Published in the Sunday Vijay Karnataka on 28 July, 2024
ಆಲ್ಬರ್ಟ್ ಐನ್ ಸ್ಟೀನ್ ಯಾವಾಗಲೂ ಒಂದೇ ಬಣ್ಣ, ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಿದ್ದರು. ಅವರ ಪ್ರಶ್ನೆಯೆಂದರೆ, ‘ಅದನ್ನೇಕೆ ಕಾಂಪ್ಲಿಕೇಟ್ ಮಾಡಬೇಕು?’ ಅವರು ಗ್ರೇ ಕಲರ್ ಸೂಟ್, ಲೆದರ್ ಜ್ಯಾಕೆಟ್ಸ್, ಸಾಕ್ಸ್ ಇಲ್ಲದ ಶೂವನ್ನು ಅವರ ಜೀವನವಿಡೀ ಧರಿಸಿದ್ದರು ಮತ್ತು ‘ಇಂದು ಏನು ಧರಿಸಬೇಕು?’ ಎಂದು ನಿರ್ಧರಿಸುವ ಒತ್ತಡದಿಂದ ಮುಕ್ತರಾಗಿದ್ದರು.
ಕೆಲವು ದಿನಗಳ ಹಿಂದೆ, ನಾನು, ನನ್ನ ಹಿರಿಯ ಮಗ ಮತ್ತು ಸೊಸೆ ಆದ ನೀಲ್ ಮತ್ತು ಹೇತಾರನ್ನು ಭೇಟಿ ಮಾಡಬೇಕಾಯಿತು. ನಮ್ಮ ಮನೆಯಲ್ಲಿ ನಾನು ಮತ್ತು ಮಕ್ಕಳು, ಮದುವೆಯ ನಂತರ, ಮಕ್ಕಳು ಪ್ರತ್ಯೇಕವಾಗಿ ವಾಸಿಸಬೇಕೆಂದು ನಿಯಮ ಹಾಕಿದ್ದೇವೆ. ನೀವು ನಿಮ್ಮ ಜೀವನ ಆನಂದಿಸಿ, ನಾವು ನಮ್ಮ ಜೀವನ ಆನಂದಿಸುತ್ತೇವೆ. ಯಾವುದೇ ಸಮಯದಲ್ಲೂ ನಾವು
ಒಬ್ಬರಿಗೋಸ್ಕರ ಒಬ್ಬರು ಇದ್ದೇವೆ. ಭಾರತೀಯ ಕುಟುಂಬದ ಪೋಷಕರಾಗಿ, ನೀಲ್ ದೂರವಾದಾಗ ನಮಗೆ ತಪ್ಪು ಮಾಡಿರುವ ಮನೋಭಾವವಿತ್ತು, ಆ ಮನೋಭಾವದಿಂದಲೇ ನಾವು ನಮ್ಮ ಕಿರಿಯ ಮಗ ರಾಜ್ ನನ್ನು ‘‘ನಾವು ಒಟ್ಟಾಗಿ ವಾಸಿಸಬೇಕೇ ಅಥವಾ ಬೇರೆ ಬೇರೆಯಾಗಿ, ನಿನಗೇನನಿಸುತ್ತದೆ?’’ ಎಂದು ಕೇಳಿದೆವು. ಮತ್ತೇನೂ ಯೋಚಿಸದೇ ಅವನು ಒಂದೇ ವಾಕ್ಯದಲ್ಲಿ, "ಮಾಮ್, ನಾವು ಒಟ್ಟಾಗಿ ವಾಸಿಸುವುದು ಬೇಡ ಯೆಂದು ಹೇಳಿದ. ಈ ಒಂದು ನಿರ್ಧಾರ ನಮ್ಮ ಜೀವನವನ್ನು ಸರಳಗೊಳಿಸುತ್ತದೆ. ‘‘ನೀನೇಕೆ ಹಾಗೆ ಹೇಳಿದೆ?’’, ‘ಅವನೇಕೆ ಹಾಗೆ ಮಾಡಿದ?’ ಇವೆಲ್ಲಾ ಚರ್ಚಿಸಲು ಸಮಯ ಎಲ್ಲಿದೆ. ನಮಗೆ ಜೀವನದಲ್ಲಿ ಏನೇ ಇದ್ದರೂ, ನಾವು ಸಂತೋಷವಾಗಿರೋಣ. ಸಾಧ್ಯವಾದಷ್ಟೂ ಎಲ್ಲವನ್ನೂ ಸರಳಗೊಳಿಸೋಣ,ಈ ಒಂದು ಮುಖ್ಯ ಕಾರಣದಿಂದ ಅನವಶ್ಯಕ ಪರಿಹಾಸ್ಯದ ಸಮಯ ಮತ್ತು ಶಕ್ತಿ ಉಳಿಸಬಹುದು, ಅದನ್ನು ನಾವು ಉತ್ತಮ ಕೆಲಸಕ್ಕೆ ಬಳಸಬಹುದು. ನಾವು ನೀಲ್ ಹೇತಾರನ್ನು ಭೇಟಿ ಮಾಡಿದೆವು. ಹರಟೆಯ ನಂತರ, ಹೇತಾ ಹೇಳಿದಳು, ಮಾಮ್, ನೀವು ಇದನ್ನು ನೋಡಲೇಬೇಕು, ನಾವು ರಿಮೋಟ್ ಗಳನ್ನು ಆರ್ಗನೈಸ್ ಮಾಡಿದ್ದೇವೆ. ಬೆಡ್ ರೂಂನಲ್ಲಿ, ಟಿವಿ ರಿಮೋಟ್, ಸೌಂಡ್ ಸಿಸ್ಟಂ ರಿಮೋಟ್, ಆಪಲ್ ರಿಮೋಟ್ ಗಳನ್ನು ನನ್ನ ಪಕ್ಕ ಇಟ್ಟುಕೊಳ್ಳಬೇಕೇ ಅಥವಾ ನೀಲ್ ಪಕ್ಕ ಇಟ್ಟುಕೊಳ್ಳಬೇಕೇ ಎಂದು ಯಾವಾಗಲೂ ಪ್ರಶ್ನೆ ಉಳಿಯುತ್ತಿತ್ತು. ನನಗ ಮ್ಯೂಸಿಕ್ ಪ್ಲೇ ಮಾಡಬೇಕೆನಿಸಿದಾಗ, ರಿಮೋಟ್ ಮತ್ತೊಂದು ಪಕ್ಕ ಇರುತ್ತಿತ್ತು. ಆದ್ದರಿಂದ ಈ ವಿಷಯಕ್ಕೆ ನಾವು ಒಂದು ಪರಿಹಾರ ಕಂಡುಹಿಡಿದೆವು, ನಂತರ ಎಲ್ಲಾ ರಿಮೋಟ್ ಗಳನ್ನೂ ಹಾಸಿಗೆಯ ಮಧ್ಯದಲ್ಲಿಟ್ಟೆವು. ನಾವು ಈ ಪರಿಹಾರ ಅನ್ನು ಅಮೆಜಾನ್ ನಲ್ಲಿ ಕಂಡುಹಿಡಿದೆ. ‘‘ವಾವ್!’’ ಇದು ಚೆನ್ನಾಗಿದೆ! ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಆಗಲಿಲ್ಲ, ಆದರೆ ಒಳಗೆ ಬಹಳ ಸಂತೋಷವಾಗಿದ್ದೆ. ಪರಸ್ಪರರಿಗೆ ಸಹಾಯ ಮತ್ತು ಸಮಾಲೋಚನೆಯೊಂದಿಗೆ ಜೀವನದಲ್ಲಿ ಚಿಕ್ಕ ಚಿಕ್ಕ ವಿಷಯಗಳಿಗೆ ಪರಿಹಾರ ಹುಡುಕುವುದು ನಿಜಕ್ಕೂ ಉತ್ತಮ ಅಭ್ಯಾಸ. ಇಂತಹ ಸಣ್ಣ ಪರಿಹಾರಗಳು ಸಂತೋಷಕ್ಕೆ ವೈಭವವನ್ನು ನೀಡುತ್ತದೆ.
