚರಿಯ ಪ್ರಶ್ನೆಯೂ ಕಾಡುತ್ತಿತ್ತು. ಅವರು ಒಂದಿಷ್ಟು ಹೆಚ್ಚು ಉದಾರಿಯಾಗಿರಬಹುದಾಗಿತ್ತು ಅಲ್ಲವೇ?
ಹೌದು, ಪ್ರತಿಯೊಬ್ಬರಿಗೂ ತಮ್ಮದೇ ಆದ ನಿರ್ದಿಷ್ಟ ಗುಣಸ್ವಭಾವಗಳಿರುತ್ತವೆ. ತಾವು ನಂಬುವ ರೀತಿ ರಿವಾಜುಗಳಿಗೆ ಕಟ್ಟುಬಿದ್ದು ಎಲ್ಲಾ ಪ್ರಯಾಸಗಳನ್ನು ಅನುಭವಿಸುವ ಜನರು ಇಂದಿಗೂ ಇದ್ದಾರೆ. ಆದರೆ, ಸಮಯ ಹಾಗೂ ಸಂದರ್ಭಗಳು ಬದಲಾಗಿವೆ ಎಂಬುದನ್ನು ಕಾಣಲು ಅಂಥವರು ವಿಫಲವಾಗುತ್ತಾರೆ. ಇಂತಹ ಸನ್ನಿವೇಶ ನೋಡಿದಾಗ ‘ಕಭಿ ಖುಷಿ ಕಭೀ ಗಂ’ ಸಿನಿಮಾದ, “ನಾನು ಒಂದು ಸಲ ಹೇಳಿದ ಮೇಲೆ ಅದೇ ಅಂತಿಮ’ ಎಂಬರ್ಥದ ಸಂಭಾಷಣೆಯ ಸಾಲು ನೆನಪಾಗುತ್ತದೆ. ಸಲ್ಮಾನ್ ಖಾನ್ ಅವರ, ‘ಒಂದು ಸಲ ನಾನು ಮಾತುಕೊಟ್ಟೆನೆಂದರೆ, ನನ್ನ ಮಾತನ್ನೇ ನಾನು ಕೇಳುವುದಿಲ್ಲ’ ಎಂಬ ಹೆಸರಾಂತ ಡಯಲಾಗ್ ಕೂಡ ಜ್ಞಾಪಕಕ್ಕೆ ಬರುತ್ತದೆ.
ಕೆಲವರು ಸ್ವತಃ ಜಿಗುಟು ನಿಲುವಿನ ರೇಖೆಗಳನ್ನು ಎಳೆದುಕೊಂಡು, ಇತರರೂ ಅಂತೆಯೇ ಇರಬೇಕೆಂದು ನಿರೀಕ್ಷಿಸುತ್ತಾರೆ. ಇನ್ನು ಕೆಲವರ ವಿಷಯದಲ್ಲಿ, ಸನ್ನಿವೇಶಗಳು ಹಾಗೂ ಪರಿಸ್ಥಿತಿಗಳು ಅವರನ್ನು ಅಂತಹ ಜಿಗುಟುತನಕ್ಕೆ ದೂಡುತ್ತವೆ.
