Published in the Sunday Prajavani on 23 February, 2025
ಯೂರೊಪಿನ ರೈಲು ಪ್ರಯಾಣಗಳಿಗೆ ಕಾಲಾತೀತವೆನ್ನಬಹುದಾದ ಸೆಳೆತವಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಒಮ್ಮೆಯಾದರೂ ಅದನ್ನು ಅನುಭವಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ.
ಯೂರೊಪ್ ಪ್ರವಾಸ ಮಾಡುವ ಆಲೋಚನೆ ಮನಸ್ಸಿಗೆ ಮೂಡಿದಾಗಲೆಲ್ಲಾ, ಅದನ್ನು ನಮ್ಮ ಕನಸಿನ ತಾಣಕ್ಕೆ ಪಯಣ ಎಂದುಕೊಳ್ಳುತ್ತೇವೆ. ಯೂರೊಪ್ ವಾಸ್ತವವಾಗಿಯೂ ಅಂಥದ್ದೇ ಭಾವನೆ ಉಂಟುಮಾಡುತ್ತದೆ. ಯೂರೊಪಿನ ಸೊಬಗಿನ ಭೂಪ್ರದೇಶಗಳಲ್ಲಿ ಪಯಣಿಸುತ್ತಿರುವ ದೃಶ್ಯದೊಂದಿಗೆ ಅಂತ್ಯಗೊಳ್ಳುವ ಸಿನಿಮಾಗಳು ಸಾಕಷ್ಟಿವೆ. ಇಂತಹ ಚಲನಚಿತ್ರಗಳು ನಮಗೆ ಪ್ರವಾಸ ಮಾಡಲು ಪ್ರೇರೇಪಿಸುತ್ತವೆ. ಸಾರ್ವಕಾಲಿಕ ಹೆಸರಾಂತ ಸಿನಿಮಾ ಎನ್ನಬಹುದಾದ ‘ದಿಲ್ವಾಲೆ ದುಲ್ಹಾನಿಯಾ ಲೇ ಜಾಯೇಂಗೆ’ (ಡಿ.ಡಿ.ಎಲ್.ಜೆ) ಬಗ್ಗೆ ಯೋಚಿಸಿದಾಗ, ಅದರ ರಾಜ್ ಹಾಗೂ ಸಿಮ್ರನ್ ಅವರ ಪ್ರಣಯಗಾಥೆ ನಡೆಯುವುದು ಯೂರೊಪಿನ ನಳನಳಿಸುವ ಹಸುರಿನ ನಡುವೆ ಎಂಬುದು ನೆನಪಾಗದೇ ಇರಲು ಸಾಧ್ಯವೇ ಇಲ್ಲ. ಈ ಚಿತ್ರದಲ್ಲಿ ಯೂರೊಪಿನ ನಿಬ್ಬೆರಗಾಗಿಸುವ ಪ್ರಕೃತಿಯ ನೋಟಗಳನ್ನು ರೈಲಿನ ಕಿಟಕಿಯ ಮೂಲಕ ಅನಾವರಣಗೊಳಿಸಿರುವುದು ಕೇವಲ ನೋಡುಗರ ಹೃದಯಗಳನ್ನಷ್ಟೇ ಸೂರೆಗೊಳ್ಳಲಿಲ್ಲ; ಲಕ್ಷಾಂತರ ಮಂದಿಗೆ ಖುದ್ದು ಯಾನ ಕೈಗೊಳ್ಳುವುದಕ್ಕೆ ದೊಡ್ಡ ಸ್ಫೂರ್ತಿಯಾಯಿತು. ಈ ಮೂವಿಯಲ್ಲಿ ರೈಲು ಬರೀ ಹಿನ್ನೆಲೆಯಷ್ಟೇ ಅಲ್ಲ; ಅದು ಸಿನಿಮಾದಲ್ಲಿ ಒಂದು ರೀತಿಯಲ್ಲಿ ನಾಯಕ ಪಾತ್ರಧಾರಿಯಂತೆಯೇ ಇದೆ. ಆ ಮೂಲಕ, ಅದು ಪಾತ್ರಗಳನ್ನು ಕಥೆಯ ಕೇಂದ್ರದೆಡೆಗೆ ಕೊಂಡೊಯ್ಯುತ್ತದೆ.