ಅನಗತ್ಯ ಚರ್ಚೆಗೆ ಕಳೆಯುವ ಸಮಯವನ್ನು ಉಳಿಸಲು ವಿವಿಧ ವಿಷಯಗಳತ್ತ ಗಮನ ಹರಿಸುತ್ತಾರೆ ಹಾಗೂ ಅದನ್ನು ಒಳ್ಳೆಯ ಕೆಲಸಗಳಿಗೆ ಬಳಸುತ್ತಾರೆ. ಆಲ್ಬರ್ಟ್ ಐನ್ ಸ್ಟೀನ್ ಯಾವಾಗಲೂ ಒಂದೇ ಬಣ್ಣ, ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಿದ್ದರು. ಅವರ ಪ್ರಶ್ನೆಯೆಂದರೆ, ‘ಅದನ್ನೇಕೆ ಕಾಂಪ್ಲಿಕೇಟ್ ಮಾಡಬೇಕು?’ ಅವರು ಗ್ರೇ ಕಲರ್ ಸೂಟ್, ಲೆದರ್ ಜ್ಯಾಕೆಟ್ಸ್, ಸಾಕ್ಸ್ ಇಲ್ಲದ ಶೂವನ್ನು ಅವರ ಜೀವನವಿಡೀ ಧರಿಸಿದ್ದರು ಮತ್ತು ‘ಇಂದು ಏನು ಧರಿಸಬೇಕು?’ ಎಂದು ನಿರ್ಧರಿಸುವ ಒತ್ತಡದಿಂದ ಮುಕ್ತರಾಗಿದ್ದರು. ನಿಜ, ಅವರ ಬಳಿ ಒಂದೇ ರೀತಿಯ ಅನೇಕ ಬಟ್ಟೆಗಳಿದ್ದವು. ಸ್ಟೀವ್ ಜಾಬ್ಸ್ ಜಪಾನೀಸ್ ಫ್ಯಾಶನ್ ಡಿಸೈನರ್
ಇಸೆ ಮಿಯಾಕೆ ವಿನ್ಯಾಸಗೊಳಿಸಿದ ಆಪಲ್ ಲೋಗೋ ಇರುವ ಬ್ಲ್ಯಾಕ್ ಟರ್ಟಲ್ ನೆಕ್ ಟಿ-ಶರ್ಟ್ ಹಾಗೂ ಬ್ಲೂ ಜೀನ್ಸ್ ಧರಿಸುತ್ತಾರೆ. ಅವರು ‘ಇಂದು ಏನು ಧರಿಸಬೇಕು?’ ಎಂದು ಚರ್ಚೆ ಮಾಡುವ ಆ ಸಮಯವನ್ನು ಇತರ ವಿಷಯಗಳಿಗೆ ಬಳಸಬಹುದು ಮತ್ತು ನಿರ್ಧಾರದ ಆಯಾಸದಿಂದ ಮುಕ್ತವಾಗಿರಬಹುದು. ನಿಮಗೆ ಗೊತ್ತಿರುವಂತೆ, ಸ್ಟೀವ್ ಜಾಬ್ಸ್ ರ ಈ ಡ್ರೆಸ್ ಜನಪ್ರಿಯವಾಗಿದ್ದು, ವರ್ಲ್ಡ್ ನಲ್ಲಿ ಮಾದರಿಯಾಗಿದೆ. ಫೇಸ್ ಬುಕ್ ಅಥವಾ ಈಗಿನ ಮೆಟಾದ ಫೌಂಡರ್ ಮಾರ್ಕ್ ಜುಕರ್ ಬರ್ಗ್ ಸ್ಟೀವ್ ಜಾಬ್ಸ್ ಫುಟ್ ಸ್ಟೆಪ್ಸ್ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಅವರೂ ಸಹ ಗ್ರೇ ಟಿ-ಶರ್ಟ್, ಜೀನ್ಸ್ ಮತ್ತು ಸ್ನೀಕರ್ಸ್ ಧರಿಸುತ್ತಾರೆ. ಅವರ ಡ್ರೆಸ್ ಅನ್ನು ಇಟಾಲಿಯನ್ ಡಿಸೈನರ್ ಬ್ರುನೆಲೋ ಕುಸಿನೆಲಿ ವಿನ್ಯಾಸಗೊಳಿಸುತ್ತಾರೆ. ಮಾರ್ಕ್ ಜುಕರ್ ಬರ್ಗ್ ಪ್ರಕಾರ, ಅವರು ಒಂದೇ ಡ್ರೆಸ್ ಗೆ ಆದ್ಯತೆ ನೀಡುತ್ತಾರೆ, ಇದು ಅವರ ಎನರ್ಜಿಯನ್ನು ಇತರ ಪ್ರಮುಖ ಕೆಲಸಗಳಿಗೆ ಬಳಸಬಹುದು. ಈ ದಿಗ್ಗಜ ಡಿಸೈನರ್ ಗಳಿಂದ ಡ್ರೆಸ್ ಡಿಸೈನ್ ಮಾಡಿಸುವುದರಿಂದ ಇತರರು ಅವರ ಸ್ಟೈಲ್ ಕಾಪಿ ಮಾಡಲು ಆಗುವುದಿಲ್ಲ. ಆಪಲ್ ನ ಪ್ರಸ್ತುತ ಸಿಇಓ ಟಿಮ್ ಕುಕ್ ಪ್ರತಿದಿನ ಚಿಕನ್, ರೈಸ್ ಮತ್ತು ಸಲಾಡ್ ಸೇವಿಸುತ್ತಾರೆ. ಅವರೂ ಸಹ ಹೀಗೇ ಹೇಳುತ್ತಾರೆ, ‘ಪ್ರತಿದಿನ ಆಹಾರ ಆಯ್ಕೆ ಮಾಡಲು ಅಷ್ಟೊಂದು ಸಮಯ ಏಕೆ ವೇಸ್ಟ್ ಮಾಡಬೇಕು?’ ಈ ವ್ಯಕ್ತಿಗಳು ಎಷ್ಟು ಗ್ರೇಟ್ ಆಗಿ ಯೋಚಿಸುತ್ತಾರೆ. ಸಮಯವನ್ನು ಉಳಿಸಿ ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ನಾವೂ ಸಹ ಇಂತಹ ವ್ಯರ್ಥ ಮಾಡುವ ಸಮಯ ಪರೀಕ್ಷಿಸಕೊಳ್ಳಬೇಕು.