ನಮ್ಮ ಕೌಟುಂಬಿಕ ವ್ಯವಹಾರವು ಆರಂಭದಲ್ಲಿ ‘ಮಾಮ್-ಅಂಡ್-ಪಾಪ್ ಶಾಪ್’ನಂತೆ ಕಾರ್ಯಾಚರಿಸುತ್ತಿತ್ತು. ಪ್ರತಿಯೊಬ್ಬರೂ ಎಲ್ಲ ಕೆಲಸವನ್ನೂ ಮಾಡುತ್ತಿದ್ದರು. ಅಗತ್ಯಬಿದ್ದಾಗ ಮುಂದೆಬAದು ಕೆಲಸ ಮಾಡಲು ಯಾರೂ ಹಿಂದೆಮುAದೆ ನೋಡುತ್ತಿರಲಿಲ್ಲ. ಆದರೆ, ವ್ಯವಹಾರ ಬೆಳೆದಂತೆ, ಸ್ಟಾರ್ಟ್ಅಪ್ ಧೋರಣೆಯನ್ನು ಮೀರಿ ಮುನ್ನಡೆಯಬೇಕಾದ ಹಾಗೂ ವೃತ್ತಿಪರತೆ ಅಳವಡಿಸಬೇಕಾದ ಅಗತ್ಯವನ್ನು ನಾವು ಮನಗಂಡೆವು. ನಮ್ಮ ವ್ಯವಹಾರೋದ್ಯಮಕ್ಕೆ ಸಣ್ಣ ಪ್ರಮಾಣದ ಒಂದು ಕಾರ್ಪೊರೇಟ್ ಸ್ವರೂಪ ನೀಡಬೇಕಿತ್ತು. ನಾನು ಕಾರ್ಪೊರೇಟ್ ಮುಖ್ಯಸ್ಥನ ಪಾತ್ರ ವಹಿಸಿಕೊಂಡ ಮೇಲೆ, ಸಂಸ್ಥೆಯ ಕೆಲಸಗಳು ಮುಂಚೆ ನಡೆಯುತ್ತಿದ್ದ ರೀತಿಯಲ್ಲಿ ನಡೆಯುವುದಿಲ್ಲ ಎಂಬುದು ನನಗೆ ಅರಿವಾಯಿತು. ನನ್ನ ಮಾತುಗಳು, ನಿರ್ಧಾರಗಳನ್ನು ತಂಡದಲ್ಲಿ ಅಂತಿಮ ವಾಕ್ಯವೆಂಬAತೆ ಪರಿಗಣಿಸಲಾಗುತ್ತಿತ್ತು. ತಂಡದ ಸದಸ್ಯರು ಮಾರ್ಗದರ್ಶನಕ್ಕಾಗಿ ನನ್ನೆಡೆಗೆ ನೋಡುತ್ತಿದ್ದರು. ನಾನಾಡುವ ಮಾತುಗಳನ್ನು ಕಲ್ಲಿನಲ್ಲಿ ಕೆತ್ತಿದ ಚಿರಂತನ ಒಕ್ಕಣೆಗಳೆಂದು ಪರಿಭಾವಿಸುತ್ತಿದ್ದರು.
ಇದರಿಂದ ನಾನು ಸ್ವಲ್ಪ ದಿಗಿಲುಗೊಂಡಿದ್ದು ದಿಟವೇ ಹೌದು. ಇದರಿಂದಾಗಿ, ನಾನು ಆಡುವ ಪ್ರತಿಯೊಂದು ಮಾತಿನ ಬಗ್ಗೆಯೂ ತುಂಬಾ ಎಚ್ಚರಿಕೆ ವಹಿಸಬೇಕಾಗಿ ಬಂತು. ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲಾ ಸಂಭಾವ್ಯ ಫಲಿತಾಂಶಗಳನ್ನು ಅಳೆದು ತೂಗಿ ನೋಡಬೇಕಾಗುತ್ತಿತ್ತು. ನಾವು ಏನನ್ನೇ ಮಾಡಿದರೂ ನಾವು ಹೆಜ್ಜೆ ಇರಿಸುವ ದಿಕ್ಕು ಕಂಪನಿಯ ಭವಿಷ್ಯದ ಪ್ರಗತಿಯನ್ನು ನಿರ್ಧರಿಸುತ್ತದೆ. ಹೀಗಾಗಿ, ನಾವು ನಮ್ಮ ದಕ್ಷತೆಯನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ನಮ್ಮ ಆಲೋಚನೆಯನ್ನು ಉತ್ತಮಗೊಳಿಸಿಕೊಳ್ಳಬೇಕು. ನಾವು ನಮ್ಮ ಸಂಸ್ಥೆಯೊಳಗೆ ಹಾಗೂ ಹೊರಗಿನ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಇವೆರಡನ್ನೂ ಅರ್ಥ ಮಾಡಿಕೊಳ್ಳಬೇಕು. ಭೂತ, ವರ್ತಮಾನ ಹಾಗೂ ಭವಿಷ್ಯಗಳ ನಡುವೆ ಸಮತೋಲನ ಸಾಧಿಸಬೇಕು. ನಮ್ಮ ನಿರ್ಧಾರ ತಳೆಯುವ ಶಕ್ತಿ ಕೂಡ ಸುಧಾರಣೆ ಆಗಲೇಬೇಕು ಎಂಬ ಪರಿಸ್ಥಿತಿ ಸೃಷ್ಟಿಯಾಯಿತು.