ಯೂರೊಪಿನ ರೈಲು ಪ್ರಯಾಣಗಳಿಗೆ ಕಾಲಾತೀತವೆನ್ನಬಹುದಾದ ಸೆಳೆತವಿದೆ. ಪ್ರತಿಯೊಬ್ಬರೂ ಬದುಕಿನಲ್ಲಿ ಒಮ್ಮೆಯಾದರೂ ಅದನ್ನು ಅನುಭವಿಸಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ನಗರಗಳ ನಡುವೆ ತ್ವರಿತವಾಗಿ ಅನುಕೂಲಕರ ಸೌಕರ್ಯಗಳೊಂದಿಗೆ ಪ್ರಯಾಣಿಸುವುದಿರಲಿ ಅಥವಾ ಸುಮ್ಮನೇ ಕಿಟಕಿ ಬದಿ ಕುಳಿತು ನಿಸರ್ಗದ ಅದ್ಭುತಗಳನ್ನು ಕಣ್ತುಂಬಿಕೊಳ್ಳುತ್ತಾ ಪ್ರಪಂಚ ಸಾಗುತ್ತಿರುವ ಬಗೆಯನ್ನು ಅವಲೋಕಿಸುವುದಿರಲಿ, ಇವೆಲ್ಲಕ್ಕೂ ಯೂರೊಪಿನಲ್ಲಿ ರೈಲು ಪ್ರಯಾಣವು ಹೇಳಿಮಾಡಿಸಿದಂತಿದೆ.
ನಾವು ‘ವೀಣಾ ವರ್ಲ್ಡ್’ನಲ್ಲಿ ನಮ್ಮ ಅತಿಥಿಗಳಿಗೆ ಕಸ್ಟಮೈಸ್ಡ್ ಹಾಲಿಡೆ ವಿಭಾಗದ ಮೂಲಕ ಸೂಕ್ತ ಪ್ರವಾಸ ಯೋಜನೆಗಳನ್ನು ರೂಪಿಸಿದ್ದೇವೆ. ನಾವು ನಮ್ಮ ಪ್ರವಾಸಿಗರಿಗೆ ಯೂರೊಪ್ ಅನ್ವೇಷಣೆಗೆ ರೈಲು ಪ್ರಯಾಣವೇ ಅತ್ಯುತ್ತಮ ವಿಧಾನ ಎಂದೇ ಸಲಹೆ ನೀಡುತ್ತೇವೆ. ನಮ್ಮ ಸಮೂಹ ಪ್ರವಾಸಗಳ ವೇಳೆ ಯೂರೊಪಿನ ಉತ್ಕೃಷ್ಟ ರಸ್ತೆ ಜಾಲದಲ್ಲಿ ಕೋಚ್ (ಬಸ್) ಪಯಣದ ಜೊತೆಗೆ ‘ಯೂರೊಸ್ಟಾರ್ ರೈಲು’ ಪ್ರಯಾಣ ಲಭ್ಯವಾಗಿಸುತ್ತೇವೆ. ಅಂದAತೆ, ಯೂರೊಸ್ಟಾರ್, ಸಮುದ್ರದಡಿಯ ಸುರಂಗದಲ್ಲಿ 37.9 ಕಿಮೀ ಸಾಗಿ ಲಂಡನ್ , ಪ್ಯಾರಿಸ್ ಹಾಗೂ ಬ್ರಸೆಲ್ಸ್ಗಳನ್ನು ಸಂಪರ್ಕಿಸುವ ಹೆಸರಾಂತ ಹೈಸ್ಪೀಡ್ ರೈಲಾಗಿದೆ.