ಕಳೆದ ವರ್ಷ ನನ್ನ USA ಮತ್ತು ಜಪಾನ್ ಪ್ರವಾಸದ ಸಮಯದಲ್ಲಿ ನಾನು ಬಟ್ಟೆಗಳಿಗಾಗಿ ಸಾಕಷ್ಟು ಶಾಪಿಂಗ್ ಮಾಡಿದ್ದೇನೆ
ಅವಕಾಶ ಸಿಕ್ಕಿದರೆ, ನಾನು ಕಂಪ್ಲೀಟ್ ಶಾಪೋಹಾಲಿಕ್. ನಾನು ಜಪಾನ್ ಟ್ರಿಪ್ ನಿಂದ ಮನೆಗೆ ಮರಳಿದಾಗ, ‘ನಾನು ಏಕೆ ಇಷ್ಟೊಂದು ಶಾಪಿಂಗ್ ಮಾಡಿದೆ?’ ಎನ್ನುವ ಅಪರಾಧಿ ಭಾವದಲ್ಲಿ ಮುಳುಗಿದೆ. ಅದು ಅಗತ್ಯವಿರಲಿಲ್ಲ, ಕೆಲವು ಸ್ಥಳಗಳಲ್ಲಿ ಬಟ್ಟೆಗಳ ಚೀಪ್ ಆಗಿತ್ತೆಂದು, ಸ್ಟೈಲ್ ಗೋಸ್ಕರ, ಅಥವಾ ಕೆಲವೊಮ್ಮೆ, ನನಗೆ ಇಷ್ಟವಾದ್ದರಿಂದ, ಈ ಶಾಪಿಂಗ್ ಸ್ಪ್ರೀಯಲ್ಲಿ ನಾನು ಹೋರ್ಡರ್ ಆಗಿದ್ದೆ, ಆದರೆ ನಿಜಕ್ಕೂ ಅದನ್ನು ಖರೀದಿಸುವ ಅಗತ್ಯವಿರಲಿಲ್ಲ. ನಂತರ ಏನಾಯಿತೆಂದರೆ, ನಮ್ಮ USA ಮತ್ತು ಜಪಾನ್ ಟ್ರಿಪ್ ನಂತರ ನಾವು ಅದನ್ನು ರಿಟರ್ನ್ ಮಾಡುವಂತೆಯೂ ಇರಲಿಲ್ಲ. ನಾನು ರೆಕ್ ಲೆಸ್ ಶಾಪಿಂಗ್ ನ ಆಲೋಚನಾರಹಿತ ಕೆಲಸಕ್ಕೆ ಪಶ್ಚಾತ್ತಾಪ ಪಡುವುದು ಬಿಟ್ಟು ಬೇರೇನು ಮಾಡಲಾಗಿತ್ತು? ಮುಂದಿನ ಎರಡೂವರೆ ವರ್ಷಗಳವರೆಗೆ ಬಟ್ಟೆಗಳ ಶಾಪಿಂಗ್ ಮಾಡಬಾರದೆಂದು ನಾನು ದೃಢವಾಗಿ ನಿರ್ಧರಿಸಿದೆ. ಎಂದರೆ ಸೆಪ್ಟೆಂಬರ್ 2025 ರವರೆಗೆ. ಸುಧೀರ್ ಪ್ರಕಾರ ಇಂತಹ ವಿಪರೀತ ನಿರ್ಧಾರ ತೆಗೆದುಕೊಳ್ಳುವ ಬದಲಾಗಿ, ಪ್ರತೀ ಬಾರಿ ವಿವೇಚನಾಯುಕ್ತ ನಿರ್ಧಾರಗಳು ತೆಗೆದುಕೊಳ್ಳುವ ಹವ್ಯಾಸ ಮಾಡಬೇಕು. ಅವರು ನನ್ನನ್ನು ಬೈಯ್ಯಲು ಒಂದು ಅವಕಾಶ ತೆಗೆದುಕೊಂಡರು ಅಷ್ಟೇ. ಈ ನಿರ್ಧಾರ ತೆಗೆದುಕೊಂಡ ನಂತರ, ನಾನು ನೂರಾರು ದಿನಗಳವರೆಗೆ ವರ್ಲ್ಡ್ ಟ್ರಾವೆಲ್ ಮಾಡಿದ್ದೇನೆ, ಆದರೆ ಎಂದೂ ಬಟ್ಟೆಗಳನ್ನು ಖರೀದಿಸಲಿಲ್ಲ. ಮಾಲ್ ನಲ್ಲಿ ಗುರಿಯಿಲ್ಲದೇ ಅಲೆದಾಡುವ ಒತ್ತಡ ಮಾಯವಾಯಿತು. ಶಾಪಿಂಗ್ ಆತಂಕ ನಿವಾರಣೆಯಾಯಿತು. ಅದು ಪ್ರಯಾಣವನ್ನು ಅರ್ಥಪೂರ್ಣವಾಗಿಸಿತು. ಶಾಪಿಂಗ್ ವಿಷಯದಲ್ಲಿ, ನನ್ನ ಮಗ ರಾಜ್ ಈ ವಿಪರೀತ ಡಿಸಿಷನ್ ತೆಗೆದುಕೊಳ್ಳಲು ಕಾರಣ. ಸುನಿಲಾ ಮತ್ತು ನಾನು ಯುಎಸ್ ನಲ್ಲಿ ಶಾಪಿಂಗ್ ಮಾಡುವಾಗ, ನಾನು ರಾಜ್ ನನ್ನು ಕೇಳುತ್ತಿದ್ದೆ, ‘ಹೇ, ನಿನಗಾಗಿ ಏನಾದರೂ ಖರೀದಿಸು’, ಆದರೆ ಅವನು ’ನನಗೆ ಏನೂ ಬೇಡ’, ‘ನನಗೆ ಅದು ಅಗತ್ಯವಿಲ್ಲ!’ ಎನ್ನುತ್ತಿದ್ದ. ‘ನಿನಗಾಗಿ ಒಂದು ಒಳ್ಳೆಯ ಕಾರ್ ಖರೀದಿಸು’ ಎಂದರೂ, ಉದ್ಯೋಗ ದೊರೆಯುವವರೆಗೆ ಅವನು ಕಾರ್ ಖರೀದಿಸಲಿಲ್ಲ. ಆತ ಕೆಲಸಕ್ಕೆ ಸೇರಿದ ನಂತರ, ಒಂದು ಸಿಂಪಲ್ ಕಾರ್ ಖರೀದಿಸಿದ, ಅದರ ಲೋನ್ ಅನ್ನು ಅವನ ಸ್ಯಾಲರಿಯಿಂದ ಪಾವತಿಸಲು ಸಮರ್ಥನಿದ್ದ. ’ರಾಜ್, ನಿನಗೆ ದುಡ್ಡು ಬೇಕೇ’ ಎಂದರೆ ‘ಮಾಮ್, ನಾನು ಉದ್ಯೋಗದಲ್ಲಿದ್ದೇನೆ’ ಎನ್ನುತ್ತಿದ್ದ.
ನಮಗೀಗ ಒಂದು ಹೊಸ ಒತ್ತಡ, ಅದು ಮಕ್ಕಳು ಹಣ ಕೇಳುತ್ತಿದ್ದರು ಎಂದಲ್ಲ, ಅವರಿಗೆ ನಮ್ಮಿಂದ ಅದು ಬೇಡ ಎಂದು,
ರಾಜ್ ಹೇಳುತ್ತಿದ್ದ, ‘ನನಗೆ ಅನಗತ್ಯ ವಸ್ತುಗಳು ಬೇಡ’ ಎನ್ನುತ್ತಿದ್ದ. ಶೇರ್ಡ್ ಅಪಾರ್ಟ್ ಮೆಂಟ್ ನಲ್ಲಿ, ಅವನ ರೂಂನಲ್ಲಿ ವಿಶ್ರಾಂತಿ ಪಡೆಯಲು ಒಂದು ಬೆಡ್, ಕೆಲಸ ಮಾಡಲು ಡೆಸ್ಕ್ ಮತ್ತು ಮುಂದೆ ಟಿವಿ ಇತ್ತು. ‘ಏನೂ ಎಕ್ಸ್ ಟ್ರಾ ತರಬೇಡ’ ಎನ್ನುತ್ತಿದ್ದ ಈ ರೀತಿ ನಾವು ಈಗ ನಮ್ಮ ಮಕ್ಕಳಿಂದ ಕಲಿಯದ ಹೊಸ ವಿಷಯಗಳನ್ನು ಕಲಿಯುತ್ತಿದ್ದೇವೆ. ಅದು ಒಳ್ಳೆಯದು. ಆ ಕಲಿಕೆ ಅಥವಾ ಐನ್ ಸ್ಟೀನ್ಸ್ ನ ಸ್ಫೂರ್ತಿಯಿಂದ, ನಾವು ಹೊಸ ಕಾರ್ ಖರೀದಿಸಲು ಯೋಚಿಸಿದೆವು, ನಮ್ಮ ಹಳೆಯ ಕಾರ್ ನ ಮೇಂಟೆನೆನ್ಸ್ ವೆಚ್ಚ ಹೆಚ್ಚಾಗುತ್ತಿದ್ದರಿಂದ ಈ ನಿರ್ಧಾರ ತೆಗೆದುಕೊಂಡೆವು. ನಾವು ಶೋರೂಂಗೆ ಭೇಟಿ ನೀಡಿದೆವು, ಅರ್ಧ ಗಂಟೆಯೊಳಗೆ ಅದೇ ಬಣ್ಣದಲ್ಲಿ ಅದೇ ಕಾರ್ ನ ಹೊಸ ವರ್ಷನ್ ಬುಕ್ ಮಾಡಿ ಹೊರಬಂದೆವು. ನಾವು ಟೆನ್ ಶೋರೂಂ ಸರ್ಚ್ ಮಾಡುವುದನ್ನು ಭೇಟಿ ನೀಡುವುದನ್ನು, ಆನ್ ಲೈನ್ ನಲ್ಲಿ ಕಾರ್ ರಿವ್ಯೂ ಮತ್ತು ಪಾಡ್ ಕಾಸ್ಟ್ಸ್ ವೀಕ್ಷಿಸಲು ಗಂಟೆಗಟ್ಟಲೆ ಸಮಯ ವೇಸ್ಟ್ ಮಾಡುವುದರಿಂದ ಮುಕ್ತರಾದೆವು.