ಶಿವಾಜಿರಾವ್ ಭೋಸಲೆ ಅವರು ನಾಯಕತ್ವದ ಬಗ್ಗೆ ನೀಡಿದ ಉಪನ್ಯಾಸದಲ್ಲಿನ ಉಲ್ಲೇಖವೊಂದು ಹೀಗಿದೆ: ‘ಒಬ್ಬ ನಾಯಕನು ಯಾವಾಗಲೂ ತನ್ನ ಒಂದು ಕಾಲನ್ನು ಸಂಸ್ಥೆಯ ಒಳಗೆ ಇರಿಸಿರಬೇಕು ಹಾಗೂ ಮತ್ತೊಂದನ್ನು ಹೊರಗೆ ಇರಿಸಿರಬೇಕು. ಒಂದೊಮ್ಮೆ ಎರಡೂ ಕಾಲುಗಳು ಒಳಗಿದ್ದರೆ ಹೊರಗಿನ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ತಿಳಿಯುವುದಿಲ್ಲ. ಎರಡೂ ಕಾಲುಗಳು ಹೊರಗಿದ್ದರೆ ಸಂಬAಧಪಟ್ಟವರು ಅವರನ್ನು ಅನುಸರಿಸುವುದಿಲ್ಲ’.
ಇವೆಲ್ಲವೂ ನಡೆಯುತ್ತಿರುವಾಗ ನನಗೆ ಮತ್ತೊಂದು ಅಂಶ ಅರಿವಾಯಿತು. ‘ನಾನು ಹೇಳಿದ್ದೇ ಕಾನೂನು’ ಎಂಬ ಧೋರಣೆಯ ವ್ಯಕ್ತಿಯಾಗಿ ನಾನು ಮಾರ್ಪಡುತ್ತಿದ್ದೆ. ಮುಂಚೆ, ನಮಗೆ ಯಾವುದೋ ಆಲೋಚನೆಯೊಂದು ಮೂಡಿದಾಗ, ಅದನ್ನು ಎಲ್ಲರೊಂದಿಗೆ ಹೇಳಿಕೊಂಡು ಸಾಮೂಹಿಕವಾಗಿ ಚರ್ಚಿಸಿ, ನಂತರ ನಿರ್ಧಾರಕ್ಕೆ ಬರುತ್ತಿದ್ದೆವು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಚರ್ಚೆಗಳು ಕಡಿಮೆಯಾಗಿದ್ದವು. ಇಡೀ ತಂಡವು ನನ್ನ ಮಾತುಗಳನ್ನು ಅಂತಿಮ ನಿರ್ಧಾರವೆಂದು ಪರಿಗಣಿಸಲು ಶುರುಮಾಡಿತ್ತು.
ಯಾವುದಾದರೂ ವಿಷಯಕ್ಕೆ ಸಂಬAಧಿಸಿದAತೆ, ‘ಇದನ್ನು ಈ ರೀತಿ ಮಾಡಿದ್ದು ಏಕೆ?’ ಎಂದು ನಾನು ಕೇಳುತ್ತಿದ್ದಂತೆಯೇ, ‘ನೀವು ಹೇಳಿದಿರಲ್ಲ ಅದಕ್ಕೆ’ ಎಂಬ ಉತ್ತರ ಬರುತ್ತಿತ್ತು. ಅದು ನನ್ನ ಮನಸ್ಸಿನಲ್ಲಿ ಎಚ್ಚರಿಕೆಯ ಗಂಟೆಯಾಗಿ ರಿಂಗಣಿಸಿತು. ನಾನು ಎಲ್ಲಾ ಜ್ಞಾನವನ್ನೂ ಬಲ್ಲ ಸರ್ವಜ್ಞನೇ?- ಎಂಬ ಪ್ರಶ್ನೆಯೂ ನನ್ನೊಳಗೆ ಹುಟ್ಟಿತು. ಹೆಚ್ಚೆಂದರೆ, ನಾನು ಅಂಧರ ನಾಡಿನಲ್ಲಿ ಒಂದು ಕಣ್ಣುಳ್ಳ ರಾಜನಿರಬಹುದು ಎಂದೆನ್ನಿಸುತ್ತಿತ್ತು. ಆದರೆ, ಇತ್ತ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿತ್ತು. ನಾನು ಹೇಳಿದ ಪ್ರತಿಯೊಂದು ಮಾತನ್ನೂ ಕಲ್ಲಿನಲ್ಲಿ ಕೆತ್ತಿದ ಶಾಸನವೆಂಬAತೆ ಪರಿಗಣಿಸಲಾಗುತ್ತಿತ್ತು. ಇಂತಹ ಪ್ರವೃತ್ತಿಯು ಸಂಸ್ಥೆಗೆ ಹಾಗೂ ವ್ಯಕ್ತಿ ಇಬ್ಬರಿಗೂ ಅಪಾಯಕಾರಿಯಾಗಿರುತ್ತದೆ.