‘ರೈಲ್ ಯೂರೊಪ್’ ಮೂಲಕ ಬುಕಿಂಗ್ ಮಾಡಿದರೆ ಯೂರೊಪಿನ 33 ದೇಶಗಳ 25,000 ಪ್ರೇಕ್ಷಣೀಯ ಸ್ಥಳಗಳನ್ನು ತಲುಪಲು ಅವಕಾಶವಾಗುತ್ತದೆ. ಸ್ವಿಸ್‌ನ ಆಲ್ಪ್ಸ್ ಪರ್ವತ ಶಂಗಕ್ಕೆ ಹೋಗುವುದಿರಲಿ ಅಥವಾ ಫ್ರಾನ್ಸ್ನ ಕೇಂದ್ರ ಭಾಗಕ್ಕೆ ತೆರಳುವುದಿರಲಿ, ‘ರೈಲ್ ಯೂರೊಪ್’ ಸುಲಭ ಬಳಕೆ ಸಾಧ್ಯವಾಗಿಸಲು ರೂಪಿಸಿರುವ ಪ್ರಯಾಣಿಕಸ್ನೇಹಿ ವ್ಯವಸ್ಥೆಯಾಗಿದೆ. ಇದು ಯಾವುದೇ ಪ್ರಯಾಸವಿಲ್ಲದೆ ಯೂರೊಪಿನ ಸಮೃದ್ಧ ಸಾಂಸ್ಕೃತಿಕ ವೈವಿಧ್ಯದ ಅನುಭವವನ್ನು ಖಾತರಿಗೊಳಿಸುತ್ತದೆ. ಡಿ.ಡಿ.ಎಲ್.ಜೆ. ಸಿನಿಮಾದ ರಾಜ್ ಹಾಗೂ ಸಿಮ್ರನ್ ಅವರ ಕಥೆಯಲ್ಲಿ ಆಗುವಂತೆ ‘ಕೇವಲ ತಲುಪಬೇಕಾದ ಸ್ಥಳವಷ್ಟೇ ಮುಖ್ಯವಲ್ಲ, ಗುರಿ ತಲುಪಲು ಕ್ರಮಿಸಬೇಕಾದ ಪ್ರಯಾಣ ಮುಖ್ಯ’ ಎಂಬ ಅನುಭವವಾಗುತ್ತದೆ. ಭೇಟಿ ಮಾಡಿದ ಸ್ಥಳವು ಎಷ್ಟು ಸ್ಮರಣೀಯ ಅನ್ನಿಸುತ್ತದೋ, ಹಾಗೆಯೇ ಕ್ರಮಿಸಿದ ಪ್ರಯಾಣವನ್ನು ಕೂಡ ‘ರೈಲ್ ಯೂರೊಪ್’ ನಿಮಗೆ ಮರೆಲಾಗದ ಅನುಭವವನ್ನಾಗಿಸುತ್ತದೆ.
ಬಹುತೇಕ ಭಾರತೀಯರಿಗೆ ರೈಲು ಪ್ರಯಾಣವು ‘ನಾಸ್ಟಾಲ್ಜಿಯಾ’ (ಹಳೆಯ ಮಧುರ ನೆನಪುಗಳ) ಭಾವನೆಯನ್ನು ಹೊರಹೊಮ್ಮಿಸುತ್ತದೆ. ಬಾಲ್ಯದ ರಜೆಯ ದಿನಗಳು, ಕುಟುಂಬ ಪ್ರವಾಸಗಳು ಇತ್ಯಾದಿಗಳ ನೆನಪನ್ನು ಅದು ಹೊತ್ತು ತರುತ್ತದೆ. ರೈಲು ಪ್ರಯಾಣವನ್ನು ಹೆಚ್ಚಾಗಿ ವಿರಮಿಸಲು ಅವಕಾಶವೆಂದು, ಹರಟೆ ಹೊಡೆಯಲು ಸಂದರ್ಭವೆಂದು ಹಾಗೂ ಸದಾ ಬದಲಾಗುವ ಭೂದೃಶ್ಯಗಳನ್ನು ನೋಡಿ ಖುಷಿಪಡಲು ಪ್ರಶಸ್ತ ಸನ್ನಿವೇಶವೆಂದು ಭಾವಿಸಲಾಗುತ್ತದೆ. ರೈಲುಗಳ ಬಗೆಗಿನ ಒಲವು ಭಾರತೀಯರ ಪ್ರಯಾಣ ವಿಧಾನವನ್ನು ಇಂದಿಗೂ ಪ್ರಭಾವಿಸುತ್ತಿದೆ. ಹಾಗೆಯೇ, ಭಾರತದಿಂದ ಯೂರೊಪಿಗೆ ವಿಮಾನದಲ್ಲಿ ಹಾರಿ ಇಳಿಯುತ್ತಿದ್ದಂತೆ ಅಲ್ಲಿನ ಪ್ರಯಾಣಕ್ಕೆ ರೈಲುಗಳೇ ಅತ್ಯಂತ ಸೂಕ್ತವಾಗಿರುತ್ತವೆ. ಅಲ್ಲಿ ರೈಲು ನಿಲ್ದಾಣಗಳು ಬಹುಮಟ್ಟಿಗೆ ಪ್ರಯಾಣಿಕರಿಗೆ ಅನುಕೂಲಕರವೆನ್ನಿಸುವಂತೆ ನಗರಗಳ ಮಧ್ಯಭಾಗದಲ್ಲೇ ಇವೆ. ಭದ್ತತಾ ತಪಾಸಣೆಗಳು ಮತ್ತಿತರ ವಿಧಿವಿಧಾನಗಳು ಕೂಡ ಸರಳವಾಗಿಯೇ ಇವೆ. ಇದರಿಂದಾಗಿ ಪ್ರಯಾಣವು ಸುಗಮ ಹಾಗೂ ಸರಾಗ ಅನ್ನಿಸುತ್ತದೆ. ನಿಮ್ಮ ಲಗೇಜ್ ಬಗ್ಗೆ ಕೂಡ ತಲೆಕೆಡಿಸಿಕೊಳ್ಳುವ ಪ್ರಮೇಯವಿಲ್ಲದಂತಹ ವ್ಯವಸ್ಥೆ ಆ ದೇಶಗಳಲ್ಲಿದೆ.