ಮೇರಿ ಕಾಂಡೋ ಹಾಗೂ ಅವಳಂತಹ ಇತರರು ಮಾಡುವ ಅಸ್ತವ್ಯಸ್ತಗೊಂಡ ಮನೆಗಳನ್ನು ಸ್ವಚ್ಚಮಾಡುವ ಮೂಲಕ,
‘ಸೇಲ್’ ಎನ್ನುವ ಗೀಳಿನಿಂದ ಅಮೇರಿಕನ್ನರನ್ನು ಮುಕ್ತಗೊಳಿಸಿ, ‘ಪ್ರಾಬ್ಲಮ್ಸ್ ಆಫ್ ಪ್ಲೆಂಟಿ’ ಯಿಂದ ಬಿಡುಗಡೆಗೊಳಿಸಿ ಮಿಲಿಯನೇರ್ ಗಳಾಗುತ್ತಿದ್ದಾರೆ. ಅಮೇರಿಕನ್ನರು ಈ ಮ್ಯಾಡ್ ನೆಸ್ ನಿಂದ ಹೊರಬಂದಿದ್ದಾರೆ ಆದರೆ ಭಾರತೀಯರಾದ ನಾವು ಆನ್ ಲೈನ್ ಶಾಪಿಂಗ್ ಎನ್ನುವ ಹೊಸ ಸಮುದ್ರದೊಳಗೆ ಮುಳುಗಲು ಆರಂಭಿಸಿದ್ದೇವೆ. ನಾವು ಪ್ರತಿದಿನ ಹೆಚ್ಚಿನ ನಮ್ಮ ಮನೆಗಳಲ್ಲಿ ಎಷ್ಟು ಆನ್ ಲೈನ್ ಶಾಪಿಂಗ್ ಬಾಕ್ಸ್ ಗಳು ಬರುತ್ತದೆಂದು ಪರೀಕ್ಷಿಸಬೇಕು. ‘ನಮಗೆ ಇಷ್ಟೆಲ್ಲಾ ವಸ್ತುಗಳು ಅಗತ್ಯವೇ?’ ಎಂದು ನಾವು ಯೋಚಿಸಬೇಕು. ಹಿಂದೆ, ನಾವು ಮಾರ್ಕೆಟ್ ನಿಂದ ಇಷ್ಟೆಲ್ಲಾ ವಸ್ತುಗಳನ್ನು ಖರೀದಿಸುತ್ತಿದ್ದೆವೇ? ಸಾಂಕ್ರಾಮಿಕದ ಅವಧಿಯಲ್ಲಿ, ನಾವು ಆನ್ ಲೈನ್ ಶಾಪಿಂಗ್ ಗೆ ಅಂಟಿಕೊಂಡಿದ್ದೇವೆ. ನಮ್ಮ ಮನೆಗೆ ಬರುವ ವಸ್ತುಗಳಿಂದ ಒಂದು ದಿನ ನಮಗೆ ಖಂಡಿತಾ ವಾಕರಿಕೆ ಬರುತ್ತದೆ. ಇದನ್ನು ನಿಲ್ಲಿಸಬೇಕು. ನಂತರ ನಾವು ನಿರ್ದಿಷ್ಟ ವಸ್ತು ಆರ್ಡರ್ ಮಾಡಲು ಬಯಸುವ ವ್ಯಕ್ತಿ ಅದನ್ನು ಆನ್ ಲೈನ್ ಶಾಪಿಂಗ್ ಕಾರ್ಟ್ ಗೆ ಹಾಕಬೇಕು, ಮತ್ತೊಬ್ಬ ವ್ಯಕ್ತಿ ಅದನ್ನು ಪರೀಕ್ಷಿಸಬೇಕು ಹಾಗೂ ಮೂರನೆಯ ಪಾವತಿಸುವ ಮೊದಲು ಅದನ್ನು ಮರು ಪರೀಕ್ಷಿಸಬೇಕು ಎಂದು ನಿರ್ಧರಿಸಿದೆವು. ನಮಗೆ ಇದು ನಿಜಕ್ಕೂ ಅಗತ್ಯವಿದೆಯೇ? ನಾವು ಇದರಿಂದ ಬಿಡಿಸಿಕೊಳ್ಳಬೇಕು