ನಾನೊಂದು ಸಲ ನಮ್ಮ ಸೀನಿಯರ್ ಮಾರ್ಕೆಟಿಂಗ್ ಮ್ಯಾನೇಜರ್ ಪ್ರಣತಿ ಜೋಶಿ ಅವರಿಗೆ ಜಾಹೀರಾತು ವೆಚ್ಚಗಳ ವಿವರ ಕಳುಹಿಸಲು ಸೂಚಿಸಿದ್ದೆ. ಅವರು ಅದನ್ನು ಎಲ್ಲರೂ ಇರುª ಗ್ರೂಪ್‌ಗೆ ಹಾಕದೆ ನನಗೆ ಮಾತ್ರ ಕಳಿಸಿದ್ದರು. ನಾನು, ‘ಹೀಗೆ ಮಾಡಿದ್ದು ಏಕೆ?’ ಎಂದು ಕೇಳಿದಾಗ, ‘ನೀವೇ ಹೇಳಿದಿರಲ್ಲ ಅದಕ್ಕೆ’ ಎಂದರು. ಅದೇ ರೀತಿಯಲ್ಲಿ, ಸೀನಿಯರ್ ಸೇಲ್ಸ್ ಮ್ಯಾನೇಜರ್ ಪ್ರಿಯಾಂಕಾ ಪಟ್ಕಿ ಅವರು ಅಂಕಿಅAಶದ ಮಾಹಿತಿಯನ್ನು ಗ್ರೂಪ್‌ಗೆ ಹಾಕುವ ಬದಲಿಗೆ ನನಗೆ ಮಾತ್ರ ಕಳಿಸಿದ್ದರು. ‘ಹೀಗೇಕೆ ಮಾಡಿದಿರಿ?’ ಎಂದು ಕೇಳಿದಾಗ, ‘ಗ್ರೂಪಿನಲ್ಲಿ ಎಲ್ಲರೂ ಇರುವುದರಿಂದ ನಿಮಗೆ ಮಾತ್ರ ಕಳಿಸಿದೆ’ ಎಂದರು.
ಅವರಿರುವ ಹುದ್ದೆಯ ಸ್ಥಾನದಲ್ಲಿ ಅವರು ಮಾಡಿದ್ದು ತಾಂತ್ರಿಕವಾಗಿ ಸರಿಯೇ ಹೌದು. ಆದರೆ, ವೀಣಾ ವರ್ಲ್ಡ್ ಆರಂಭದ ಕಾಲಘಟ್ಟದಲ್ಲಿ ಕಾರ್ಯಗಳು ನಡೆಯುತ್ತಿದ್ದ ರೀತಿಯೇ ಬೇರೆ. ಆಗ, ನಾವೆಲ್ಲರೂ ಸೇರಿ ಕಾರ್ಯತಂತ್ರ ರೂಪಿಸುತ್ತಿದ್ದೆವು ಹಾಗೂ ಗೋಪ್ಯತೆ ಕಾಯ್ದುಕೊಳ್ಳುವುದು ನಿರ್ಣಾಯಕವಾಗಿರುತ್ತಿತ್ತು. ಆದರೆ, ಇದೀಗ ಸಂಸ್ಥೆ ಪ್ರಾರಂಭವಾಗಿ ೧೧ ವರ್ಷಗಳು ಕಳೆದಿದ್ದು, ಇದರಲ್ಲಿ ಪ್ರಪಂಚವನ್ನೇ ಅಲ್ಲೋಲಕಲ್ಲೋಲಗೊಳಿಸಿದ ಕೋವಿಡ್ ಅವಧಿಯ ಎರಡೂವರೆ ವರ್ಷಗಳ ಅವಧಿಯೂ ಸೇರಿದೆ. ಅಂದರೆ, ನಾವು ಪುನರಾರಂಭಿಸಲು ಮತ್ತೊಂದು ಅವಕಾಶ ದೊರಕಿತು; ಮೊದಲಿಗೆ, ವೀಣಾ ವರ್ಲ್ಡ್ ಆರಂಭಗೊAಡಾಗ, ಮತ್ತೊಮ್ಮೆ, ಕೋವಿಡ್ ನಂತರದಲ್ಲಿ.