ಯೂರೊಪಿನಲ್ಲಿ ರೈಲು ಪ್ರಯಾಣವು ಅಚ್ಚರಿಯೆನ್ನಿಸುವಷ್ಟು ಕಡಿಮೆ ದರದಿಂದ ಕೂಡಿದೆ. ನಿಗದಿತ ದಿನಗಳವರೆಗೆ ಅಪರಿಮಿತ ಪ್ರಯಾಣಕ್ಕೆ ಅವಕಾಶ ನೀಡುವ ಪಾಸ್‌ಗಳ ವ್ಯವಸ್ಥೆ ಉಂಟು. ಹಲವಾರು ದೇಶಗಳನ್ನು ಬಜೆಟ್‌ನ ಮಿತಿಯಲ್ಲಿ ಅನ್ವೇಷಿಸಬೇಕೆಂದು ಇಚ್ಛಿಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿರುತ್ತದೆ. ನಿಗದಿತ ಕಾಲಮಿತಿಯಲ್ಲಿ ನೀವು ಪ್ರತಿದಿನ ಪ್ರಯಾಣ ಮಾಡುವುದರಿಬಹುದು ಅಥವಾ ಬಿಟ್ಟು ಬಿಟ್ಟು ಪ್ರಯಾಣ ಮಾಡುವುದಿರಬಹುದು, ಅದಕ್ಕೆ ತಕ್ಕಂತೆ ಫ್ಲೆಕ್ಸಿಬಲ್ ಪಾಸ್‌ಗಳು ಇವೆ. ಇಲ್ಲಿ ರೈಲುಗಳು 25,000ಕ್ಕೂ ಹೆಚ್ಚು ತಾಣಗಳನ್ನು ಸಂಪರ್ಕಿಸುವುದರಿAದ ದೂರದ ಪಟ್ಟಣಗಳಿಗೆ, ವ್ಯಾಪಾರ-ವಹಿವಾಟಿಗೆ ಹೆಸರಾದ ನಗರಗಳಿಗೆ ಹಾಗೂ ರಮಣೀಯ ಗ್ರಾಮಗಳಿಗೆ ಸುಲಭವಾಗಿ ಭೇಟಿ ನೀಡಬಹುದು. ಪರಿಸರಸ್ನೇಹಿ ವಿಧಾನದಲ್ಲಿ ಪ್ರಯಾಣಿಸಲು ಬಯಸುವವರಿಗೆ ಕೂಡ ರೈಲು ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಏಕೆಂದರೆ, ವಿಮಾನಕ್ಕೆ ಹೋಲಿಸಿದರೆ ರೈಲು ಹೊರಸೂಸುವ ಇಂಗಾಲದ ಪ್ರಮಾಣ ಕಡಿಮೆ ಇರುತ್ತದೆ.