ಅಲ್ಲವೇ? ಈ ಪ್ರಶ್ನೆಗಳನ್ನು ಕೇಳಿ, ಪ್ರತಿಯೊಬ್ಬರೂ ಒಪ್ಪಿದ ನಂತರ ವಸ್ತು ಖರೀದಿಸಿ. ನಿಧಾನವಾಗಿ ಮನೆಗೆ ಬರುವ ಬಾಕ್ಸ್ ಗಳ ಸಂಖ್ಯೆ ಕಡಿಮೆಯಾಗುತ್ತದೆ. ಒತ್ತಡ ಕಡಿಮೆಯಾಗುತ್ತದೆ. ನಾವು ಆ ಬಾಕ್ಸ್ ಗಳ ಪರಿಸರದ ಪ್ರಭಾವ ಕಡಿಮೆ ಮಾಡಲು ನಮ್ಮ ಪಾತ್ರ ನಿರ್ವಹಿಸಿದ್ದೇವೆ, ನಮ್ಮ ಮನೆಯಿಂದ ಹೊರಹೋಗುವ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಿದ್ದೇವೆ. ನಾನು 8 ಮತ್ತು 9 ನೇ ತರಗತಿಯಲ್ಲಿರುವಾಗ ಎರಡು ವರ್ಷಗಳವರೆಗೆ ಬೊರ್ಡಿಯಲ್ಲಿರುವ ನನ್ನ ಆಂಟಿ ಕಮಲ್ ಸಾವೆ ರವರ ಮನೆಯಲ್ಲಿದ್ದೆ. ಆ ದಿನಗಳಲ್ಲಿ, ನಾವು ಸಮೀಪದ ಹತ್ತಿರದ ಬುಡಕಟ್ಟು ಗ್ರಾಮಕ್ಕೆ ಭೇಟಿ ನೀಡುತ್ತಿದ್ದೆವು. ಅವರ ಮನೆಗಳನ್ನು ನಾನು ಇನ್ನೂ ಸ್ಪಷ್ಟವಾಗಿ ನೆನಪಿಸಿಕೊಳ್ಳಬಲ್ಲೆ ಮತ್ತು ವಿಷುಯಲೈಸ್ ಮಾಡುತ್ತೇನೆ. ಅವು ಸೆಗಣಿಯಿಂದ ಆವರಿಸಿದ ಚಿಕ್ಕ ಮಣ್ಣಿನ ಗುಡಿಸಲುಗಳು. ಹಲಗೆಗಳ ಮೇಲೆ ಕೆಲವೇ ಕೆಲವು ಪಾತ್ರೆಗಳನ್ನು ಜೋಡಿಸಿದ್ದರು, ತೆಳುವಾದ ಹಾಸಿಗೆಗಳು ಮತ್ತು ಒಂದು ಭಾಗದಲ್ಲಿ ಸತ್ರಂಜ್ ಅಥವಾ ಮ್ಯಾಟ್ ಗಳು ಹಾಗೂ ಆ ಮಣ್ಣಿನ ಗೋಡೆಗಳ ಮೇಲೆ ಸೂಕ್ಷ್ಮವಾದ ವಾರ್ಲಿ ಪೇಂಟಿಂಗ್ಸ್.
ಆ ಸಂತೋಷದ ಮನೆಗಳು ಕುಟುಂಬ ತೃಪ್ತಿ ಹಾಗೂ ಸಂತೋಷದಿಂದಿರಲು ವಸ್ತುಗಳು ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತಿತ್ತು. ನಾವು ಮನೆಯಲ್ಲಿ ವಸ್ತುಗಳನ್ನು ಸೇರಿಸುತ್ತಲೇ ಇರುತ್ತೇವೆ, ನಂತರ ಒತ್ತಡ ಅನುಭವಿಸುತ್ತೇವೆ.