ಈಗ ನಮ್ಮಲ್ಲಿ ೯೦ ಮ್ಯಾನೇಜರುಗಳು, ಹಿರಿಯ ಮ್ಯಾನೇಜರುಗಳು ಹಾಗೂ ಉಸ್ತುವಾರಿಗಳು ಇದ್ದಾರೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಪಾತ್ರಗಳು, ಹೊಣೆಗಾರಿಕೆಗಳು, ಅಧಿಕಾರಗಳು ಹಾಗೂ ಉತ್ತರದಾಯತ್ವ ನಿಗದಿಯಾಗಿದೆ. ನಾವು ನಿರ್ಧಾರ ತಳೆಯುವ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಕೇಂದ್ರೀಕರಣಗೊಳಿಸಿದ್ದು, ಇದು ನಮ್ಮ ಕಂಪನಿಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಕಂಪನಿಯ ಪ್ರಮುಖರಾದ ನಾವು ನಮ್ಮ ತಂಡದವರಿಗೆ ಪ್ರತಿದಿನವೂ ಲಭ್ಯವಿರುತ್ತೇವೆ. ಆದರೆ, ನಾವು ತುರ್ತು ಸಂದರ್ಭಗಳಲ್ಲಿ ನೆರವು ನೀಡುತ್ತೇವೆಯೇ ಹೊರತು ಸಣ್ಣಪುಟ್ಟ ಕಾರ್ಯಗಳನ್ನೆಲ್ಲಾ ನಿರ್ವಹಿಸಲು ಹೋಗುವುದಿಲ್ಲ. ಈಗ ತಂಡದವರು ನಮ್ಮ ಬಗ್ಗೆ, ‘ಅವರು ಇರುತ್ತಾರೆ, ಆದರೂ ಇರುವುದಿಲ್ಲ’ ಎಂಬ ಮನೋಧೋರಣೆಗೆ ಒಗ್ಗಿಕೊಂಡಿದ್ದಾರೆ.
ಆದರೂ ರೂಢಿಸಿಕೊಂಡ ಅಭ್ಯಾಸಗಳು ಅಷ್ಟು ಬೇಗ ಮರೆಯಾಗುವುದಿಲ್ಲ. ‘ನೀವು ಹೇಳಿದಿರಲ್ಲ, ಅದಕ್ಕೇ ಹಾಗೆ ಮಾಡಿದೆ’ ಎಂಬುದು ಆಗೊಮ್ಮೆ ಈಗೊಮ್ಮೆ ಈಗಲೂ ಕೇಳಿಬರುತ್ತದೆ. ಇದನ್ನು ತಪ್ಪಿಸಲು, ನಾನು, ನಮ್ಮ ತಂಡಗಳಲ್ಲಿ ‘ಸನ್ನಿವೇಶವನ್ನು ಪರಿಶೀಲಿಸಿ’ (ಚೆಕ್ ದಿ ಕಾಂಟೆಕ್ಸ್ಟ್) ಎಂಬ ವಿಧಾನವನ್ನು ಅಳವಡಿಸಿದ್ದೇನೆ. ಯಾವ ನಿರ್ಧಾರವನ್ನು ಯಾವಾಗ, ಏಕೆ ಹಾಗೂ ಯಾವ ಪರಿಸ್ಥಿತಿಯಲ್ಲಿ ತೆಗೆದುಕೊಳ್ಳಲಾಯಿತು ಎಂಬುದನ್ನು ಆಧರಿಸಿ ವಿಶ್ಲೇಷಿಸುವುದನ್ನು ಕಡ್ಡಾಯಗೊಳಿಸಿದ್ದೆನೆ. ನಿರ್ದಿಷ್ಟ ಸಂದರ್ಭವೊAದರಲ್ಲಿ ಫಲ ನೀಡಿದ ನಿರ್ಧಾರವೊಂದು ಬೇರೆ ಸಂದರ್ಭಕ್ಕೆ ಸರಿಹೋಗದೇ ಇರಬಹುದು.