ನೀವು ಮಧುಚಂದ್ರಕ್ಕೆ ತೆರಳುವುದಿರಬಹುದು ಅಥವಾ ಅನುಕೂಲಕರ ಪ್ರಯಾಣಾನುಭವದ ನಿರೀಕ್ಷೆ ಮಾತ್ರವೇ ನಿಮ್ಮದಾಗಿರಬಹುದು; ಯೂರೊಪಿನ ಸುಸಜ್ಜಿತ ಸೌಕರ್ಯದ ರೈಲುಗಳಲ್ಲಿ ಕುಳಿತು ಅಲ್ಲಿನ ನಿಸರ್ಗ ವೈಭವಕ್ಕೆ ಸಾಕ್ಷಿಯಾಗುವುದಕ್ಕಿಂತ ಅತ್ಯುತ್ತಮ ಮಾರ್ಗ ಬೇರೊಂದಿಲ್ಲ. ಗ್ಲೇಸಿಯರ್ ಎಕ್ಸ್ ಪ್ರೆಸ್ ಮತ್ತು ಬರ್ನಿಯಾ ಎಕ್ಸ್ ಪ್ರೆಸ್‌ಗಳು ಸರಿಸಾಟಿಯಿರದ ಅನುಕೂಲ, ಸಕಲ ಸೌಕರ್ಯ ಹಾಗೂ ನಿಬ್ಬೆರಗಾಗಿಸುವ ನೋಟಗಳನ್ನು ಕೊಡಮಾಡುತ್ತವೆ. ಆ ಮೂಲಕ ಪ್ರಯಾಣವನ್ನು ಒಟ್ಟಾರೆ ಅನುಭವದ ಅವಿನಾಭಾವ ಭಾಗವಾಗಿಸುತ್ತವೆ. ರೈಲು ಸಾಗುವ ಮಾರ್ಗಗಳು ಕಣ್ಣಿಗೆ ಹಬ್ಬವುಂಟು ಮಾಡುತ್ತವೆ. ಭೂಮಿಯನ್ನು ಮಂಜು ತಬ್ಬುವ ಚಳಿಗಾಲದಲ್ಲಿ ಹುಬ್ಬೇರಿಸುವಂತಹ ದೃಶ್ಯಗಳ ದರ್ಶನವಾಗುತ್ತದೆ; ಪ್ರವಾಸಿಗರಿಗೆ ಮಾಯಾ ಲೋಕದಲ್ಲಿರುವಂತೆ ಭಾಸವಾಗುತ್ತದೆ.
ಯೂರೊಪಿನಲ್ಲಿ ಅವಿಸ್ಮರಣೀಯ ಪ್ರಯಾಣಾನುಭವ ನೀಡುವ ಕೆಲವು ಪ್ರಸಿದ್ಧ ರೈಲುಗಳು ಹೀಗಿವೆ:
- ಗ್ಲೇಸಿಯರ್ ಎಕ್ಸ್ ಪ್ರೆಸ್: ಪ್ರಪಂಚದ ಅತ್ಯಂತ ಕಡಿಮೆ ವೇಗದ ಎಕ್ಸ್ ಪ್ರೆಸ್ ರೈಲು ಇದಾಗಿದ್ದು, ಸ್ವಿಸ್ ಆಲ್ಪ್ಸ್ ಪರ್ವತಗಳ ಮೂಲಕ 291 ಸೇತುವೆಗಳನ್ನು ಹಾಗೂ 91 ಸುರಂಗಗಳನ್ನು ಹಾದು ಸಾಗುತ್ತದೆ. ಜೆರ್ಮಾಟ್‌ನಿಂದ ಸೇಂಟ್ ಮೊರಿಟ್ಜ್ವರೆಗಿನ ಪ್ರಯಾಣವು ಹಿಮಾಚ್ಛಾದಿತ ಪರ್ವತಗಳು, ಪ್ರಪಾತ ಕಣಿವೆಗಳು ಹಾಗೂ ಸುಂದರ ಆಲೈನ್ ಹಳ್ಳಿಗಳ ನೋಟಗಳನ್ನು ಅನಾವರಣಗೊಳಿಸುತ್ತದೆ.
- ಬರ್ನಿನಾ ಎಕ್ಸ್ ಪ್ರೆಸ್: ಸ್ವಿಟ್ವರ್‌ಲೆಂಡ್‌ನಿAದ ಇಟಲಿಯನ್ನು ಸಂಪರ್ಕಿಸುವ ಈ ರೈಲು ಬೆರಗು ಹುಟ್ಟಿಸುವ ಪರ್ವತ ಮಾರ್ಗಗಳು, ಹಿಮನದಿಗಳು, ಪರಿಶುಭ್ರ ಸರೋವರಗಳನ್ನು ಎಡತಾಕುತ್ತಾ ಸಾಗುತ್ತದೆ. ರೈಲಿನ ಸೀಟಿನಲ್ಲಿ ಕುಳಿತು ಸುರುಳಿಯಂತೆ ಅನಾವರಣಗೊಳ್ಳುತ್ತಾ ಸಾಗುವ ಭೂದೃಶ್ಯಗಳ ಸೊಬಗಿಗೆ ಸಾಕ್ಷಿಯಾಗುತ್ತಾ ಮುದಗೊಳ್ಳಬಹುದು.