ಪ್ರಸ್ತುತ, ನಾನು ನನ್ನ ಮನೆಯಲ್ಲಿರುವ ರಿಮೋಟ್ ಗಳ ಸಂಖ್ಯೆಯಿಂದ ಒತ್ತಡಕ್ಕೆ ಒಳಗಾಗಿದ್ದೇನೆ. ನಾವು ಹೆಚ್ಚಿನ ಆಟೋಮೇಷನ್ ಸೇರಿಸಿಲ್ಲ, ಇಲ್ಲದಿದ್ದರೆ ಲೈಟ್ ಗಳಿಗೆ ಅನೇಕ ರಿಮೋಟ್ ಗಳು, ಫ್ಯಾನ್ ಗಳಿಗೆ ರಿಮೋಟ್ ಗಳು, ಟಿವಿಗಳಿಗೆ ರಿಮೋಟ್ ಗಳು, ಸ್ಪೀಕರ್ ಗಳಿಗೆ ರಿಮೋಟ್ ಗಳು ಮತ್ತು ಕರ್ಟನ್, ಗ್ಲಾಸ್ ಗಳು ಮತ್ತು ವಿಂಡೋಗಳಿಗೆ ರಿಮೋಟ್ ಗಳಿರುತ್ತಿತ್ತು. ಹಿಂದಿನ ಮನೆಗಳು ಚೆನ್ನಾಗಿತ್ತು. ಬಟನ್ ಪ್ರೆಸ್ ಮಾಡಿದಾಗ, ಫ್ಯಾನ್ ತಿರುಗುತ್ತಿತ್ತು, ಟ್ಯೂಬ್ ಲೈಟ್ ಆನ್ ಆದರೆ, ಇಡೀ ಮನೆಯಲ್ಲಿ ಬೆಳಕಿನ ಹೊಳಪು ಆವರಿಸುತ್ತಿತ್ತು. ಈಗ ಅನೇಕ ಲೈಟ್ ಗಳನ್ನು ಆನ್ ಮಾಡಿದರೂ, ನಮಗೆ ಬೇಕಾಗಿರುವಷ್ಟು ಅಥವಾ ಅಗತ್ಯವಿರುವಷ್ಟು ಬೆಳಕು ಇರುವುದಿಲ್ಲ. ಈ ರೀತಿ ನಮ್ಮ ಒತ್ತಡ ಹೆಚ್ಚುತ್ತಲೇ ಇದೆ. ಕೆಲವೊಮ್ಮೆ ಈ ‘ಒತ್ತಡ ಬೇಡ’ ನಿರ್ಧಾರ ತೆಗೆದುಕೊಳ್ಳುವ ಮೂಲಕ, ಲೈಫ್ ಕೆಲವೊಮ್ಮೆ ಕಂಪ್ಲೀಟ್ಲಿ ಬೋರಿಂಗ್ ಎನಿಸುತ್ತದೆ ಎಂದು ಭಾವಿಸುತ್ತೇನೆ.
ಅತ್ಯಂತ ಸಿಂಪ್ಲಿಫಿಕೇಶನ್ ಸಹ ಕಿರಿಕಿರಿ ಎನಿಸುತ್ತದೆ. ಆದ್ದರಿಂದ ಈ ‘ಬೇಕೇ ಅಥವಾ ಬೇಡವೇ’ ಸಹ ಮುಂದುವರೆಯುತ್ತದೆ,ಆದರೆ ಮುಖ್ಯವಾದ ವಿಷಯವೆಂದರೆ ನಾವು ಯಾವುದು ಒಳ್ಳೆಯದು ಯಾವುದು ಕೆಟ್ಟದು ಎಂದು ತಿಳಿದಿರಬೇಕು. ಆದ್ದರಿಂದ ನಾವು ಸಾಧ್ಯವಾದಷ್ಟು ಅನೇಕ ವಿವೇಚನಾಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳೋಣ. ಥಿಂಗ್ಸ್ ಗಳನ್ನು ಹೆಚ್ಚು ಸಿಂಪ್ಲಿಫೈ ಮಾಡೋಣ. ನಾವು ನಮ್ಮ ಮನಸ್ಸಿಗೆ ಅನಗತ್ಯ ಒತ್ತಡ ಕಡಿಮೆ ಮಾಡೋಣ. ಹೊಸ ವಿಷಯಗಳನ್ನು ಕಲಿಯೋಣ, ಹವ್ಯಾಸಗಳನ್ನು ಆರಂಭಿಸೋಣ. ಜೀವನ ಪೂರ್ತಿಯಾಗಿ ಜೀವಿಸೋಣ. ಜೀವನದಲ್ಲಿ ಥಿಂಗ್ಸ್ ಸಿಂಪ್ಲಿಫೈ ಮಾಡೋಣ ಮತ್ತು ಹ್ಯಾಪಿನೆಸ್ ಆಂಪ್ಲಿಫೈ ಮಾಡೋಣ!
Post your Comment
Please let us know your thoughts on this story by leaving a comment.