ನಮ್ಮ ಜನರಲ್ ಮ್ಯಾನೇಜರ್, ಶಿಲ್ಪಾ ಮೋರೆ ಅವರು ಇದರ ಬಗ್ಗೆ ಯಾವಾಗಲೂ ನನ್ನ ಜೊತೆ ತಕರಾರು ಎತ್ತುತ್ತಿರುತ್ತಾರೆ. ಆದರೆ ವಾಸ್ತವವೇನೆಂದರೆ, ಮುಂಬೈನಲ್ಲಿ ಉತ್ತಮ ಫಲಿತಾಂಶ ನೀಡುವ ಜಾಹೀರಾತೊಂದು ಕೋಲ್ಕತ್ತಾದಲ್ಲಿ ಯಾವುದೇ ಪರಿಣಾಮ ಬೀರದೇ ಇರಬಹುದು; ಹಾಗೆಯೇ ಅಹಮದಾಬಾದಿನಲ್ಲಿ ಯಾವುದು ಯಶಸ್ಸು ತಂದುಕೊಡುತ್ತದೋ ಅದು ಬೆಂಗಳೂರಿನಲ್ಲಿ ನಿಷ್ಪ್ರಯೋಜಕವಾಗಿ ಪರಿಣಮಿಸಬಹುದು. ಕೆಲವೊಮ್ಮೆ, ಮುಂಬೈನಿAದ ಕೇವಲ ೨೦೦ ಕಿ.ಮೀ. ಅಂತರದಲ್ಲಿರುವ ಪುಣೆ ನಗರಕ್ಕೆ ವಿಭಿನ್ನ ಸಂವಹನ ಮಾರ್ಗೋಪಾಯ ಅನುಸರಿಸಬೇಕಾಗುತ್ತದೆ. ಒಟ್ಟಾರೆ, ಸನ್ನಿವೇಶ ಎಂಬುದು ಮುಖ್ಯವಾಗುತ್ತದೆ.
ಈಗ ನಮ್ಮ ಸಂಸ್ಥೆಯು ಹೊಣೆಗಾರಿಕೆಯುಳ್ಳ ತಂಡಗಳೊAದಿಗೆ ಸ್ಥಿರವಾಗಿದೆ. ತಂಡದ ಪ್ರತಿಯೊಬ್ಬ ಸದಸ್ಯರೂ ತಮ್ಮ ವಲಯಕ್ಕೆ ಸಂಬAಧಿಸಿದAತೆ ಗುಂಡುಸೂಜಿಯಿAದ ಹಿಡಿದು ದೊಡ್ಡ ವಿಷಯದ ಬಗ್ಗೆಯೂ ಜ್ಞಾನ ಹೊಂದಿರಲೇಬೇಕಾಗುತ್ತದೆ. ನಿರ್ಧಾರ ತಳೆಯುವುದು ಈಗ ನನಗೆ ಅಥವಾ ಬೇರೆ ಯಾರೋ ಒಬ್ಬರಿಗೆ ಸಂಬAಧಿಸಿದ ಪ್ರಕ್ರಿಯೆಯಲ್ಲ. ಅದೀಗ ಪ್ರತಿಯೊಬ್ಬರನ್ನೂ ಒಳಗೊಳ್ಳಿಸಿಕೊಳ್ಳುವಂತಹ ಹಾಗೂ ಅವರಲ್ಲಿ ಶೇಕಡ ೧೦೦ರಷ್ಟು ವಿಶ್ವಾಸ ಇರಿಸುವಂತಹ ಪ್ರಕ್ರಿಯೆಯಾಗಿದೆ.