- ಸಿಂಕ ತೇರಿ ಎಕ್ಸ್ ಪ್ರೆಸ್: ಇಟಲಿಯ ಪ್ರಖ್ಯಾತ ಸಿಂಕ ತೇರಿಯನ್ನು ಅನ್ವೇಷಿಸ ಬಯಸುವವರು ಈ ರೈಲು ಪ್ರಯಾಣವನ್ನು ತಪ್ಪಿಸಿಕೊಳ್ಳುವಂತೆಯೇ ಇಲ್ಲ. ಸಮುದ್ರದಂಡೆಯ ವರ್ಣರಂಜಿತ ಹಳ್ಳಿಗಳ ಮೂಲಕ ಲೆಗ್ಯೂರಿಯನ್ ಕರಾವಳಿ ಗುಂಟ ಸಾಗುವ ಈ ರೈಲು ಮೆಡಿಟರೇನಿಯನ್ ತೀರದ ವಿಸ್ಮಯದ ನೋಟಗಳನ್ನು ಲಭ್ಯವಾಗಿಸುತ್ತದೆ.
- ಗೋಲ್ಡನ್ ಪಾಸ್‌ಲೈನ್: ಸ್ವಿಟ್ಜರ್‌ಲೆಂಡ್ ಅನ್ವೇಷಿಸಲು ಬಯಸುವವರಿಗೆ ಮರೆಯಲಾಗದ ಪ್ರಯಾಣಾನುಭವ ನೀಡುವ ರೈಲು ಇದಾಗಿದೆ. ಮಾಂತ್ರೊ ಹಾಗೂ ಲೂಸಾ ನಡುವೆ ಸಂಚರಿಸುವ ಇದು ದ್ರಾಕ್ಷಿ ತೋಟಗಳು, ಸ್ವಿಸ್‌ನ ಗ್ರಾಮೀಣ ಪ್ರದೇಶಗಳು ಹಾಗೂ ಭವ್ಯ ಪರ್ವತಗಳ ನಡುವೆ ಸಾಗುತ್ತದೆ.
- ಯೂರೋಸ್ಟಾರ್: ಗಂಟೆಗೆ 300 ಕಿಮೀ ವೇಗದಲ್ಲಿ ಸಂಚರಿಸಬಲ್ಲ ಈ ಹೆಸರಾಂತ ರೈಲು ಇಂಗ್ಲಿಷ್ ಕಾಲುವೆ ಮೂಲಕ ಲಂಡನ್ ಅನ್ನು ಪ್ಯಾರಿಸ್ ಮತ್ತು ಬ್ರಸೆಲ್ಸ್ ಗೆ ಸಂಪರ್ಕಿಸುತ್ತದೆ. ಇದು ಕೇವಲ ವೇಗಕ್ಕಷ್ಟೇ ಹೆಸರಾದ ರೈಲಲ್ಲ. ಯೂರೊಪಿನ ಅತ್ಯಂತ ಚಲನಶೀಲ ಹಾಗೂ ಸಾಂಸ್ಕೃತಿಕ ಸಿರಿಯಿಂದ ತುಂಬಿದ ನಗರಗಳಾದ್ಯಂತ ಅನುಕೂಲಕರ ಪ್ರಯಾಣವನ್ನು ಲಭ್ಯವಾಗಿಸುತ್ತದೆ.
ಯೂರೊಪಿನ ನಿಸರ್ಗದ ಚೆಲುವು ಹಾಗೂ ಸಮೃದ್ಧ ಚರಿತ್ರೆಯನ್ನು ಅನುಕೂಲಕರವಾದ ರೀತಿಯಲ್ಲಿ ಅನುಭವಿಸಬಯಸುವ ಭಾರತೀಯ ಪ್ರವಾಸಿಗರಿಗೆ ‘ರೈಲ್ ಯೂರೊಪ್’ ಪ್ರಯಾಣವನ್ನು ಒಳಗೊಂಡ ವಿವಿಧ ಶ್ರೇಣಿಯ ಕಸ್ಟಮೈಸ್ಡ್ ಹಾಲಿಡೆ ಪ್ಯಾಕೇಜ್‌ಗಳನ್ನು ‘ವೀಣಾ ವರ್ಲ್ಡ್’ ರೂಪಿಸಿದೆ. ನಮ್ಮ ಗುಂಪು ಪ್ರವಾಸ ಯೋಜನೆಗಳು ಹೆಸರಾಂತ ರೈಲು ಮಾರ್ಗಗಳನ್ನು ಒಳಗೊಂಡಿದ್ದು, ಯೂರೊಪಿನ ರೈಲ್ವೆ ವ್ಯವಸ್ಥೆಯ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಜೊತೆಜೊತೆಗೇ ಹಲವೆಡೆಗೆ ಸುಸಜ್ಜಿತ ಸೌಕರ್ಯಗಳೊಂದಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತವೆ. ಗೋಲ್ಡನ್ ಪಾಸ್‌ಲೈನ್‌ನಲ್ಲಿ ಸ್ವಿಟ್ಜರ್‌ಲೆಂಡಿನ ಸುಂದರ ಪರ್ವತಗಳು ಹಾಗೂ ಸರೋವರಗಳ ಮೂಲಕ ಸಾಗಬಹುದು ಅಥವಾ ಲಂಡನ್, ಪ್ಯಾರಿಸ್ ಹಾಗೂ ಬೆಲ್ಜಿಯಂಗಳನ್ನು ಬೆಸೆಯುವ ಯೂರೊಸ್ಟಾರ್‌ನಲ್ಲಿ ಸುಖಾನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು. ಜೊತೆಗೆ, ಪ್ರತಿಯೊಂದು ಸ್ಥಳದ ಜೀವಂತಿಕೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಪರಿಣತ ಮಾರ್ಗದರ್ಶಿಗಳೂ ಇರುತ್ತಾರೆ.
ವೈಯಕ್ತಿಕತೆಯ ಅನುಭವಕ್ಕಾಗಿ ಹಂಬಲಿಸುವವರಿಗಾಗಿ ಕಸ್ಟಮೈಸ್ಡ್ ಹಾಲಿಡೇಸ್ ಪ್ರವಾಸ ಯೋಜನೆಗಳು ಇವೆ. ಇದರಲ್ಲಿ ಸಿಂಗಲ್-ಕಂಟ್ರಿ ಟ್ರೈನ್ ಪಾಸ್ ಹೊಂದುವ ಮೂಲಕ ಇಡೀ ದೇಶದಲ್ಲಿ ಪಯಣಿಸಬಹುದು ಅಥವಾ ಕಡಿಮೆ ಖರ್ಚಿನಲ್ಲಿ ಹೆಚ್ಚು ದೇಶಗಳ ಭೇಟಿ ಸಾಧ್ಯವಾಗುವಂತೆ ಅದನ್ನು ಹಲವು ದೇಶಗಳ ಪ್ರಯಾಣಕ್ಕೆ ಸಂಯೋಜನೆಗೊಳಿಸಿಕೊಳ್ಳಬಹುದು.
ರಾತ್ರಿ ಪ್ರಯಾಣ ಮಾಡಲು ಇಚ್ಛಿಸಿದರೆ ಯೂರೊಪಿನಲ್ಲಿ ಅದಕ್ಕಾಗಿ ಹಲವಾರು ರೈಲುಗಳಿದ್ದು, ವಿಶಿಷ್ಟ ಅನುಭವವನ್ನು ನಿಮ್ಮದಾಗಿಸಿಕೊಳ್ಳಬಹುದು. ಸುಸಜ್ಜಿತ ಕ್ಯಾಬಿನ್‌ಗಳು, ಸ್ಲೀಪರ್ ಕೋಚ್‌ಗಳು ಹಾಗೂ ಆರಾಮದಾಯಕ ಸೌಲಭ್ಯಗಳುಳ್ಳ ಮೊದಲ ದರ್ಜೆ ಕಂಪಾರ್ಟ್ ಮೆಂಟ್‌ಗಳನ್ನು ಇವು ಹೊಂದಿರುತ್ತವೆ. ಇವುಗಳಿಂದಾಗಿ ಕಡಿಮೆ ದರದಲ್ಲಿ ಸಂತಸದಾಯಕ ಪ್ರಯಾಣ ಸವಿಯಬಹುದು. ಪ್ರಯಾಣದಲ್ಲೇ ಹೆಚ್ಚಿನ ಕಾಲ ವ್ಯಯಿಸಲು ಹಾಗೂ ಹೋಟೆಲ್‌ಗಳ ವಾಸ್ತವ್ಯಕ್ಕೆ ಹೆಚ್ಚು ವೆಚ್ಚ ಮಾಡಲು ಬಯಸದವರಿಗಂತೂ ಇವು ಅತ್ಯಂತ ಸೂಕ್ತವಾಗಿರುತ್ತವೆ.