ಕ್ಷಿಪ್ರವಾಗಿ ಬದಲಾಗುತ್ತಿರುವ ಈ ಪ್ರಪಂಚದಲಿ,್ಲ ‘ನಾವು ನಿನ್ನೆ ಏನು ಮಾಡಿದೆವು?’ ಎಂದು ಕೇಳುವ ಬದಲಿಗೆÉ, ‘ನಾವು ಇಂದು ಏನನ್ನು ಮಾಡಬೇಕು?’ ಎಂದು ಕೇಳಿಕೊಳ್ಳುವುದು ಮುಖ್ಯವಾಗಿದೆ. ಮೊದಲೇ ಗೊತ್ತುಪಡಿಸಿದ ನಿರ್ಧಾರಗಳು ಈಗ ಕಾರ್ಯಸಾಧುವಲ್ಲ. ಪ್ರಮಾಣೀಕರಣ ಹಾಗೂ ಜಿಗುಟಿನ ಕಾರ್ಯತಾಂತ್ರಿಕ ಯೋಜನೆಗಳು ಅಪ್ರಸ್ತುತವಾಗುತ್ತಿವೆ.
ಮುಂಬರುವ ದಿನಗಳಲ್ಲಿ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕಣ್ಣು, ಕಿವಿ ಹಾಗೂ ಮನಸ್ಸು ಸೇರಿ ಕಣಕಣವೂ ತುಂಬಾ ಜಾಗ್ರತವಾಗಿರಬೇಕಾಗುತ್ತದೆ. ನಿನ್ನೆಯಷ್ಟೇ ಕೈಗೊಂಡ ನಿರ್ಧಾರವನ್ನು ಇಂದು ಬದಲಿಸಬೇಕಾದ ಅಗತ್ಯ ಎದುರಾಗುತ್ತದೆ. ಅಂತಹ ಬದಲಾವಣೆಗಳನ್ನು ಅಳವಡಿಸಲು ನಾವು ಮುಕ್ತ (ಫ್ಲೆಕ್ಸಿಬಲ್ - ತೆರೆದ ಮನಸ್ಸಿನ) ಮನೋಧೋರಣೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಬದಲಾಗುತ್ತಿರುವ ಪ್ರಪಂಚದೊAದಿಗೆ ನಾವು ವಿಕಸನಗೊಳ್ಳಬೇಕು. ಪೋಷಕರು ಬದಲಾಗಬೇಕು, ಮಕ್ಕಳು ಬದಲಾಗಬೇಕು (ಇಂದಿನ ಮಕ್ಕಳು ಬುದ್ಧಿವಂತಿಕೆ ಹೊಂದಿದ್ದು ಸಂದರ್ಭಕ್ಕೆ ಒಗ್ಗಿಕೊಳ್ಳುವ ಗುಣ ಹೊಂದಿರುವುದರ ನಡುವೆಯೂ), ಶಿಕ್ಷಕರು ಬದಲಾಗಬೇಕು ಹಾಗೂ ಶಾಲಾ ವ್ಯವಸ್ಥೆಗಳು ಕೂಡ ಬದಲಾಗಬೇಕು.
‘ಯಾರು ಜಡತ್ವ ಹೊಂದಿರುತ್ತಾರೋ ಅವರು ನಶಿಸಿ ಹೋಗುತ್ತಾರೆ’ (ಸ್ಥಾವರಕ್ಕಳಿವುಂಟು ಎಂಬ ವಚನದ ಸಾಲು ನೆನಪಿಸಿಕೊಳ್ಳಬಹುದು) ಎಂಬ ನುಡಿಗಟ್ಟನ್ನು ‘ಯಾರು ಬದಲಾಗುವುದಿಲ್ಲವೋ ಅವರು ನಶಿಸಿ ಹೋಗುತ್ತಾರೆ’ ಎಂದು ಬದಲಿಸಬೇಕಾದ ಸಮಯ ಇದಾಗಿದೆ. ಜಡತ್ವದಿಂದ ಕೂಡಿದ ಮನೋಧೋರಣೆಗಳನ್ನು ಅಳಿಸಹಾಕಬೇಕಾದ ಸಮಯ ಬಂದಿದೆ.
Post your Comment
Please let us know your thoughts on this story by leaving a comment.