ಮಕ್ಕಳೊಂದಿಗೆ ಕುಟುಂಬ ಸಮೇತ ಪ್ರವಾಸವಾದರೆ ‘ಸ್ವಿಸ್ ಟ್ರ್ಯಾವೆಲ್ ಪಾಸ್’ ಭಾರಿ ಸೌಲಭ್ಯಗಳನ್ನು ಕೊಡಮಾಡುತ್ತದೆ. ಪೋಷಕರೊಂದಿಗೆ ಪ್ರಯಾಣಿಸುವ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ‘ಸ್ವಿಸ್ ರೈಲ್ ನೆಟ್ ವರ್ಕ್’ ನಲ್ಲಿ ಉಚಿತವಾಗಿ ತೆರಳಬಹುದು. ಇದು ಅಚ್ಚರಿಯ ಸಂಗತಿ ಹೌದಲ್ಲವೇ? ಈ ‘ಸ್ವಿಸ್ ಪಾಸ್’ ಎಂಬುದು ಸ್ಟಿಟ್ಜರ್‌ಲೆಂಡಿನ ಎಲ್ಲಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೂ ಅನ್ವಯವಾಗುತ್ತದೆ. ಅಷ್ಟೇ ಅಲ್ಲದೆ, ವಸ್ತು ಸಂಗ್ರಹಾಲಯಗಳ ಭೇಟಿ ಹಾಗೂ ಕೇಬಲ್ ಕಾರುಗಳ ಬಳಕೆಗೂ ಇದನ್ನು ಉಪಯೋಗಿಸಬಹುದು. ಜೊತೆಗೆ, ಇನ್ನು ಕೆಲವು ರಿಯಾಯಿತಿಗಳನ್ನು ಕೂಡ ಇದು ನೀಡುತ್ತದೆ. ನಿಮ್ಮ ಲಗೇಜನ್ನು ಬದಿಗಿರಿಸಿ ಬರಿಗೈಯಲ್ಲಿ ಸುತ್ತಾಡಬೇಕೆಂದರೆ, ನೀವು ಬಯಸುವ ಸ್ಥಳಕ್ಕೆ ಅದನ್ನು ತಲುಪಿಸುವ ವ್ಯವಸ್ಥೆಯೂ ಇದೆ.
ಎಲ್ಲಕ್ಕಿಂತ ಅತ್ಯುತ್ತಮ ಯಾವುದು ಗೊತ್ತೆ? ಯೂರೊಪಿನಲ್ಲಿ ರೈಲುಗಳು ತಮ್ಮ ಸಮಯಪಾಲನೆ ಹಾಗೂ ಅಚ್ಚುಕಟ್ಟುತನಕ್ಕೆ ಹೆಸರಾಗಿದ್ದು, ಬಹಳಷ್ಟು ರೈಲುಗಳು ವಿಮಾನ ನಿಲ್ದಾಣಗಳವರೆಗೆ ಸಂಪರ್ಕ ಮಾರ್ಗ ಹೊಂದಿರುತ್ತವೆ. ಒಂದಿಷ್ಟೂ ಸಮಯ ಪೋಲಾಗಲು ಆಸ್ಪದ ನೀಡದೆ ನೇರವಾಗಿ ಏರ್ ಪೋರ್ಟ್ ನಿಂದಲೇ ನಿಮ್ಮ ಯೂರೊಪಿನ ಅನ್ವೇಷಕ ಪಯಣ ಆರಂಭಿಸಬಹುದು.
Post your Comment
Please let us know your thoughts on this story by leaving a comment.